More

    ನನ್ನ ಸ್ತನಗಳನ್ನೇ ದಿಟ್ಟಿಸಿ ನೋಡುತ್ತಿದ್ದ: ಉಬರ್​ ಆಟೋ ಚಾಲಕನ ಕರಾಳ ಮುಖ ಬಿಚ್ಚಿಟ್ಟ ಪತ್ರಕರ್ತೆ

    ನವದೆಹಲಿ: ಮಹಿಳಾ ಪತ್ರಕರ್ತೆ ಜತೆ ಉಬರ್​ ಆಟೋ ಚಾಲಕ ಅಸಭ್ಯವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು)ವು ಉಬರ್​ ಇಂಡಿಯಾ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್​ ನೀಡಿದೆ.

    ದೆಹಲಿಯ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಮಾತನಾಡಿ, ದೆಹಲಿಯಲ್ಲಿ ಉಬರ್ ಆಟೋದಲ್ಲಿ ಮಹಿಳಾ ಪತ್ರಕರ್ತೆಯೊಬ್ಬರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಉಬರ್ ಇಂಡಿಯಾ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ನೀಡಲಾಗಿದೆ ಮತ್ತು ಮಹಿಳೆಯರ ಸುರಕ್ಷತೆಗಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಉಬರ್​ಗೆ ಮಾಹಿತಿ ಕೇಳಲಾಗಿದೆ ಎಂದು ಹೇಳಿದರು.

    ಮಹಿಳಾ ಆಯೋಗದ ನೋಟಿಸ್ ಬೆನ್ನಲ್ಲೇ ದೆಹಲಿ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 509 (ಮಹಿಳೆಯರ ನಮ್ರತೆಗೆ ಅವಮಾನ ಮಾಡುವ ಉದ್ದೇಶದಿಂದ ಪದ, ಹಾವಭಾವ ಅಥವಾ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ.

    ಇದನ್ನೂ ಓದಿ: ಇದ್ದಕ್ಕಿದ್ದಂತೆ ಸ್ಟಾರ್ಟ್​ ಆಗಿ ಅಂಗಡಿಯತ್ತ ನುಗ್ಗಿದ ಟ್ರ್ಯಾಕ್ಟರ್! ನಿಗೂಢ ವಿಡಿಯೋ ನೋಡಿ ದಂಗಾದ ಜನರು

    ಸಂತ್ರಸ್ತ ಮಹಿಳೆ ಎನ್‌ಎಫ್‌ಸಿಯಿಂದ ಮಾಳವೀಯ ನಗರಕ್ಕೆ ಆಟೋರಿಕ್ಷಾದಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

    ನಾನು ಮಾಳವೀಯ ನಗರದಲ್ಲಿರುವ ನನ್ನ ಫ್ರೆಂಡ್​ ಮನೆಗೆ ಹೋಗುತ್ತಿದ್ದೆ. ಅದಕ್ಕಾಗಿ ನಾನು ಉಬರ್ ಮೂಲಕ ಆಟೋವನ್ನು ಬುಕ್ ಮಾಡಿ, ಎನ್‌ಎಫ್‌ಸಿಯಿಂದ ಆಟೋ ಹತ್ತಿದೆ. ನಾನು ಮ್ಯೂಸಿಕ್​ ಕೇಳುತ್ತಿದ್ದರಿಂದ, ಆರಂಭದಲ್ಲಿ ನನಗೆ ಏನಾಗುತ್ತಿದೆ ಎಂದು ಅರ್ಥವಾಗಲಿಲ್ಲ. ಸ್ವಲ್ಪ ಸಮಯದ ನಂತರ ನನಗೆ ಅರಿವಾಯಿತು. ಆಟೋ ಡ್ರೈವರ್ ಎಡಭಾಗದ ಕನ್ನಡಿಯಲ್ಲಿ ನನ್ನನ್ನು ನೋಡುತ್ತಿದ್ದನು. ನನ್ನ ಸ್ತನಗಳು ಕನ್ನಡಿಯಲ್ಲಿ ಗೋಚರಿಸುತ್ತಿದ್ದವು ಮತ್ತು ಅವನು ಸ್ತನಗಳನ್ನು ದಿಟ್ಟಿಸಿ ನೋಡುತ್ತಿದ್ದನು. ಇದರಿಂದ ಅಸಹ್ಯಗೊಂಡು ಬಲಭಾಗಕ್ಕೆ ಜರುಗಿದೆನು. ಸ್ಥಾನವನ್ನು ಬದಲಾಯಿಸಿದರೂ ಮತ್ತೆ ಆಟೋ ಚಾಲಕ ಬಲಕ್ಕೆ ನೋಡಲಾರಂಭಿಸಿದನು ಎಂದು ಸಂತ್ರಸ್ತೆ ಮಹಿಳೆ ಹೇಳಿಕೊಂಡಿದ್ದಾಳೆ.

    ಇದಾದ ನಂತರ ನಾನು ಅವನಿಗೆ ಕಾಣಿಸಲೇಬಾರದು ಅಂತ ಎಡ ಭಾಗದ ಮೂಲೆಗೆ ತೆರಳಿದೆ. ಆದರೆ ಅವನು ಹಿಂತಿರುಗಿ ನನ್ನತ್ತ ನೋಡಲಾರಂಭಿಸಿದನು. ಬಳಿಕ ನಾನು ಅವನಿಗೆ ಎಚ್ಚರಿಕೆ ನೀಡಿ, ದೂರು ನೀಡುವುದಾಗಿ ಹೇಳಿದೆ. ಆದರೂ ಆತ ಹೆದರಲಿಲ್ಲ. ನಾನು ಉಬರ್ ಆ್ಯಪ್​ ತೆರೆದು ಆ್ಯಪ್‌ನಲ್ಲಿನ ಸಹಾಯವಾಣಿ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿದೆ. ಆದಾಗ್ಯೂ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ನಾನು ಎರಡನೇ ಬಾರಿ ಕರೆ ಮಾಡಿದೆ, ಆಗಲೂ ಅಪ್ಲಿಕೇಶನ್‌ನಲ್ಲಿನ ಹಲವಾರು ದೋಷಗಳಿಂದಾಗಿ ಕಂಪನಿಯನ್ನು ಸಂಪರ್ಕಿಸಲು ನನಗೆ ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.

    ಇದನ್ನೂ ಓದಿ: ಹೆರಿಗೆಗೆಂದು ಆಸ್ಪತ್ರೆಗೆ ಹೋಗುವಾಗ ಗರ್ಭಿಣಿ ಪತ್ನಿ, ಪತಿ ಸಜೀವ ದಹನ: ನಿಗೂಢ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ

    ಘಟನೆಯ ಬಗ್ಗೆ ಟ್ವೀಟ್ ಮಾಡಿದ ನಂತರ ದೆಹಲಿ ಮಹಿಳಾ ಆಯೋಗವು ಕ್ರಮಕ್ಕೆ ಮುಂದಾಗಿದೆ ಎಂದು ಸಂತ್ರಸ್ತೆ ಹೇಳಿದ್ದಾರೆ. ನಾನು ರಾತ್ರಿ ಘಟನೆಯ ಬಗ್ಗೆ ಟ್ವೀಟ್ ಮಾಡಿದೆ. ನನ್ನ ಟ್ವೀಟ್ ವೈರಲ್ ಆದ ನಂತರ ದೆಹಲಿ ಮಹಿಳಾ ಆಯೋಗದ ಗಮನಕ್ಕೆ ಬಂತು. ನಾನು ಆಯೋಗಕ್ಕೆ ಮೌಖಿಕ ಮತ್ತು ಲಿಖಿತ ದೂರು ದಾಖಲಿಸಿದ್ದೇನೆ. ಇದೆಲ್ಲದರ ನಂತರ ನಾನು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದೇನೆ. ಎಫ್‌ಐಆರ್ ದಾಖಲಿಸುವುದಾಗಿ ಪೊಲೀಸರು ಹೇಳಿದ್ದಾರೆ ಮತ್ತು ನಾನು ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು ಎಂದು ಹೇಳಿದರು ಎಂದು ಸಂತ್ರಸ್ತೆ ತಿಳಿಸಿದರು.

    ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯ ಭದ್ರತೆಗೆ ಬೇಡಿಕೆ ಇಟ್ಟಿರುವ ಸಂತ್ರಸ್ತೆ, ಈ ಘಟನೆ ಹಗಲು ಹೊತ್ತಿನಲ್ಲೇ ಸಂಭವಿಸಿದೆ. ಬೆಳಗ್ಗಿನ ಸಮಯವಾದ್ದರಿಂದ ನಾನು ಆಟೋ ಚಾಲಕನನ್ನು ಎದುರಿಸಲು ಅವಕಾಶವಿತ್ತು. ಒಂದು ವೇಳೆ ಈ ಘಟನೆಯು ರಾತ್ರಿ ವೇಳೆ ಸಂಭವಿಸಿದರೆ ಏನಾಗುತ್ತಿತ್ತು? ಉಬರ್ ಅಪ್ಲಿಕೇಶನ್ ಬೇರೆ ಕೆಲಸ ಮಾಡಲಿಲ್ಲ. ದಯವಿಟ್ಟು ಸರಿಯಾದ ವ್ಯವಸ್ಥೆ ಮಾಡಿ. ನಾನು ಘಟನೆಯ ವಿರುದ್ಧ ಧ್ವನಿ ಎತ್ತಿದಾಗ ಮಾತ್ರ ಕಂಪನಿಯು ನನ್ನನ್ನು ಸಂಪರ್ಕಿಸಿತು ಎಂದು ಸಂತ್ರಸ್ತೆ ಅಸಮಾಧಾನ ಹೊರಹಾಕಿದ್ದಾಳೆ. (ಏಜೆನ್ಸೀಸ್​)

    ಗಂಡನ ಬಳಿ ಡಿವೋರ್ಸ್​ಗೆ ಒತ್ತಾಯ: ಮಂಡ್ಯದ ಮಾಜಿ ಶಾಸಕನ ಸಹೋದರನ ಜತೆ ಸಿಕ್ಕಿ ಬಿದ್ದ ಮಹಿಳೆ

    ಕಿಚ್ಚನ ಮುಂದಿನ ಸಿನಿಮಾ ಬಿಲ್ಲ ರಂಗ ಬಾಷ! ಅನೂಪ್​ ಭಂಡಾರಿ ಕೊಟ್ಟ ಸುಳಿವಿಗೆ ಸುದೀಪ್​ ಫ್ಯಾನ್ಸ್​ ದಿಲ್​ ಖುಷ್​

    ಮೊದಲ ರಾತ್ರಿಯ ಬೆಡ್​ರೂಮ್​ ಫೋಟೋ ಶೇರ್​ ಮಾಡಿಕೊಂಡ ನಟಿ ಸ್ವರಾ ಭಾಸ್ಕರ್​! ಕಾಲೆಳೆದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts