More

    ಪಾಲಿಕೆ ಮೇಲಿದೆ ಪೌರಕಾರ್ಮಿಕರ ಜವಾಬ್ದಾರಿ ; ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಮತ

    ತುಮಕೂರು : ಕೆಟ್ಟ ವಾತಾವರಣದಲ್ಲಿ ಕೆಲಸ ವಾಡುವ ಪೌರಕಾರ್ಮಿಕರು ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು, ಸವಾಜದ ಸ್ವಾಸ್ಥ್ಯ ಕಾಪಾಡುವ ಪೌರ ಕಾರ್ಮಿಕರ ಆರೋಗ್ಯ ಕಾಪಾಡುವ ಜವಾಬ್ದಾರಿ ಪಾಲಿಕೆಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

    ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪೌರ ಕಾರ್ಮಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು, ಜೀವನದ ಬಗ್ಗೆ ಉದಾಸೀನ ಮಾಡದೆ ಸುರಕ್ಷತಾ ಕ್ರಮ ಅನುಸರಿಸುವ ಮೂಲಕ ಆರೋಗ್ಯದ ಕಡೆ ಗಮನಹರಿಸಬೇಕು, ಪಾಲಿಕೆ ನೀಡಿರುವ ಸುರಕ್ಷತಾ ಸಾಧನಗಳನ್ನು ಬಳಸಬೇಕು, ಸುರಕ್ಷತಾ ಸಾಧನ ಅಳವಡಿಸಿಕೊಳ್ಳದೆ ಕಾರ್ಯನಿರ್ವಹಿಸುವ ಮೂಲಕ ಪೌರ ಕಾರ್ಮಿಕರೇ ಅನಾರೋಗ್ಯಕ್ಕೆ ಆಹ್ವಾನ ನೀಡುತ್ತಿದ್ದಾರೆ ಎಂದರು.

    ಪೌರ ಕಾರ್ಮಿಕರಿಗೆ ಆರೋಗ್ಯಕರ ಪರಿಸ್ಥಿತಿ ನಿರ್ವಾಣ ವಾಡಬೇಕಾದ ಜವಾಬ್ದಾರಿ ಪಾಲಿಕೆ ಮೇಲಿದೆ, ಪಾಲಿಕೆ ಬದ್ಧತೆಯಿಂದ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ ಒದಗಿಸಿಕೊಟ್ಟಿದೆ, ಪೌರ ಕಾರ್ಮಿಕರ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಪಾಲಿಕೆ ಇನ್ನಷ್ಟು ಅವಶ್ಯಕ ಕ್ರಮಗಳನ್ನು ಯೋಜನೆಗಳನ್ನು ರೂಪಿಸಬೇಕು, ಪೌರ ಕಾರ್ಮಿಕರ ಆರೋಗ್ಯವೇ ನಗರದ ಆರೋಗ್ಯ ಎಂದರು.

    ಪೌರ ಕಾರ್ಮಿಕರು ಸುರಕ್ಷತಾ ಅನುಸರಿಸದೇ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಇದ್ದು, ಪಾಲಿಕೆ ಸೇರಿ ದಾನಿಗಳು ನೀಡಿರುವ ಸುರಕ್ಷತಾ ಸಲಕರಣೆ ಬಳಸಬೇಕು, ಗಡಿಯಲ್ಲಿ ಸೈನಿಕರು ಪ್ರಾಣ ತ್ಯಾಗ ಮಾಡಿದರೆ, ಪೌರ ಕಾರ್ಮಿಕರು ನಗರದ ಆರೋಗ್ಯಕ್ಕಾಗಿ ಪ್ರಾಣ ತ್ಯಾಣ ವಾಡುತ್ತೀರಿ, ವಿದೇಶಗಳಲ್ಲಿ ಪೌರ ಕಾರ್ಮಿಕರು ಕಾರ್ಯನಿರ್ವಹಿಸುವಂತೆ ನಮ್ಮಲ್ಲಿರುವ ಪೌರ ಕಾರ್ಮಿಕರು ಕಾರ್ಯನಿರ್ವಹಿಸಬೇಕು ಎಂದರು.

    ಮೇಯರ್ ಬಿ.ಜಿ.ಕೃಷ್ಣಪ್ಪ ಮಾತನಾಡಿ, ಪೌರ ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಪಾಲಿಕೆ ವಿಮೆ ಮತ್ತು ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ನೀಡಿದ್ದು, ವಿಮೆ ಮತ್ತು ಆರೋಗ್ಯ ಕಾರ್ಡ್ ಅನ್ನು ಸದ್ಬಳಕೆ ವಾಡಿಕೊಳ್ಳುವ ಮೂಲಕ ನಗರದ ಆರೋಗ್ಯದೊಂದಿಗೆ ತಮ್ಮಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts