More

    ಬೇಗ ಗುಣವಾಗಿ ಮರಳಿ ಬನ್ನಿ ಎಂದು ಹಲವರಿಗೆ ಹಾರೈಸಿದ್ದವರೇ ಮರಳಿ ಬಾರದ ಲೋಕಕ್ಕೆ…

    ಬೆಂಗಳೂರು: ಕೆಲವೇ ಸಮಯದ ಹಿಂದೆ ಕರೊನಾಗೆ ಬಲಿಯಾಗಿರುವ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ, ಸಂಸದ ಸುರೇಶ್ ಅಂಗಡಿ ಅವರಿಗೆ ಕರೊನಾ ಸೋಂಕು ತಗುಲಿರುವುದು ಸೆ. 11ರಂದು ದೃಢಪಟ್ಟಿತ್ತು.

    “ಕರೊನಾ ಪರೀಕ್ಷೆ ವರದಿ ಪಾಸಿಟಿವ್​ ಎಂದು ಬಂದಿದೆ. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆ ಪಡೆಯುತ್ತಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ನಿಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಲು ವಿನಂತಿಸಿಕೊಳ್ಳುತ್ತೇನೆ” ಎಂದು ಎಲ್ಲರ ಬಗ್ಗೆ ಕಾಳಜಿ ವಹಿಸಿ ಅವರು ಟ್ವೀಟ್​ ಮಾಡಿದ್ದರು.

    ಮಾತ್ರವಲ್ಲ, ಆ ಬಳಿಕ ಕರೊನಾ ಸೋಂಕು ದೃಢಪಟ್ಟ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು, ಕೇಂದ್ರ ಸಚಿವ ನಿತಿನ್​ ಗಡ್ಕರಿ, ಮಣಿಪುರದ ಸಂಸದ ಪ್ರಹ್ಲಾದ್ ಸಿಂಗ್ ಪಟೇಲ್​, ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್​. ಅಶ್ವತ್ಥನಾರಾಯಣ, ಎಂ.ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಯಬಾಗದ ಶಾಸಕ ದುರ್ಯೋಧನ ಐಹೊಳೆ ಎಲ್ಲರಿಗೂ ಸಂಸದ ಅಂಗಡಿಯವರು ಟ್ವೀಟ್​ ಮಾಡಿ ಬೇಗ ಚೇತರಿಸಿಕೊಳ್ಳಿ ಎಂಬುದಾಗಿ ಹಾರೈಸಿದ್ದರು.

    ತನ್ನ ನಂತರ ಸೋಂಕಿಗೆ ಒಳಗಾದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನಪ್ರತಿನಿಧಿ ಸ್ನೇಹಿತರೆಲ್ಲರಿಗೂ ಬೇಗ ಗುಣವಾಗಿ ಮತ್ತೆ ಜನಸೇವೆಗೆ ಮರಳಿ ಎಂಬಂತೆ ಪ್ರಾರ್ಥಿಸಿದ್ದ ಸುರೇಶ್ ಅಂಗಡಿಯವರೇ ಈಗ ಮರಳಿ ಬಾರದ ಲೋಕಕ್ಕೆ ತೆರಳಿರುವುದು ಬಹಳಷ್ಟು ಮಂದಿಗೆ ಅಪಾರ ದುಃಖ ಉಂಟು ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts