More

    ಇನ್ಮುಂದೆ ಪ್ರತಿ ಮಂಗಳವಾರ ‘ಮನರೇಗಾ ಕಾರ್ಯಕ್ರಮ’; ಜಿಲ್ಲೆಯ 223 ಗ್ರಾಪಂಗಳಲ್ಲಿ ಯೋಜನೆ ಅನುಷ್ಠಾನ; ಜಿಪಂ ಸಿಇಒ ಅಕ್ಷಯ ಶ್ರೀಧರ ಘೋಷಣೆ

    ಹಾವೇರಿ: ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ವ್ಯಾಪಕ ಪ್ರಚಾರ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ 223 ಗ್ರಾಮ ಪಂಚಾಯಿತಿಯಲ್ಲಿ ಪ್ರತಿ ಮಂಗಳವಾರ ‘ಮನರೇಗಾ ಮಂಗಳವಾರ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ ತಿಳಿಸಿದ್ದಾರೆ.
    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗ್ರಾಮಗಳಲ್ಲಿ ಮನರೇಗಾ ಯೋಜನೆಯ ಜಾಗೃತಿ ಹಾಗೂ ಪ್ರಗತಿಗೂ ಸಹಾಯಕವಾಗುವ ರೀತಿಯಲ್ಲಿ ಪ್ರತಿ ಮಂಗಳವಾರ ವಿವಿಧ ಚುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಹಾಗೂ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸುವ ಮೂಲಕ, ಕಡ್ಡಾಯವಾಗಿ ಅನುಷ್ಠಾನ ಮಾಡಲು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.
    ‘ಮನರೇಗಾ ಮಂಗಳವಾರ’ ಕಾರ್ಯಕ್ರಮದ ಅಂಗವಾಗಿ ವೈಯಕ್ತಿಕ ಕಾಮಗಾರಿಗಳನ್ನು ಪ್ರಾರಂಭಿಸುವುದು, ಆರೋಗ್ಯ ತಪಾಸಣೆ, ಅಮೃತ ಸರೋವರ ಕೆರೆ ಅಂಗಳದಲ್ಲಿ ಎನ್.ಎಸ್.ಎಸ್. ಅಥವಾ ಎನ್.ಸಿ.ಸಿ. ಅಥವಾ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅಮೃತ ಸರೋವರದ ಬಗ್ಗೆ ಜಾಗೃತಿ ಮೂಡಿಸುವುದು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ, ನೀರು ಸಂರಕ್ಷಣೆ ಕುರಿತು ಪ್ರಬಂಧ, ರಂಗೋಲಿ ಸ್ಪರ್ದೆ, ಗಿಡ ನೆಡುವುದು, ಜಲ ಸಂಜೀವಿನಿ ಜಾಗೃತಿ ಕಾರ್ಯಕ್ರಮ ಮತ್ತು ಕಾಮಗಾರಿಗಳ ಅನುಷ್ಠಾನದ ಬಗ್ಗೆ ಜಾಥಾ ಕಾರ್ಯಕ್ರಮ, ನರೇಗಾ ಯೋಜನೆಯ ದಾಖಲೆಗಳ ಪರಿಶೀಲನೆ, ವಿಶೇಷ ರೋಜಗಾರ ದಿನಾಚರಣೆ, ಬಿ.ಎಫ್.ಟಿ, ಕಾಯಕಬಂಧುಗಳು, ಕಾಯಕ ಮಿತ್ರರಿಗೆ ವಿಶೇಷ ತರಬೇತಿ, ಮಹಿಳಾ ಭಾಗವಹಿಸುವಿಕೆ ಕುರಿತು ತರಬೇತಿ, ಜಾಥಾ, ಕಾರ್ಯಾಗಾರ ಹಾಗೂ ವಿಷಯಾಧಾರಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
    ಪ್ರತಿ ಮಂಗಳವಾರ 10 ಕಾರ್ಯಕ್ರಮಗಳಲ್ಲಿ ಕನಿಷ್ಠ ಮೂರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಈಗಾಗಲೇ ಎಲ್ಲ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರತಿ ಮಂಗಳವಾರ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯಕ್ರಮ ಕೈಗೊಂಡು ಬಡ ರೈತರಿಗೆ ಹಾಗೂ ಬಡ ಕೂಲಿ ಕಾರ್ಮಿಕರಿಗೆ ನೆರವಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ರೈತರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಕೈಗೊಳ್ಳಲು ಕಾಮಗಾರಿ ಆದೇಶ ನೀಡುವುದು, ಹೊಸ ಉದ್ಯೋಗ ಚೀಟಿ ನೀಡುವುದು, ವೈಯಕ್ತಿಕ ಕಾಮಗಾರಿಗಳಿಗೆ 2.50 ಲಕ್ಷ ರೂ.ವರೆಗೆ ನೆರವು ನೀಡಲಾಗುವುದು.
    ಗ್ರಾಮ ಪಂಚಾಯಿತಿ ಹಂತದ ಸಿಬ್ಬಂದಿಗೆ ತರಬೇತಿ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳಬಹುದು. ಉದ್ಯೋಗ ಬೇಡಿಕೆ, ಕೂಲಿ ಹಣ ಪಾವತಿಗೆ ಸಂಬಂಧಿಸಿದಂತೆ ಇತರೆ ಸಮಸ್ಯೆಗಳಿಗೆ ವಿಶೇಷ ರೋಜಗಾರ ದಿನಚಾರಣೆಯಲ್ಲಿ ಗ್ರಾಮಸ್ಥರು ಚರ್ಚಿಸಬಹುದು. ಗ್ರಾಮ ಆರೋಗ್ಯ ಅಭಿಯಾನ, ಜಲಸಂಜೀವನಿ ಮತ್ತು ಜಲಶಕ್ತಿ ಅಭಿಯಾನದ ಬಗ್ಗೆ ಅರಿವು ಹಾಗೂ ಇನೂ ಹಲವಾರು ಕಾರ್ಯಕ್ರಮಗಳು ಒಟ್ಟಾರೆಯಾಗಿ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಅನುಕೂಲಕ್ಕಾಗಿ ವಿನೂತನ ಪ್ರಯೋಗ ಮಾಡಲಾಗುತ್ತಿದೆ ಎಂದು ಸಿಇಒ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts