More

    14 ದಿನದಲ್ಲಿ ಆತ ಮಾಡಿದ ತಪ್ಪಿಗೆ ಶಿಕ್ಷೆ ವಿಧಿಸಲಾಗಿದೆ. ಆತ ಅದೆಂಥ ತಪ್ಪು ಮಾಡಿದ್ದಾನೆ ಗೊತ್ತಾ?

    ಉಡುಪಿ: ಮುಂಬೈಯಿಂದ ಕರ್ನಾಟಕಕ್ಕೆ ಬಂದ ಒಬ್ಬಾತ ಹದಿನಾಲ್ಕು ದಿನಗಳಲ್ಲಿ ಅಂದಾಜು 163 ಬಾರಿ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ದಾನೆ ಎಂದು ಆರೋಪಿಸಲಾಗಿದೆ.
    ತನ್ನ ಜಿಪಿಎಸ್ ಟ್ರ್ಯಾಕರ್ ನಲ್ಲಿರುವ ಮಾಹಿತಿಯ ಆಧಾರದ ಮೇಲೆ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ. ಆತನನ್ನು ಸಾಹಬ್ ಸಿಂಗ್ ಎಂದು ಗುರುತಿಸಲಾಗಿದೆ. ಆತನ ಜಿಪಿಎಸ್ ಟ್ರ್ಯಾಕರ್ ಪ್ರಕಾರ, ಆತ ಹೋಮ್ ಕ್ವಾರಂಟೈನ್ ನಲ್ಲಿರಬೇಕಾದ ಸಂದರ್ಭದಲ್ಲಿಯೇ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದ.

    ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಗೂಗಲ್​ ಸಂಸ್ಥಾಪಕರನ್ನೇ ಹಿಂದಿಕ್ಕಿದ ಮುಖೇಶ್​ ಅಂಬಾನಿ


    ಸಿಂಗ್, ಮುಂಬೈನ ಕೋಟೇಶ್ವರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಜೂನ್ 29 ರಂದು ಊರಿಗೆ ಬಂದ ಆತನಿಗೆ ಅಧಿಕಾರಿಗಳು ಜುಲೈ 3 ರವರೆಗೆ ಸಿಂಗ್​​ಗೆ ಹೋಮ್ ಕ್ವಾರಂಟೈನ್​​ನಲ್ಲಿರಲು ಆದೇಶಿಸಿದ್ದರು.
    ಆದರೆ ಸಿಂಗ್ ಅಲ್ಲಿಂದ ಹೊರಟು ಕುಂದಾಪುರ, ಉಡುಪಿ ಮತ್ತು ಜಿಲ್ಲೆಯ ಹಲವಾರು ಹೋಟೆಲ್‌ಗಳಿಗೆ ಭೇಟಿ ನೀಡಿದ್ದ. ಆತನ ಮೊಬೈಲ್ ಫೋನ್‌ನಲ್ಲಿ ಅಳವಡಿಸಲಾದ ಜಿಪಿಎಸ್ ಟ್ರ್ಯಾಕರ್ ಪ್ರಕಾರ, 14 ದಿನಗಳಲ್ಲಿ ಆತ 163 ಬಾರಿ ಹೋಮ್​​ ಕ್ವಾರಂಟೈನ್ ನ ನಿಯಮಾವಳಿ ಉಲ್ಲಂಘಿಸಿದ್ದಾನೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.  ಅಧಿಕಾರಿಗಳು ಈ ಬಗ್ಗೆ ತಿಳಿದ ನಂತರ, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

    ಇಲಿ ಹಿಡಿಯಲು ಬೆಟ್ಟ ಅಗೆದರು, ವಂಚನೆಯ ಬೃಹತ್​ ಭಂಡಾರವನ್ನೇ ಹೊರತೆಗೆದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts