More

    ವಡ್ಡಮ್ಮ ದೇವಿ ಮಂದಿರದಲ್ಲಿ ನವರಾತ್ರಿ ಉತ್ಸವ ಅ.15ರಿಂದ ಅ.24ರವರೆಗೆ

    ಹಾವೇರಿ: ಇಲ್ಲಿನ ಪಿಬಿ ರಸ್ತೆ ಶಿವಾಜಿ ನಗರದಲ್ಲಿರುವ ಶ್ರೀ ಭುವನೇಶ್ವರಿ (ವಡ್ಡಮ್ಮ) ದೇವಿ ದೇವಸ್ಥಾನ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ಅ.15ರಿಂದ ಅ.24ರವರೆಗೆ ‘ಶರನ್ನವರಾತ್ರಿ ಉತ್ಸವ’ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
    ಅ.15ರಂದು ಸಂಜೆ 6.30ಕ್ಕೆ ಘಟಸ್ಥಾಪನೆ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಹರಸೂರು ಬಣ್ಣದ ಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅ.22ರಂದು ದುರ್ಗಾಷ್ಠಮಿ ನಿಮಿತ್ತ ಸಂಜೆ 4 ಗಂಟೆಗೆ ದುರ್ಗಾ ಹೋಮ ಹಾಗೂ ಪೂರ್ಣಾಹುತಿ ಕಾರ್ಯಕ್ರಮ ಜರುಗಲಿದೆ.
    ಅ.23ರಂದು ಆಯುಧ ಪೂಜೆ ಮಹಾನವಮಿ ಅಂಗವಾಗಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಅ.24ರಂದು ಸಂಜೆ ಶಿವಾಜಿನಗರದಲ್ಲಿ ಅಮ್ಮನವರ ಪಾಲಕಿ ಉತ್ಸವ ಜರುಗಲಿದೆ. ಪ್ರತಿನಿತ್ಯ ಅಮ್ಮನವರಿಗೆ ಅರಿಷಿಣ, ಕುಂಕುಮ, ಕಡಲೆಕಾಳು, ಹಣ್ಣು, ಹೂವು, ಮುತ್ತು, ಮತ್ತಿತರ ವಿಶೇಷ ಅಲಂಕಾರ ಮಾಡಲಾಗುವುದು ಎಂದು ದೇವಸ್ಥಾನ ಸಮಿತಿಯ ಪ್ರಧಾನ ಅರ್ಚಕ ಶಿದ್ದಲಿಂಗಯ್ಯ ಶಾಸ್ತ್ರಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts