More

    ರಾಜ್ಯದಲ್ಲಿ ಕಾಲರಾತಂಕ ಜತೆ ಬಿಸಿಲಾಘಾತ

    ಬೆಂಗಳೂರು: ರಾಜ್ಯದಲ್ಲಿ ಕಾಲಾರ ಆತಂಕದ ಜತೆಗೆ ತೀವ್ರ ಬಿಸಿಲಾಘಾತ ಹೆಚ್ಚಾಗಿದೆ. ಬಿಸಿಲಿನ ತಾಪದಿಂದಾಗಿ ರಾಜ್ಯದಲ್ಲಿ ಅನಾರೋಗ್ಯ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಏರುತ್ತಲೇ ಇದ್ದು, ಈವರೆಗೆ 614 ಶಾಖಾಘಾತ ಪ್ರಕರಣಗಳು ವರದಿಯಾಗಿವೆ.

    ತೀವ್ರತರ ಶಾಖದಿಂದ ಚರ್ಮದ ಸಮಸ್ಯೆ(ದದ್ದುಗಳು), ಸ್ನಾಯು ಸೆಳೆತದಂತಹ ಪ್ರಕರಣ ದೃಢಪಟ್ಟಿದ್ದು, ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಶಾಖಾಘಾತ ಪ್ರಕರಣ ವರದಿಯಾಗಿವೆ. ಈವರೆಗೆ 398 ದದ್ದು ಪ್ರಕರಣ ದೃಢಪಟ್ಟಿವೆ. 141 ಜನರಲ್ಲಿ ಸ್ನಾಯು ಸೆಳತ ಸಮಸ್ಯೆ ಕಾಣಿಸಿಕೊಂಡಿದೆ. 74 ಮಂದಿ ಶಾಖದಿಂದ ಬಳಲಿಕೆಗೆ ಒಳಗಾಗಿದ್ದಾರೆ. ಒಬ್ಬರು ಹೀಟ್ ಸ್ಟ್ರೋಕ್‌ಗೆ ಒಳಗಾಗಿದ್ದಾರೆ.

    ಬಾಗಲಕೋಟೆ ಹಾಗೂ ಚಿತ್ರದುರ್ಗದಲ್ಲಿ ತಲಾ 50 ಶಾಖಾಘಾತ ಪ್ರಕರಣ ದೃಢಪಟ್ಟಿವೆ. ಕಲಬುರಗಿ -39, ರಾಯಚೂರು -38, ಯಾದಗಿರಿ- 35, ಬೆಳಗಾವಿ -32, ದಕ್ಷಿಣ ಕನ್ನಡ -32, ದಾವಣಗೆರೆ -28, ಕೊಪ್ಪಳ -27, ಮೈಸೂರು -27, ವಿಜಯಪುರ -25, ಬೀದರ್-24, ಉಡುಪಿ -22, ಮಂಡ್ಯ -21, ವಿಜಯನಗರ ಜಿಲ್ಲೆಯಲ್ಲಿ 21ಕ್ಕೂ ಅಧಿಕ ಪ್ರಕರಣ ಖಚಿತಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಪ್ರಕರಣಗಳ ಸಂಖ್ಯೆ 20 ರೊಳಗೆ ಇದೆ.

    ಮುನ್ನೆಚ್ಚರಿಕೆ ಅಗತ್ಯ: ಬಿಸಿಗಾಳಿಯಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ, ಶಾಖಾಘಾತ ಸಾಧ್ಯತೆ ಹೆಚ್ಚು. ಆದ್ದರಿಂದ ಆಗಾಗ ನೀರು ಕುಡಿಯಬೇಕು. ತಾಪಮಾನ ಹೆಚ್ಚಳದ ಕಾರಣ ಮಕ್ಕಳು, ವೃದ್ಧರು, ಗರ್ಭಿಣಿಯರು, ಹೃದಯದ ತೊಂದರೆ ಸೇರಿ ವಿವಿಧ ಅನಾರೋಗ್ಯ ಸಮಸ್ಯೆ ಇರುವವರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ತಾಜಾ ಹಣ್ಣುಗಳ ಸೇವನೆ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಬಿಸಿಲು ಹೆಚ್ಚಿರುವ ಸಮಯದಲ್ಲಿ ಮನೆಯಿಂದ ಹೊರ ಹೋಗುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts