More

    ರಾಜ್ಯದಲ್ಲಿ ಅ.20ರಿಂದ ಭಾರಿ ಮಳೆ

    ಬೆಂಗಳೂರು: ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಲಪ್ರಳಯ ಉಂಟಾಗಿರುವ ಬೆನ್ನಲ್ಲೇ ಮತ್ತೆ ಮಳೆ ಭೀತಿ ಎದುರಾಗಿದೆ.

    ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ಅ.20ರಿಂದ ಮುಂದಿನ 4 ದಿನ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಅ.21ರಂದು ಯೆಲ್ಲೋ ಅರ್ಲಟ್​ ಇದ್ದರೆ ಅ.22ರಿಂದ ಮುಂದಿನ 48 ಗಂಟೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಆರೆಂಜ್​ ಅರ್ಲಟ್​ ಘೋಷಿಸಲಾಗಿದೆ.

    ಮತ್ತೆ ಪ್ರವಾಹ ಭೀತಿ: ವಾರದಿಂದ ದಶಕದಲ್ಲೇ ಅತ್ಯಧಿಕ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದ ಬಹುತೇಕ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಕೆಲ ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಲ್ಲದೆ, ಮಹಾರಾಷ್ಟ್ರದಿಂದ ಭಾರಿ ಪ್ರಮಾಣದಲ್ಲಿ ನೀರು ಹರಿಬಿಟ್ಟಿರುವುದರಿಂದ ನದಿ ತೀರದ ಗ್ರಾಮಗಳು ಈಗಾಗಲೇ ಮುಳುಗಡೆಯಾಗಿದೆ. ಇದೀಗ ಮತ್ತೆ ಅದೇ ಆತಂಕ ಶುರುವಾಗಿದೆ. ರಾಯಚೂರು ಮತ್ತು ಯಾದಗಿರಿಯಲ್ಲಿ ಅ.20ರಂದು ಹಾಗೂ ಕೊಪ್ಪಳದಲ್ಲಿ ಅ.21ರಂದು ಯೆಲ್ಲೋ ಅಲರ್ಟ್​​ ಘೋಷಿಸಲಾಗಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ವಿಜಯಪುರದಲ್ಲಿ ಅ.22ರಿಂದ ಮುಂದಿನ 48 ಗಂಟೆ ಯೆಲ್ಲೋ ಅಲರ್ಟ್​​ ಇದ್ದರೆ ಬೀದರ್​ ಹಾಗೂ ಕಲಬುರಗಿಯಲ್ಲಿ ಅ.22ರಂದು ಆರೆಂಜ್​ ಅಲರ್ಟ್​​ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

    ದಕ್ಷಿಣ ಒಳನಾಡಿನ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಅ.21ರಿಂದ ಮುಂದಿನ 3 ದಿನ ಹಾಗೂ ಶಿವಮೊಗ್ಗದಲ್ಲಿ ಅ.21ರಂದು ಯೆಲ್ಲೋ ಅಲರ್ಟ್​​ ಇರಲಿದೆ. ಕೆಲ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್​.ಪಾಟೀಲ ಮಾಹಿತಿ ನೀಡಿದ್ದಾರೆ.

    ಗಾಯಗೊಂಡ ಲಕ್ಷ್ಮೀ ಫೋಟೋ ಹಾಕಿ ಅಸಮಾಧಾನ ಹೊರಹಾಕಿದ್ರು ನಟ ದರ್ಶನ್​ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts