More

    ಸಿದ್ದರಾಮಯ್ಯಂಗೆ ಪಾಠ ಕಲಿಸೋದೇ ನನ್ನ ಉದ್ದೇಶ ಎಂದ ಎಚ್​ಡಿಕೆ

    ಮೈಸೂರು: ಕಾಂಗ್ರೆಸ್‌ಗೆ ಅಲ್ಲ, ಸಿದ್ದರಾಮಯ್ಯಂಗೆ ಪಾಠ ಕಲಿಸೋದೇ ನನ್ನ ಉದ್ದೇಶ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್​ ನಾಯಕ ಎಚ್.ಡಿ‌.ಕುಮಾರಸ್ವಾಮಿ ಹೇಳಿದ್ದಾರೆ. 2018 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಜೆಡಿಎಸ್​ ಬಗ್ಗೆ ಅಪಪ್ರಚಾರ ಮಾಡಿ ಅಲ್ಪಸಂಖ್ಯಾತ ಸಮುದಾಯದ ದಿಕ್ಕು ತಪ್ಪಿಸಿದ್ದರು. ಈ ಬಾರಿ ಅಲ್ಪಸಂಖ್ಯಾತ ಸಮುದಾಯದ ಜತೆ ನಾವಿದ್ದೇವೆ ಅಂತ ಸಂದೇಶ ನೀಡುವ ಸಲುವಾಗಿ ನಾವು ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದ್ದೇವೆ ಎಂದರು.

    ಉಪಚುನಾವಣೆಯ ಹೊಸ್ತಿಲಲ್ಲಿರುವ ಸಿಂದಗಿ ಮತ್ತು ಹಾನಗಲ್​ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​​ ದಿವಂಗತ ಶಾಸಕ ಮನಗುಲಿ ಅವರ ಪುತ್ರ ಅಶೋಕ್ ಮನಗುಲಿ ಅವರಿಗೆ ಟಿಕೇಟ್ ನೀಡಿದ್ದರೆ, ಹಾನಗಲ್​ನಲ್ಲಿ ವಿಧಾನ ಪರಿಷತ್​ ಸದಸ್ಯ ಶ್ರೀನಿವಾಸ್ ಮಾನೆಯನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಜೆಡಿಎಸ್​ ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ – ಸಿಂದಗಿಯಲ್ಲಿ ನಾಜಿಯಾ ಶಕೀಲ್​ ಅಹಮದ್ ಅಂಗಡಿ ಮತ್ತು ಹಾನಗಲ್​ನಲ್ಲಿ ನಿಯಾಜ್ ಶೇಖ್ ಜೆಡಿಎಸ್ ಅಭ್ಯರ್ಥಿಗಳಾಗಿದ್ದಾರೆ.

    ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ನೂತನ ಕಾರ್ಯದರ್ಶಿ ಅಧಿಕಾರ ಸ್ವೀಕಾರ

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, “ಕಾಂಗ್ರೆಸ್‌ಗಿಂತಲೂ ಸಿದ್ದರಾಮಯ್ಯಗೆ ಪಾಠ ಕಲಿಸಲು ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೇನೆ. 2018 ರ ಚುನಾವಣೆಯಲ್ಲಿ ಸಿದ್ದರಾಮಯ್ಯರ ಕೆಟ್ಟ ಉದ್ದೇಶ ಗೊತ್ತಾಯ್ತು. ಜೆಡಿಎಸ್ ಬಿಜೆಪಿಯ ಬಿ ಟೀಮ್. ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಅಂತ ಅಪಪ್ರಚಾರ ಮಾಡಿದವರು, ಸಿದ್ದರಾಮಯ್ಯ. ಆ ಮೂಲಕ ಅಲ್ಪಸಂಖ್ಯಾತ ಸಮುದಾಯದ ದಿಕ್ಕು ತಪ್ಪಿಸಿದರು” ಎಂದು ಹೇಳಿದರು. “ಈಗಲೂ ಉಪಚುನಾವಣೆಯಲ್ಲಿ ನೀವೇ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಬಹುದಿತ್ತು. ನಿಮಗೆ ಬೇಡ ಅಂದವರು ಯಾರು?” ಎಂದು ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿ ಬಹಿರಂಗವಾಗಿ ಪ್ರಶ್ನೆ ಹಾಕಿದರು.

    ಸರ್ಕಾರಿ ಶಾಲಾ ಶಿಕ್ಷಕರಿಗೇಕೆ ಈ ಕಷ್ಟ? ಸಿಎಂ ಬೊಮ್ಮಾಯಿಗೆ ವಿದ್ಯಾರ್ಥಿನಿ ಪ್ರಶ್ನೆ

    14,313 ಹೊಸ ಕರೊನಾ ಪ್ರಕರಣಗಳು; 3 ತಿಂಗಳಿಂದ ಸೋಂಕು ದರ ಇಳಿಕೆ

    ಪಾನ್​ ಮಸಾಲ ಜಾಹೀರಾತಿನ ಹಣ ಹಿಂತಿರುಗಿಸಿದ ಅಮಿತಾಭ್​ ಬಚ್ಚನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts