More

    ಮೂಲಸೌಲಭ್ಯ ವಂಚಿತ ಕವಲೂರು ಸರ್ಕಾರಿ ಪ್ರೌಢಶಾಲೆ: ಗ್ರಾಮಸ್ಥರ ಆಕ್ರೋಶ

    ಅಳವಂಡಿ: ಸಮೀಪದ ಕವಲೂರು ಗ್ರಾಮದ ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಗೃಹ, ಬಿಸಿಯೂಟ, ಶುದ್ಧ ಕುಡಿಯುವ ನೀರಿನ ಅಸಮರ್ಪಕ ಪೂರೈಕೆ, ಡೆಸ್ಕ್ ಅವ್ಯವಸ್ಥೆ ಸೇರಿ ಮುಂತಾದ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು, ವಿದ್ಯಾರ್ಥಿಗಳು ಶಾಲೆಯ ಮುಖ್ಯ ಶಿಕ್ಷಕರನ್ನು ಬುಧವಾರ ತರಾಟೆಗೆ ತೆಗೆದುಕೊಂಡರು.

    ಗ್ರಾಮದ ಹೊರವಲಯದಲ್ಲಿರುವ ಶಾಲೆಯಲ್ಲಿ 287 ಮಕ್ಕಳಿದ್ದು, ಮುಖ್ಯ ಶಿಕ್ಷಕ ಸೇರಿ 8 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಬಿಸಿಯೂಟ ತಯಾರಿಸಲು ಸರ್ಕಾರ ಎಲ್ಲ ಸೌಲಭ್ಯಗಳನ್ನು ನೀಡಿದೆ. ಆದರೆ, ಈ ಶಾಲೆಯಲ್ಲಿ ಮಕ್ಕಳಿಗೆ ಅಡುಗೆಗೆ ಬೇಕಾದ ತರಕಾರಿ, ಎಣ್ಣೆ ಹಾಗೂ ಹಲವು ಪದಾರ್ಥಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸುತ್ತಿಲ್ಲ. ಸಮರ್ಪಕ ಶೌಚಗೃಹವಿಲ್ಲದೆ, ಮಕ್ಕಳಿಗೆ ಬಯಲು ಶೌಚವೇ ಗತಿ ಎಂದು ಶಾಲೆಯ ಅವ್ಯವಸ್ಥೆ ಕುರಿತು ಗ್ರಾಮಸ್ಥರು ಮುಖ್ಯಶಿಕ್ಷಕರ ವಿರುದ್ಧ ಹರಿಹಾಯ್ದರು.

    ಶಾಲೆಗೆ ಶೌಚಗೃಹ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ಡೆಸ್ಕ್ ವ್ಯವಸ್ಥೆ ಕಲ್ಪಿಸುವಂತೆ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಬಿಸಿಯೂಟಕ್ಕೆ ಸೂಕ್ತ ಪ್ರಮಾಣದಲ್ಲಿ ಪದಾರ್ಥಗಳನ್ನು ನೀಡುತ್ತಿದ್ದು, ಅಡುಗೆಯವರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕೆಟ್ಟ ತೊಗರಿ ಬೇಳೆಯನ್ನು ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ನೆಲದಲ್ಲಿ ಹೂಳಲಾಗಿದೆ.
    ಕೊಟ್ರೇಶಪ್ಪ ಛತ್ತರಕಿ ಮುಖ್ಯ ಶಿಕ್ಷಕ, ಕವಲೂರು

    ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಅಡುಗೆ ತಯಾರಿಸುತ್ತಿಲ್ಲ. ಮುಖ್ಯ ಶಿಕ್ಷಕರು ಮಕ್ಕಳೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಶೌಚಗೃಹ ಇಲ್ಲ. ಕೂಡಲೇ ಕುಡಿಯುವ ನೀರು ಹಾಗೂ ಕೂರಲು ಬೆಂಚ್ ವ್ಯವಸ್ಥೆ ಕಲ್ಪಿಸಬೇಕು. ಬಿಸಿಯೂಟವನ್ನು ಸರಿಯಾದ ರೀತಿಯಲ್ಲಿ ನೀಡಬೇಕು. ಅಧಿಕಾರಿಗಳು ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು.
    ರಣದಪ್ಪ ಗುಗ್ರಿ ಗ್ರಾಮಸ್ಥ, ಕವಲೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts