More

    ಹೆದರಬೇಡಿ ನಾವಿದ್ದೇವೆ

    ಯಾದಗಿರಿ: ಕರೊನಾ ವೈರಸ್ನಿಂದ ಕೆಲಸವಿಲ್ಲದೆ ಬೆಂಗಳೂರು ಸೇರಿ ಬೇರೆ ರಾಜ್ಯಗಳಿಗೆ ಗುಳೆ ಹೋದ ಜನತೆ ವಾಪಸ್ ತಮ್ಮೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ನಗರಾದ್ಯಂತ ಜೆಡಿಎಸ್ ಮುಖಂಡ ಶರಣಗೌಡ ಕಂದಕೂರ ಅಭಿಮಾನಿ ಬಳಗದಿಂದ ಯುವ ಮುಖಂಡ ಮಲ್ಲು ಮಾಳಿಕೇರಿ ನೇತೃತ್ವದಲ್ಲಿ ಉಚಿತ ಅನ್ನ ಸಂತರ್ಪಣೆ ಮಾಡಲಾಯಿತು.

    ಜಿಲ್ಲೆಯ ಗಡಿ ಪ್ರದೇಶಕ್ಕೆ ಟೆಂಪೋ, ಟಂಟಂಗಳ ಮೂಲಕ ನಿದ್ದೆಗೆಟ್ಟು ಬಂದಳಿದ ಜನತೆಗೆ ಪಲಾವ್ ಹಾಗೂ ಶುದ್ಧ ಕುಡಿವ ನೀರು ವಿತರಿಸಿದ ಕಾರ್ಯಕರ್ತರು ಸಂತ್ರಸ್ತರು ಇರುವ ಸ್ಥಳಗಳಿಗೆ ತೆರಳಿ ಆಹಾರ ವಿತರಿಸಿದರು. ಈ ವೇಳೆ ಮಾತನಾಡಿದ ಮಾಳಿಕೇರಿ, ದೊಡ್ಡದೊಡ್ಡ ನಗರಗಳಿಗೆ ಗುಳೆ ಹೋದ ಜನರ ಪರಿಸ್ಥಿತಿಯನ್ನು ನಾನು ಹತ್ತಿರದಿಂದ ಅರಿತಿದ್ದೇನೆ ಎಂದರು.

    ಕರೊನಾ ಹಾವಳಿಯಿಂದ ಮಾಡಲು ಕೆಲಸವಿಲ್ಲದೆ, ಆತಂಕಪಟ್ಟುಕೊಂಡು ಬಂದ ಜನರ ನೆರವಿಗೆ ನಮ್ಮ ಸಂಘ ಧಾವಿಸುತ್ತಿದೆ. ಇಂದು ಸುಮಾರು 300ಕ್ಕೂ ಹೆಚ್ಚು ಜನತೆಗೆ ಪೊಟ್ಟಣಗಳಲ್ಲಿ ಆಹಾರ ವಿತರಣೆ ಮಾಡಲಾಗಿದ್ದು, ಏ. 14ರ ವರೆಗೆ ನಿರಂತರವಾಗಿ ಈ ಕೈಂಕರ್ಯ ನಡೆಯುತ್ತದೆ ಎಂದು ಹೇಳಿದರು.

    ಅಲ್ಲದೆ ಯಾದಗಿರಿಯ ಆಯುಷ್ ಆಸ್ಪತ್ರೆ ಆವರಣದಲ್ಲಿ ಸ್ಕ್ರೀನಿಂಗ್ಗೆ ಬರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕಿದೆ. ಇನ್ನೂ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಮಾರಕ ಕರೊನಾ ವೈರಸ್ ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಬಣ್ಣಿಸಿದರು. ಆಂಜನೇಯ ರಾಂಪುರ, ಬಸವರಾಜ, ಪ್ರಭು ಯಡ್ಡಳ್ಳಿ, ದೀಪಕ್ ಒಡೆಯರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts