More

    ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ತಂಡದ ಮೇವೆದರ್ ಎಂದ ಕೋಚ್ ಲ್ಯಾಂಗರ್

    ಮೆಲ್ಬೋರ್ನ್: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಆರಂಭಿಕ ಹಂತದಲ್ಲಿ ಪ್ರಮುಖ ಆಸ್ತಿಯಾಗಿದ್ದಾರೆ. ಅದರಲ್ಲೂ ಟಿ20 ಕ್ರಿಕೆಟ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನಸೆಳೆಯುವ ಬ್ಯಾಟ್ಸ್‌ಮನ್. 2018ರಲ್ಲಿ ನಡೆದ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಶಿಕ್ಷೆ ಅನುಭವಿಸಿ ವಾಪಸ್ ಬಂದ ಬಳಿಕವೂ ವಾರ್ನರ್ ಅಬ್ಬರದ ಇನ್ನು ಹೆಚ್ಚಾಗಿಯೇ ಇದೆ. ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್, ವಾರ್ನರ್ ಅವರನ್ನು ಖ್ಯಾತ ಬಾಕ್ಸರ್ ಫ್ಲಾಯ್ಡ್​  ಮೇವೆದರ್‌ಗೆ ಹೋಲಿಸಿದ್ದಾರೆ.

    ಇದನ್ನೂ ಓದಿ: ಸಿಬ್ಬಂದಿಗೆ ಕರೊನಾ, ಈಡನ್​ ಗಾರ್ಡನ್ಸ್ ಕ್ರೀಡಾಂಗಣ ಸೀಲ್​ಡೌನ್​!

    ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ತಂಡದ ಮೇವೆದರ್ ಎಂದ ಕೋಚ್ ಲ್ಯಾಂಗರ್ನಾನು ಯಾವಾಗಲೂ ಡೇವಿಡ್ ವಾರ್ನರ್ ಅವರನ್ನು ಬೆಂಬಲಿಸುತ್ತೇನೆ. ಅವರಿದ್ದರೆ ತಂಡದಲ್ಲಿ ಫ್ಲಾಯ್ಡ್​ ಮೇವೆದರ್ ಇದ್ದಷ್ಟೇ ಬಲ ಎಂದು ಲ್ಯಾಂಗರ್ ಹೇಳಿದ್ದಾರೆ. ಮೇವೆದರ್ ಬೌಂಟ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ 50 ಗೆಲುವು ದಾಖಲಿಸಿದ್ದು, ವಿಶ್ವದ 15 ಪ್ರಮುಖ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. 2018ರ ಚೆಂಡು ವಿರೂಪ ಪ್ರಕರಣದಿಂದಾಗಿ ವಾರ್ನರ್ ಭವಿಷ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕರಾಗುವಂತಿಲ್ಲ. ವಾರ್ನರ್ ನಾಯಕರಾಗುವುದು ಬಿಡುವುದು ಎರಡನೇ ಮಾತು, ಅವರು ತಂಡದಲ್ಲಿದ್ದರೆ ಒಂದು ತೂಕ ಎಂದು ಲ್ಯಾಂಗರ್ ಹೇಳಿದ್ದಾರೆ. ನಿಷೇಧ ಶಿಕ್ಷೆ ಪೂರೈಸಿ ತಂಡಕ್ಕೆ ವಾಪಸಾದ ಬಳಿಕವೂ ಅದೇ ಚಾರ್ಮ್ ಮುಂದುವರಿಸಿದ್ದಾರೆ.

    ಇದನ್ನೂ ಓದಿ: VIDEO| ಸಚಿನ್​ ತೆಂಡುಲ್ಕರ್​ ಜೀವನ ಬದಲಿಸಿದ ಮೂವರು ಗುರುಗಳು ಯಾರು ಗೊತ್ತೇ?

    2018ರ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂದಿನ ನಾಯಕ ಸ್ಟೀವನ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ಯಾನ್‌ಕ್ರ್ಯಾಫ್ಟ್​ ಅವರನ್ನು  ಒಂದು ವರ್ಷ ನಿಷೇಧ ಹೇರಲಾಗಿತ್ತು. ಈ ಪ್ರಕರಣದಿಂದ ಮುಜುಗರಗೊಂಡ ಅಂದಿನ ಕೋಚ್ ಡರೇನ್ ಲೆಹಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಲ್ಯಾಂಗರ್ ತಂಡದ ಕೋಚ್ ಆಗಿ ನೇಮಕವಾದರು.

    ದಾದಾ ಚಿತ್ತ ಟಿ20 ಕ್ರಿಕೆಟ್‌ನತ್ತ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts