More

    ಭೀಮಾ ಪ್ರವಾಹ ಮತ್ತಷ್ಟು ತ್ರಾಸ: 24 ಗಂಟೆ ಕಟ್ಟೆಚ್ಚರ

    ಕಲಬುರಗಿ/ವಿಜಯಪುರ : ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಮತ್ತು ನದಿ ಪಾತ್ರದಿಂದ ಭೀಮಾ ನದಿಗೆ 8.20 ಲಕ್ಷ ಕ್ಯೂಸೆಕ್ ನೀರು ಹರಿಯುವಿಕೆ ಭಾನುವಾರವೂ ಮುಂದುವರಿದ್ದು, ಹಿನ್ನೀರು ಮತ್ತಷ್ಟು ಹಳ್ಳಿಗಳಿಗೆ ಹೊಕ್ಕಿದೆ. ಅಫಜಲಪುರವನ್ನು ಭೀಮೆ ಪ್ರವೇಶಿಸಿದ್ದು, 80ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಈ ಮಧ್ಯೆ ಸೇನಾಪಡೆ ಸೇರಿ ರಕ್ಷಣಾ ಕಾರ್ಯಪಡೆಗಳು ಉಡಚಣದಲ್ಲಿ ಕಾರ್ಯಾಚರಣೆ ನಡೆಸಿ 650ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿವೆ.

    ಪ್ರವಾಹಪೀಡಿತ ಅಫಜಲಪುರ, ಕಲಬುರಗಿ, ಜೇವರ್ಗಿ, ಚಿತ್ತಾಪುರ, ಶಹಾಬಾದ್ ತಾಲೂಕುಗಳಲ್ಲಿ ಗಂಭೀರ ಸ್ಥಿತಿ ಮುಂದುವರಿದಿದ್ದು, 126 ಹಳ್ಳಿಗಳು ಜಲಾವೃತಗೊಂಡಿವೆ. ಶಿರವಾಳ ಬಳಿ ಸೇತುವೆ ಮುಳುಗಡೆ ಆಗಿದ್ದರಿಂದ ಹೊಸೂರು ಮಾರ್ಗವಾಗಿ ಇಂಡಿ ಮತ್ತು ಮಹಾರಾಷ್ಟ್ರಕ್ಕೆ ಹೋಗುವ ಸಂಪರ್ಕ ಕಡಿತಗೊಂಡಿದೆ. ಶಿರವಾಳ ಸೇತುವೆ ನೀರಿನಲ್ಲಿ ಬಸ್ ಸಿಲುಕಿದ್ದರಿಂದ ಕೆಲಕಾಲ ಆತಂಕದ ಸ್ಥಿತಿ ಉಂಟಾಗಿತ್ತು. ದೇವಲಗಾಣಗಾಪುರ ದತ್ತ ದೇವಾಲಯ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ.

    ಹಾಗರಗುಂಡಗಿ, ಉಡಚಣ, ಹಟ್ಟಿ, ದುದ್ದಣಗಿ, ಅಳ್ಳಗಿ ಸಂಪೂರ್ಣ ಮುಳುಗಿದ್ದು, ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಜಲಾವೃತಗೊಂಡಿದ್ದ ಭೀಮಾ ಪ್ರವಾಹ ಮತ್ತಷ್ಟು ತ್ರಾಸ: 24 ಗಂಟೆ ಕಟ್ಟೆಚ್ಚರಬಳ್ಳುಂಡಗಿಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯನ್ನು ದೋಣಿಯಲ್ಲಿ ಕರೆತಂದು ಅಫಜಲಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂಚೋಳಿ ತಾಲೂಕಿನ ಎತ್ತಪೋತ ಜಲಪಾತ ವೀಕ್ಷಿಸಲು ಹೋಗಿದ್ದಾಗ ನೀರು ಒಮ್ಮೆಲೆ ಹೆಚ್ಚಿದ್ದರಿಂದ ಮೂವರು ಪ್ರವಾಸಿಗರು ಸಿಕ್ಕು ಬಿದ್ದಿದ್ದಾರೆ. ಅವರಲ್ಲಿ ಒಬ್ಬ ಈಜಿ ದಡ ಸೇರಿದ್ದು, ಇನ್ನಿಬ್ಬರ ರಕ್ಷಣಾ ಕಾರ್ಯ ಮುಂದುವರಿದಿದೆ. ಶಹಾಬಾದ್ ತಾಲೂಕಿನ ತೊನಸನಳ್ಳಿಯಲ್ಲಿ ಜಮೀನಿಗೆ ನೀರು ಹೊಕ್ಕು ಕೃಷಿ ಹೊಂಡ ತುಂಬಿದ್ದರಿಂದ ಮುಳುಗಿ ಕುರಿ ಕಾಯಲು ಹೋಗಿದ್ದ ನವೀನ್ (14) ಮೃತಪಟ್ಟಿದ್ದಾನೆ. ಭಾನುವಾರ ಸಂಜೆಯಿಂದ ಮಹಾರಾಷ್ಟ್ರದ ಉಜನಿ ಮತ್ತು ವೀರಭಟ್ಕಳ ಜಲಾಶಯಗಳಿಂದ ಬರುವ ನೀರು ಕಡಿಮೆಯಾಗಿದೆ. ಹೀಗಾಗಿ ನಾಳೆಯಿಂದ ಪ್ರವಾಹ ಇಳಿಮುಖಗೊಳ್ಳುವ ಸಾಧ್ಯತೆ ಇದೆ.

    ಹೆಲಿಕಾಪ್ಟರ್ ಬಳಕೆ: ಪ್ರವಾಹದಿಂದ ಜನರನ್ನು ಸಂಕಷ್ಟದಿಂದ ಪಾರು ಮಾಡಲು ಏನೆಲ್ಲ ಕ್ರಮ ಕೈಗೊಂಡಿರುವ ಕಲಬುರಗಿ ಜಿಲ್ಲಾಡಳಿತ ತುರ್ತು ಸೇವೆಗೆ ಎರಡು ಹೆಲಿಕಾಪ್ಟರ್​ಗಳನ್ನು ಕಾದಿರಿಸಿದೆ. ಆ.13ರಿಂದ 18ರವರೆಗೆ ಸುರಿದ ಭಾರಿ ಮಳೆ ಮತ್ತು ಭೀಮಾ ಪ್ರವಾಹದಿಂದ ಉಂಟಾದ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕೈಗೊಂಡಿದೆ. ಮುಂದಿನ 24 ಗಂಟೆಯಲ್ಲಿ ಹೆಚ್ಚಿನ ನೀರು ಬರುವ ಸಾಧ್ಯತೆ ಇದ್ದುದ್ದರಿಂದ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ವಿವರಿಸಿದ್ದಾರೆ.

    ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ ಬೆಳೆ ನಾಶವಾಗಿ ಜನ ಸಂಕಷ್ಟಕ್ಕೆ ಒಳಗಾಗಿದ್ದು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸ ಆರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚಿನ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಸಂತ್ರಸ್ತರ ನೆರವಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ.
    | ಬಿ.ಎಸ್.ಯಡಿಯೂರಪ್ಪ ಸಿಎಂ (ಶಿವಮೊಗ್ಗದಲ್ಲಿ)

    ಜಲಾವೃತ ಮನೆಯಲ್ಲಿದ್ದ ಗರ್ಭಿಣಿಯರ ರಕ್ಷಣೆ
    ವಿಜಯಪುರ ಜಿಲ್ಲೆಯಲ್ಲಿ ಭೀಮೆಯ ಪ್ರವಾಹ ಆವರಿಸಿದ್ದು, ಕಳೆದ ಮೂರು ದಿನಗಳಿಂದ ಸಿಂದಗಿ ತಾಲೂಕಿನ ಕುಮಸಗಿ ಗ್ರಾಮ ಜಲಾವೃತಗೊಂಡಿದೆ. ಗ್ರಾಮದಲ್ಲಿ ಭೀಮಾ ಪ್ರವಾಹ ಮತ್ತಷ್ಟು ತ್ರಾಸ: 24 ಗಂಟೆ ಕಟ್ಟೆಚ್ಚರಜಲಾವೃತಗೊಂಡ ಮನೆಯಲ್ಲೇ ಸಿದ್ದಮ್ಮ ಮಾರದ ಹಾಗೂ ಶ್ರೀದೇವಿ ಪೂಜಾರಿ ಎಂಬ ಗರ್ಭಿಣಿಯರಿಬ್ಬರು ಪರದಾಡುತ್ತಿದ್ದರು. ಕುರಿತು ‘ದಿಗ್ವಿಜಯ ನ್ಯೂಸ್’ನಲ್ಲಿ ಬೆಳಗ್ಗೆಯಿಂದ ನಿರಂತರವಾಗಿ ವರದಿ ಪ್ರಕಟಿಸಲಾಗಿತ್ತು. ವರದಿ ಬಳಿಕ ಸ್ಥಳಕ್ಕೆ ದೇವರ ಹಿಪ್ಪರಗಿ ತಹಸೀಲ್ದಾರ್ ಬಿ.ಎಸ್. ಕಡಕಭಾವಿ ನೇತೃತ್ವದ ಅಧಿಕಾರಿಗಳ ತಂಡ ಹಾಗೂ ಎನ್​ಡಿಆರ್​ಎಫ್ ಸಿಬ್ಬಂದಿ ತೆರಳಿ ಗರ್ಭಿಣಿಯರನ್ನು ಸಿಂದಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ದಿಗ್ವಿಜಯ ನ್ಯೂಸ್ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಭೀಮಾ ಪ್ರವಾಹ ಮತ್ತಷ್ಟು ತ್ರಾಸ: 24 ಗಂಟೆ ಕಟ್ಟೆಚ್ಚರ

    ದೀಪ ಬೆಳಗಿಸಿದ ಮಹಿಳೆ: ದೇವಣಗಾಂವ ಗ್ರಾಮದ ಮಹಿಳೆಯೊಬ್ಬರು ಪ್ರವಾಹದಲ್ಲಿ ಮುಳುಗಿರುವ ಮನೆಯಲ್ಲಿ ದೀಪ ಬೆಳಗಿಸುವ ಮೂಲಕ ಭಕ್ತಿ ಪರಾಕಾಷ್ಟೆ ಮೆರೆದಿದ್ದಾರೆ. ಮನೆಯಲ್ಲಿ ಘಟಸ್ಥಾಪನೆ ಮಾಡಿ ನವರಾತ್ರಿಯನ್ನು ನಿರ್ವಿಘ್ನವಾಗಿ ನೆರವೇರಿಸುತ್ತಿದ್ದಾರೆ.

    ಸಚಿವೆ ಜೊಲ್ಲೆ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಭಾನುವಾರ ಅನಾರೋಗ್ಯದ ಮಧ್ಯೆಯೂ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ಅಗರಖೇಡದಲ್ಲಿ ಸಚಿವೆ ವಿರುದ್ಧ ಜನಾಕ್ರೋಶ ವ್ಯಕ್ತವಾಯಿತು.

    ರಾಜ್ಯದಲ್ಲಿ ಅ.20ರಿಂದ ಭಾರೀ ಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts