More

    ಸಾವಿಗೂ ಮುನ್ನ ಕೈ ಬೆಸೆದ ವೃದ್ಧ ದಂಪತಿ: ಮನಕಲಕುವ ಫೋಟೋ ನೋಡಿ ನೆಟ್ಟಿಗರಿಂದ ಕರೊನಾಗೆ ಹಿಡಿ ಶಾಪ!​

    ಲಂಡನ್​: ಮದುವೆಯಾಗಿ 70 ವರ್ಷಗಳು ಒಟ್ಟಿಗೆ ಜೀವನ ನಡೆಸಿದ್ದ ವೃದ್ಧ ದಂಪತಿ ಮಹಾಮಾರಿ ಕರೊನಾದಿಂದ ಮೃತಪಟ್ಟಿದ್ದು, ಸಾವಿಗೂ ಮುನ್ನ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡಿರುವ ಫೋಟೋ ಮನಕಲಕುವಂತಿದೆ. ಮದುವೆಯಿಂದ ಸಾವಿನವರೆಗೂ ಒಟ್ಟಿಗೆ ಪ್ರಯಾಣಿಸಿದ ಹಿರಿಯ ಜೀವಿಗಳ ಫೋಟೋ ನೋಡಿದ ನೆಟ್ಟಿಗರು ಕಂಬನಿ ಮಿಡಿಯುವ ಜತೆಗೆ ಕರೊನಾವನ್ನು ಶಪಿಸಿದ್ದಾರೆ.

    ವೃದ್ಧ ದಂಪತಿ ಮಾರ್ಗರೆಟ್​ ಮತ್ತು ಡೆರೆಕ್​ ಫರ್ತ್ (ಇಬ್ಬರಿಗೂ 91 ವರ್ಷ ವಯಸ್ಸು) ಇಂಗ್ಲೆಂಡ್​ ಟ್ರಾಫೋರ್ಡ್​ ಜನರಲ್​ ಹಾಸ್ಟಿಟಲ್​ನಲ್ಲಿ ಮೃತಪಟ್ಟಿದ್ದಾರೆ. ಸಾವಿಗೂ ಮುನ್ನ ಒಬ್ಬರಿಗೊಬ್ಬರು ನೋಡಿಕೊಳ್ಳುತ್ತಾ, ಕೈ ಬೆಸೆಯುತ್ತಾ ಕೊನೆಗೆ ಒಟ್ಟಿಗೆ ಕೊನೆಯುಸಿರೆಳೆದಿದ್ದಾರೆ. ​

    ಇದನ್ನೂ ಓದಿರಿ: ಚಳಿಯೆಂದು 500 ರೂಪಾಯಿಯ ನೂರಾರು ನೋಟು ಸುಟ್ಟ! ಕಸದ ರಾಶಿಯ ಮೇಲೆ ನೆಮ್ಮದಿಯಿಂದ ಮಲಗಿದ!

    ದಂಪತಿ ಪರ್ಟಿಂಗ್ಟನ್​ನ ನಿವಾಸಿಗಳು. ಕರೊನಾ ಪಾಸಿಟಿವ್​ ಬಂದಾಗ ಮಾರ್ಗರೇಟ್​ರನ್ನು ವೈಥನ್‌ಶೇವ್ ಆಸ್ಪತ್ರೆಗೆ ಆರಂಭದಲ್ಲಿ ದಾಖಲಿಸಲಾಗಿತ್ತು. ಆ ಬಳಿಕ ಟ್ರಾಫೋರ್ಡ್​ ಜನರಲ್​ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇದಾದ ಬಳಿಕ ಡೆರೆಕ್​ ಫರ್ತ್​ಗೂ ಕರೊನಾ ಪಾಸಿಟಿವ್​ ಆಗಿ ವೈಥನ್‌ಶೇವ್ ಆಸ್ಪತ್ರೆಗೆ ದಾಖಲಿಸಿ, ನಂತರ ಅವರನ್ನು ಸಹ ಟ್ರಾಫೋರ್ಡ್​ ಜನರಲ್​ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇಬ್ಬರು ಹೆಚ್ಚು ದಿನ ಬದುಕುವುದಿಲ್ಲ ಎಂದು ಗೊತ್ತಾದ ಬಳಿಕ ದಂಪತಿ ಇಬ್ಬರನ್ನು ಒಂದೇ ಕಡೆ ಸೇರಿಸಲಾಯಿತು.

    ಸಾವಿಗೂ ಮುನ್ನ ಕೈ ಬೆಸೆದ ವೃದ್ಧ ದಂಪತಿ: ಮನಕಲಕುವ ಫೋಟೋ ನೋಡಿ ನೆಟ್ಟಿಗರಿಂದ ಕರೊನಾಗೆ ಹಿಡಿ ಶಾಪ!​

    ದಂಪತಿಯ ಮಗಳಾದ ಬಾರ್ಬಾರ ಸ್ಮಿತ್​ ಮಾತನಾಡಿ, ಡೆರೆಕ್ ಅವರು ಮಾರ್ಗರೆಟ್‌ ಬಳಿ ಹೋದಾಗ ‘ನೀವು ಎಲ್ಲಿದ್ದೀರಿ? ಎಂದು ಅಚ್ಚರಿಯಿಂದ ಪ್ರಶ್ನಿಸಿದ್ದರು. ಬಳಿಕ ಇಬ್ಬರು ಒಟ್ಟಿಗೆ ಇರುವುದು ಹೊಸ ಉತ್ತೇಜನ ನೀಡಿತ್ತು. ಒಬ್ಬರೊನೊಬ್ಬರು ನೋಡಿ ನೋವಲ್ಲು ಖುಷಿಪಡುತ್ತಿದ್ದರು. ಆದರೆ, ಆ ಖುಷಿ ಹೆಚ್ಚಿಗೆ ದಿನ ಉಳಿಯಲಿಲ್ಲ ಎಂದು ಸ್ಮಿತ್​ ತಿಳಿಸಿದ್ದಾರೆ.

    ಡೆರೆಕ್​ ಜನವರಿ 31ರಂದು ಮೃತಪಟ್ಟರೆ, ಮಾರ್ಗರೇಟ್​ ಮೂರು ದಿನಗಳ ಬಳಿಕ ಸಾವಿಗೀಡಾದರು. ಇಬ್ಬರು ಸಹ ಅನಾರೋಗ್ಯದಿಂದಾಗಿ ಆಸ್ಪತ್ರಗೆ ದಾಖಲಾಗಿದ್ದರು. ಆದರೆ, ಕೆಲವು ದಿನಗಳ ಬಳಿಕ ಇಬ್ಬರಲ್ಲೂ ಕರೊನಾ ಪಾಸಿಟಿವ್​ ಬಂದಿತ್ತು. ಕೊನೆಗೆ ಚಿಕಿತ್ಸೆ ಫಲಿಸದೇ ಇಬ್ಬರು ಒಟ್ಟಿಗೆ ಇಹಲೋಕವನ್ನು ತ್ಯಜಿಸಿದ್ದಾರೆ.

    ಇದನ್ನೂ ಓದಿರಿ: ತಂಗಿಯ ಮದುವೆಗೆ ಮೃತಪಟ್ಟ ತಂದೆಯನ್ನು ಕರೆತಂದ ಅಕ್ಕ- ಸಹೋದರಿ ಪ್ರೀತಿಗೆ ವಿವಾಹ ಮಂಟಪದಲ್ಲಿ ಕಣ್ಣೀರಧಾರೆ

    ಮಾರ್ಗರೆಟ್​ ಮತ್ತು ಡೆರೆಕ್​ ಫರ್ತ್ 1950ರ ಮೇನಲ್ಲಿ ವಿವಾಹವಾಗಿದ್ದರು. ಪರ್ಟಿಂಗ್ಟನ್​ನಲ್ಲೇ ಹೆಚ್ಚು ಕಾಲ ನೆಲೆಸಿದ್ದರು. ಮಾರ್ಗರೇಟ್ ಯಂತ್ರಶಾಸ್ತ್ರಜ್ಞರಾಗಿ ತರಬೇತಿ ಪಡೆದು, ನಂತರ ಟ್ರಾಫೋರ್ಡ್​ನ ಬ್ರಾಡೋಕ್ ಶಾಲೆಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿದರು. ಡೆರೆಕ್ ಆರಂಭದಲ್ಲಿ ಕಟುಕನಾಗಿದ್ದನು. ಆನಂತರ ಅಂಗಡಿಯವನಾಗಿ ತನ್ನ ಕೆಲಸದ ಜೀವನವನ್ನು ಮುಗಿಸಿದ್ದಾರೆ. ದಂಪತಿಗೆ 5 ಮಕ್ಕಳಿದ್ದು, 11 ಮೊಮ್ಮಕ್ಕಳಿದ್ದಾರೆ. ದೊಡ್ಡ ಕುಟುಂಬವನ್ನು ಬಿಟ್ಟು ಸಾವಿನಲ್ಲೂ ದಂಪತಿ ಒಟ್ಟಿಗೆ ಪ್ರಯಾಣಿಸಿದ್ದಾರೆ. (ಏಜೆನ್ಸೀಸ್​)

    ತುಂಬಿದ ಶಾಲೆಯಲ್ಲಿ ಮಕ್ಕಳ ಮುಂದೆ ಹಸ್ತಮೈಥುನ ಮಾಡಿ, ವಿಡಿಯೋ ಹರಿಬಿಟ್ಟ ಶಿಕ್ಷಕಿ..!

    ಛೇ, ಅದೆಂಥ ಅಸಹ್ಯ ಮಾತು ಹೇಳಿಬಿಟ್ಟೆ? ನೊಂದ ಪ್ರಿಯತಮೆ ಸತ್ತೇ ಹೋದಳು!

    ಯುವಕನ ಸ್ಟೇಟಸ್​ ನೋಡಿ ಮನೆಗೆ ಬಂದವರಿಗೆ ಕಾದಿತ್ತು ಶಾಕ್​! ಮೊಬೈಲ್​ನಲ್ಲಿದಿಯಾ ಆ ರಹಸ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts