More

    ಮಾಂಡೌಸ್ ಅಟ್ಟಹಾಸ; ರೋಗಗಳಿಂದ ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ…

    ಬೆಂಗಳೂರು: ಮಾಂಡೌಸ್ ಚಂಡಮಾರುತದ ಪ್ರಭಾವದಿಂದ ಮೋಡ ಕವಿದ ವಾತಾವರಣ ಹಾಗೂ ತಾಪಮಾನದ ಇಳಿತದಿಂದ ತೀವ್ರಗೊಂಡಿರುವ ಚಳಿ ಮತ್ತು ಮಳೆಗೆ ರಾಜ್ಯ ಗಡ ಗಡ ನಡುಗಿದೆ. ಏತನ್ಮಧ್ಯೆ, ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದಿನ ಎರಡು ದಿನ ಮುಂದುವರಿಯಲಿದೆ. ಕರಾವಳಿ, ಉತ್ತರ ಒಳನಾಡುಗಿಂತ ದಕ್ಷಿಣ ಒಳನಾಡು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

    ಮಾಂಡೌಸ್ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಹಾಗೂ ಶೀತಗಾಳಿ ಹಾಗೂ ಕಡಿಮೆ ತಾಪಮಾನ ಉಂಟಾಗಿದೆ. ಮುಂದಿನ ಒಂದು ವಾರಕಾಲ ಇದೇ ಪರಿಸ್ಥಿತಿ ಮುಂದುವರೆಯುವ ಮುನ್ಸೂಚನೆ ಸಿಕ್ಕಿದ್ದು ಈ ಹಿನ್ನೆಲೆಯಲ್ಲಿ ನವಜಾತ ಶಿಶು, ಮಕ್ಕಳು, ಗರ್ಭಿಣಿಯರು, ವೃದ್ಧರು ಸೇರಿ ಎಲ್ಲಾ ವಯೋಮಾನದವರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

    ಈ ಸಂಬಂಧ ಇಲಾಖೆ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಶೀತ ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ದೂರವಿದ್ದು ಬೆಚ್ಚಗಿನ ನೀರು ಅಥವಾ ಸೂಪ್‌ಗಳನ್ನು ಸೇವಿಸಬೇಕು. ಸುಲಭವಾಗಿ ಜೀರ್ಣವಾಗುವ ಹಾಗೂ ತಾಜಾ ಆಹಾರ ಸೇವಿಸಬೇಕು. ಸ್ಟೆಟರ್, ಸಾಕ್ಸ್ ಹಾಗೂ ಕೈಗವಸುಗಳನ್ನು (ಗ್ಲೌಸ್​) ಧರಿಸುವುದು ಹಾಗೂ ಮನೆ ಒಳಗೂ ಬೆಚ್ಚಗಿರುವುದು ಉತ್ತಮ.

    ಸ್ನಾನಕ್ಕೆ ಬಿಸಿ ನೀರು, ಬೆಚ್ಚಗಿನ ನೀರನ್ನು ಉಪಯೋಗಿಸುವುದು, ಅನಗತ್ಯವಾಗಿ ಹೊರಗೆ ಸಂಚಾರ ತಪ್ಪಿಸಿ, ಕಿವಿಗಳನ್ನು ಹತ್ತಿಯಿಂದ ಮುಚ್ಚಿಕೊಳ್ಳಿ ಅಥವಾ ಸ್ಕಾರ್ಫ್​ ಬಳಸಿ. ಹೊರಗೆ ಹೋಗುವವರು ಮಾಸ್ಕ್ ಧರಿಸಿ. ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಕೆಮ್ಮುವಾಗ ಹಾಗೂ ಸೀನುವಾಗ ಕರವಸತ್ರ ಬಳಸಿ. ಕೈಗಳನ್ನು ಆಗಾಗ್ಗೆ ಸೋಪು ಹಾಗೂ ನೀರು ಬಳಸಿ ತೊಳೆಯಿರಿ ಎಂದು ಸಲಹೆ ನೀಡಲಾಗಿದೆ.

    ಈ ವಾತಾವರಣದಲ್ಲಿ ಯಾರೂ ತಂಪು ಪಾನೀಯ ಹಾಗೂ ಐಸ್ ಕ್ರೀಂ ಸೇವಿಸಬಾರದು, ಫ್ರಿಡ್ಜ್​ನ ಅಥವಾ ತಣ್ಣಗಿನ ನೀರನ್ನು ಕುಡಿಯಬಾರದು. ಮಳೆಯಲ್ಲಿ ನೆನೆಯುವುದು, ತಣ್ಣನೆ ಹಾಗೂ ಶೀತಗಾಳಿಗೆ ಮೈ ಒಡ್ಡುವುದನ್ನು ತಪ್ಪಿಸಬೇಕು. ಹೊರಾಂಗಣ ಪ್ರವಾಸ ನಿರ್ಭಂದಿಸಬೇಕು. ಮಸಾಲಾಯುಕ್ತ ಪದಾರ್ಥಗಳು, ಜಂಕ್ ಫುಡ್‌ಗಳನ್ನು ಸೇವಿಸಬೇಡಿ ಎಂದು ಎಂದು ಮಾರ್ಗಸೂಚಿಯಲ್ಲಿ ಆರೋಗ್ಯ ಇಲಾಖೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts