More

    ಗುತ್ತಿಗೆದಾರರ ನೆರವಿಗೆ ಕೇಂದ್ರ ಬರಬೇಕು


    ಮೈಸೂರು : ಸರಗೂರು ತಾಲೂಕಿನ ಗುತ್ತಿಗೆದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಅನಗತ್ಯ ತೊಂದರೆ ನೀಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಸದಸ್ಯ ಕೆ.ಟಿ.ಹರೀಶ್ ಕುಮಾರ್ ಆರೋಪಿಸಿದ್ದಾರೆ.

    ಸರ್ಕಾರದ ಕಾಮಗಾರಿಗಳನ್ನು ಮಾಡಿದಾಗ ನಾನಾ ಪ್ರಕ್ರಿಯೆಯಲ್ಲಿ ಜಿಎಸ್‌ಟಿ ಪಾವತಿ ಮಾಡುವುದೆ ನಮಗೆ ತೊಂದರೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದೇವೆ. ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

    ಜಿಎಸ್‌ಟಿ ಮೂಲಕ ಇಲಾಖೆ ಅಧಿಕಾರಿಗಳು ದಂಡ ಕಟ್ಟಿ. ಇಲ್ಲಂದರೆ ನಿಮ್ಮ ಮನೆ ಆಸ್ತಿ ಮೇಲೆ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ. ಲೈಸನ್ಸ್ ರದ್ದು ಮಾಡುತ್ತೇವೆ ಎಂದು ಅಧಿಕಾರಿಗಳು ತಾಕೀತು ಮಾಡುತ್ತಾರೆ. ಹಣವನ್ನು ಕಟ್ಟಿ ಕಟ್ಟಿ ಮನೆ ಆಸ್ತಿ ಜಮೀನು ಮಾರುವ ಪರಿಸ್ಥಿತಿಗೆ ಬಂದಿದ್ದಿವಿ. ಶೇ.12 ರಿಂದ ಶೇ.18 ರ ವರೆಗೆ ಜಿಎಸ್‌ಟಿ ಸರ್ಕಾರ ನಿಗದಿ ಮಾಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪಾವತಿ ಮಾಡದಿದ್ದರೆ ನಿಮ್ಮ ಆಸ್ತಿಯನ್ನು ಜಪ್ತಿ ಮಾಡುತ್ತೇವೆಂದು ಭಯ ಪಡಿಸುತ್ತಾರೆ.

    ಅದರಿಂದ 2018 ರಿಂದ 2022 ನೇ ಸಾಲಿನ ಜಿಎಸ್‌ಟಿ ಬಡ್ಡಿ ದಂಡಗಳನ್ನು ರದ್ದು ಮಾಡಬೇಕು. ಇಲ್ಲದಿದ್ದರೆ ಗುತ್ತಿಗೆದಾರರು ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts