More

    ಗುಡಿಸಲುಮುಕ್ತ ರಾಜ್ಯ ನಿರ್ಮಾಣ

    ಹಾರೋಹಳ್ಳಿ :  ರಾಜ್ಯವನ್ನು ಗುಡಿಸಲುಮುಕ್ತ ಮಾಡುವುದು ಬಿಜೆಪಿ ಸರ್ಕಾರದ ಗುರಿಯಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
    ಮರಳವಾಡಿ ಹೋಬಳಿಯ ಗುತ್ತಲುಹುಣಸೆ ಗ್ರಾಮದಲ್ಲಿ ಸೋಮವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ಒಂದು ಗ್ರಾಪಂಗೆ 35 ಮನೆಗಳನ್ನು ಮಂಜೂರು ಮಾಡಿದ್ದು, ಜತೆಗೆ ಒಬ್ಬೊಬ್ಬ ಶಾಸಕರಿಗೆ 35 ಮನೆಗಳನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರವಾಗಿ ಅದನ್ನು ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದರು.
    1,80,000 ಮನೆಗಳನ್ನು ಮಂಜೂರು ಮಾಡಿದ್ದು, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ವರದಿ ನೀಡುವಂತೆ 4 ತಿಂಗಳ ಹಿಂದೆಯೇ ಅಧಿಕಾರಿಗಳಿಗೆ ಸೂಚಿಸಿದ್ದರೂ, ಶೇ.50 ಅಧಿಕಾರಿಗಳು ವರದಿ ನೀಡಿಲ್ಲ ಎಂದರು.

    ಅಭಿವೃದ್ಧಿಗೆ ಶಕ್ತಿ ತುಂಬಿ
    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಜನಪರ ಕೆಲಸಗಳು ನಡೆಯುತ್ತಿದ್ದರೂ, ವಿರೋಧ ಪಕ್ಷದವರು ಅನವಶ್ಯಕವಾಗಿ ಟೀಕೆ ಮಾಡುವುದನ್ನು ಬಿಡಬೇಕು. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಬದಲಾಗಿ ಅಭಿವೃದ್ಧಿಗೆ ಶಕ್ತಿ ತುಂಬಿ ಎಂದು ಹೇಳಿದರು.

    ಸಿ.ಡಿ.ಬೋಗಸ್, ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ
    ಸಚಿವ ಸಂಪುಟ ವಿಚಾರವಾಗಿ ಬಿಜೆಪಿಯಲ್ಲಿ ಯಾವುದೇ ಬಂಡಾಯವಿಲ್ಲ. ಒಂದು ಸಣ್ಣ ಮನೆಯಲ್ಲೇ ಜಗಳವಿರುತ್ತದೆ. ಹಾಗೇ ನಮ್ಮದು ಒಂದು ದೊಡ್ಡಮನೆ. ಸಣ್ಣಪುಟ್ಟ ಜಗಳ ಬಂದರೆ ಮನೆಯೊಡೆಯ ಅದನ್ನು ಸರಿಪಡಿಸುತ್ತಾರೆ. ಜತೆಗೆ ಸಿ.ಡಿ.ಪ್ರಕರಣ ಬೋಗಸ್. ಇವು ಯಾವುದೂ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ ಎಂದು ಸೋಮಣ್ಣ ಹೇಳಿದರು.

    ನರೇಂದ್ರ ಮೋದಿ ಇನ್ನೂ 10 ವರ್ಷ ಪ್ರಧಾನಿಯಾಗಿರಬೇಕು. ನೆರೆಯ ವೈರಿಗಳು ನಮ್ಮ ಮೇಲೆ ಕಾಲು ಕೆರೆದು ಬರುತ್ತಿದ್ದ ಕಾಲವೊಂದಿತ್ತು. ಈಗ ನಮ್ಮೊಂದಿಗೆ ಯುದ್ಧ ಮಾಡಲು ಹೆದರುತ್ತಿದ್ದಾರೆ. ಆದ್ದರಿಂದ ಮೋದಿಯವರು ದೇಶಕ್ಕೆ ಬೇಕೇ ಬೇಕು.
    ವಿ. ಸೋಮಣ್ಣ ವಸತಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts