More

    ಆರ್ಡರ್​ ಮಾಡಿದ್ದು ಸ್ಕಿನ್​ ಲೋಷನ್, ಬಂದಿದ್ದು ಭಾರಿ ಬೆಲೆಯ ಹೆಡ್​ಫೋನ್​: ಅಮೇಜಾನ್​ಗೆ ಕೇಳಿದ್ದಕ್ಕೆ ಸಿಕ್ತು ಅಚ್ಚರಿ ಉತ್ತರ​​

    ನವದೆಹಲಿ: ಟ್ವಿಟರ್​ ಬಳಕೆದಾರರೊಬ್ಬರು ಇತ್ತೀಚೆಗಷ್ಟೇ ತಮಗಾದ ವಿಚಿತ್ರ ಆನ್​ಲೈನ್​ ಶಾಪಿಂಗ್​ ಅನುಭವವನ್ನು ಟ್ವೀಟ್​ ಮೂಲಕ ಹಂಚಿಕೊಂಡಿದ್ದು, ಎಲ್ಲರನ್ನೂ ಚಕಿತಗೊಳಿಸಿದ್ದಾರೆ.

    ಜೋಶ್​ ಸಾಫ್ಟ್​ವೇರ್​ನ ಸಹ ಸಂಸ್ಥಾಪಕ ಹಾಗೂ ನಿರ್ದೇಶಕರಾಗಿರುವ ಗೌತಮ್​ ರೇಜ್ ಇತ್ತೀಚೆಗಷ್ಟೇ ಅಮೇಜಾನ್​ ಆನ್​ಲೈನ್​ ಶಾಪಿಂಗ್​ನಲ್ಲಿ 300 ರೂ. ಬೆಲೆಯ ಸ್ಕಿನ್​ ಲೋಷನ್​ ಅನ್ನು ಆರ್ಡರ್​ ಮಾಡಿದ್ದರು. ಆದರೆ, ಅವರು ಪಡೆದಿದ್ದು 19 ಸಾವಿರ ರೂ. ಮೌಲ್ಯದ ಬೋಸ್​ ಕಂಪನಿಯ ಹೆಡ್​ಫೋನ್.​

    ಈ ಬಗ್ಗೆ ತಿಳಿಯಲು ಹಾಗೂ ವಾಪಸ್​ ನೀಡಲು ರೇಜ್​ ಅವರು ಅಮೇಜಾನ್​ ಕಸ್ಟಮರ್​ ಕೇರ್​ ಸಂಪರ್ಕಿಸಿದಾಗ, ಐಟಮ್​ ಅನ್ನು ಮರುಪಡೆಯಲು ಸಾಧ್ಯವಿಲ್ಲ, ನೀವೆ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ. ಈ ವಿಚಾರವನ್ನು ರೇಜ್​ ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ. ಇದನ್ನೂ ಓದಿ: ಚಿರು ಮೇಲಿನ ಮೇಘನಾ ಪ್ರೀತಿ ಎಂಥದ್ದು ಎಂಬುದಕ್ಕೆ ಆ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿದೆ ಉತ್ತರ

    ರೇಜ್​ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರೊಬ್ಬರು ಸ್ಕಿನ್​ ಲೋಷನ್​​ ಇನ್ನು ಸ್ಟಾಕ್​ನಲ್ಲೇ ಉಳಿದಿದೆಯೇ? ನನಗೊಂದು ಲಿಂಕ್​ ಕಳುಹಿಸಿ ಎಂದು ಕೇಳಿದ್ದಾರೆ. ನಾನು ಸ್ಕಿನ್​ ಲೋಷನ್​​ ಪಡೆದಿದ್ದೇನೆ ಎಕ್ಸ್​ಚೇಂಜ್​ ಮಾಡಿಕೊಳ್ಳೋಣವಾ ಎಂದು ಮತ್ತೋರ್ವ ನೆಟ್ಟಿಗ ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ಸದ್ಯ ರೇಜ್​ ಅವರ ಟ್ವೀಟ್​ ವೈರಲ್​ ಆಗಿದ್ದು, 6 ಸಾವಿರಕ್ಕೂ ಹೆಚ್ಚು ಲೈಕ್ಸ್​ ಹಾಗೂ 1500ಕ್ಕೂ ಹೆಚ್ಚು ರೀಟ್ವೀಟ್​ ಪಡೆದುಕೊಂಡಿದೆ. ಅನೇಕರು ಎಂಥಾ ಅದೃಷ್ಟ ಎಂದು ಹುಬ್ಬೇರಿಸಿದ್ದಾರೆ. ಮತ್ತೆ ಕೆಲವರು ಆರ್ಡರ್​ ಅದಲುಬದಲಾಗಿರಬಹುದು ಎಂದು ಕಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)

    ಕಣ್ಣೀರು ತರಿಸುವಂತಿದೆ ಪ್ರಜ್ವಲ್​ ಜತೆಗಿನ ಕೊನೇ ವಾಟ್ಸ್​ಆ್ಯಪ್​ ಚಾಟ್​: ಈಡೇರಲೇ ಇಲ್ಲ ಚಿರು ಬಯಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts