More

    ಇವತ್ತು ಮಂಗಳವಾರ… ಹೀಗಾಗಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿಲ್ಲ; ಎಚ್​ಡಿಕೆ

    ಬೆಂಗಳೂರು: ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧವಾಗಿದೆ. ನಮಗೇನು ದೆಹಲಿಗೆ ಹೋಗಿ ಅಪ್ರೂವಲ್ ತೆಗೆದುಕೊಳ್ಳಬೇಕಾಗಿಲ್ಲ. ಇಂದು ಮಂಗಳವಾರ ಆದ್ದರಿಂದ ಪಟ್ಟಿ ಬಿಡುಗಡೆ ಮಾಡಿಲ್ಲ. ನಾಳೆ ಅಥವಾ ಗುರುವಾರ ಬೆಳಗ್ಗೆ ಮಾಡುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಇದನ್ನೂ ಓದಿ: ಹಾಸನ | ರೇಗಿಸಿದ ಯುವಕನಿಗೆ ಚಪ್ಪಲಿಯೇಟು ನೀಡಿದ ಯುವತಿ

    ನಾಳೆ ದೇವೇಗೌಡರು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಹಾಸನ ಟಿಕೆಟ್ ವಿಚಾರ ನಮಗಿಂತ ಹೆಚ್ಚಾಗಿ ನಿಮಗೆ ಕುತೂಹಲವಿದೆ. ಹಾಸನ ಬಿಟ್ಟು ಬಿಡುಗಡೆ ಮಾಡಿದ್ರೆ ಏನೋ ಆಗಿದೆ ಅಂತಾ ಕಥೆಗಳು ಶುರುವಾಗುತ್ತವೆ. ಅದಕ್ಕೆ ಎರಡನೇ ಪಟ್ಟಿಯಲ್ಲಿ ಹಾಸನ ಟಿಕೆಟ್ ಬಗ್ಗೆ ತೀರ್ಮಾನ ಮಾಡಬೇಕಾಗುತ್ತದೆ. ಯಾವುದು ಸಮಸ್ಯೆಗಳು ಬೇಡ ಅಂತಾ ನಾನು ಮನಸ್ಸಿನಲ್ಲೇ ಲೆಕ್ಕಚಾರ ಮಾಡಿಕೊಳ್ಳುತ್ತಿದ್ದೇನೆ. ಮೊದಲ ಪಟ್ಟಿ ಬಿಡುಗಡೆ ಮಾಡಿದಾಗ ಯಾವುದೇ ಸಮಸ್ಯೆ ಆಗಿಲ್ಲ. ಎರಡನೇ ಪಟ್ಟಿ ಬಿಡುಗಡೆ ಮಾಡುವಾಗ ದೊಡ್ಡಮಟ್ಟಿದ ಪ್ರಚಾರ ಸಿಕ್ಕಿದ್ದು ಹಾಸನ ಜಿಲ್ಲೆಯ ರಾಜಕಾರಣದಿಂದ. ಇದರಿಂದ ಜನತಾದಳಕ್ಕೆ ಲಾಭವಾಗಿದೆ. ಇದಕ್ಕೆ ಹಾಸನ ಜಿಲ್ಲೆಯ ಬೆಳವಣಿಗೆಗೆ ಆದ ಕಾರಣಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಇದನ್ನೂ ಓದಿ: ಖಾಜಿ ಸಾಹೇಬ್ ಕುರಾನ್ ಪಠಣ ಮಾಡಿಲ್ಲ; ಚನ್ನಕೇಶವ ದೇವಾಲಯ ವ್ಯವಸ್ಥಾಪನಾ ಸಮಿತಿ ಸ್ಪಷ್ಟನೆ

    ಕಾಂಗ್ರೆಸ್ ಸೆಕೆಂಡ್ ಲೀಸ್ಟ್​​ನಲ್ಲಿ ಟಿಕೆಟ್ ಸಿಗದವರನ್ನು ನೀವೂ ಸ್ವಾಗತಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಕೆಲವು ಭಾಗದಲ್ಲಿ ನಮ್ಮ ಪಕ್ಷ ಬಲಿಷ್ಠವಾಗಿಲ್ಲ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಮತ ಹಾಕಲು ಜನ ತಯಾರಿದ್ದಾರೆ. ಆದರೆ ಸಮರ್ಥ ಅಭ್ಯರ್ಥಿ ಕೊರೆತೆ ಇದೆ. ಅಂತಹ ಕಡೆ ಮತವಾಗಿ ಪರಿವರ್ತನೆ ಮಾಡಿಕೊಳ್ಳುವಂತಹ ಶಕ್ತಿಯುತ ನಾಯಕರು ಬಂದಾಗ ಅದರ ಬಗ್ಗೆ ಚಿಂತನೆ ಮಾಡುತ್ತೇನೆ ಎಂದು ಎಚ್​ಡಿಕೆ ಹೇಳಿದರು.

    ಡಿಕೆಶಿ ಸಿಎಂ ಆಗೋಕೆ ಹೈಕಮಾಂಡ್ ಬಿಡೋದಿಲ್ಲ ಅಂತಾ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಅವರ ಪಕ್ಷಕ್ಕೆ ಸೇರಿದ್ದು. ಸಿಎಂ ಯಾರಾಗ್ತಾರೋ ಏನೋ? ಚುನಾವಣೆಯಲ್ಲಿ ಮೆಜಾರಿಟಿ ಬಂದ ಮೇಲೆ ಆದೆಲ್ಲ. ಮಗು ಹುಟ್ಟುವ ಮುಂಚೆಯೇ ಖುಲಾವಿ ಹೊಲಿಸಿದ್ರೆ ನಾನ್ ಏನೂ ಹೇಳಲಿ ಎಂದರು.

    ಇದನ್ನೂ ಓದಿ: ಬಿಜೆಪಿ ಟಿಕೆಟ್‌ಗಾಗಿ CPI ಹುದ್ದೆಗೆ ರಾಜೀನಾಮೆ; ನಾಗಠಾಣ ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts