More

    ತಹಸೀಲ್ದಾರ್ ಕಚೇರಿ ಸೋರಿಕೆಗೆ ಸಿಗಲಿದೆ ಮುಕ್ತಿ; ‘ವಿಜಯವಾಣಿ’ ವರದಿ ಬೆನ್ನಲ್ಲೇ ಡಿಸಿ ಭೇಟಿ

    ಹಾವೇರಿ: ಕಳೆದ ಐದಾರು ವರ್ಷಗಳಿಂದ ಮಳೆ ನೀರು ಸೋರಿಕೆ ಸಮಸ್ಯೆಯಿಂದ ನಲುಗಿದ್ದ ಹಾವೇರಿ ತಹಸೀಲ್ದಾರ್ ಕಚೇರಿ ಕಟ್ಟಡಕ್ಕೆ ಕೊನೆಗೂ ಮುಕ್ತಿ ಸಿಗಲಿದೆ. ತಹಸೀಲ್ದಾರ್ ಕಚೇರಿ ಕಟ್ಟಡದ ಮೇಲ್ಭಾಗಕ್ಕೆ ಟಿಂಕ್ ಶೀಟ್ ಅಳವಡಿಸುವಂತೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚಿಸಿದ್ದಾರೆ. ಬುಧವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಡಿಸಿ ಕಚೇರಿ ಕಟ್ಟಡ ಸೋರಿಕೆ ಕುರಿತು ವಿಶೇಷ ಮುತುವರ್ಜಿ ವಹಿಸಿ ಪರಿಶೀಲನೆ ನಡೆಸಿದರು. ಭೂದಾಖಲೆಗಳ ಇಲಾಖೆ, ತಹಸೀಲ್ದಾರ್ ಸಿಬ್ಬಂದಿ ಕಚೇರಿ, ಸೇರಿ ಎಲ್ಲೆಡೆ ತೆರಳಿ ಸೋರಿಕೆ ಕುರಿತು ಮಾಹಿತಿ ಪಡೆದರು. ಈ ಕೂಡಲೇ ಮೇಲ್ಭಾಗಕ್ಕೆ ಟಿಂಕ್ ಶೀಟ್ ಅಳವಡಿಸಿ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು. ಈ ಸಮಸ್ಯೆ ಕುರಿತು ‘ಸೋರುತಿಹುದು ತಹಸೀಲ್ದಾರ್ ಕಚೇರಿ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ಯಲ್ಲಿ ಜು.25ರಂದು ವಿಶೇಷ ವರದಿ ಪ್ರಕಟಗೊಂಡಿತ್ತು. ಇಲ್ಲಿನ ರೈಲು ನಿಲ್ದಾಣದ ಎದುರು 14 ವರ್ಷಗಳ ಹಿಂದೆ ನಿರ್ಮಿಸಿರುವ ತಹಸೀಲ್ದಾರ್ ಕಚೇರಿ ಸೋರಿಕೆಯಿಂದ ಉಂಟಾದ ಸಮಸ್ಯೆ ಕುರಿತು ಸವಿಸ್ತಾರವಾಗಿ ವಿವರಿಸಲಾಗಿತ್ತು. ಇದರಿಂದಾಗಿ 200 ವರ್ಷಗಳ ಮಹತ್ವದ ಭೂದಾಖಲೆಗಳು ನೀರಿಗೆ ಆಹುತಿಯಾಗುವ ಭೀತಿ ಎದುರಾಗಿತ್ತು. ‘ವಿಜಯವಾಣಿ’ ವರದಿ ಬೆನ್ನಲ್ಲೇ ಡಿಸಿ ಭೇಟಿ ನೀಡಿ ಮಹತ್ವದ ಆದೇಶ ನೀಡಿದ್ದರಿಂದ ಸಾರ್ವಜನಿಕರು ಹಾಗೂ ಇಲ್ಲಿನ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ.
    ಕೋಟ್:
    ತಹಸೀಲ್ದಾರ್ ಕಚೇರಿಯ ಕೆಲ ಕೊಠಡಿಗಳಲ್ಲಿ ಸೋರಿಕೆ ಸಮಸ್ಯೆಯನ್ನು ಪರಿಶೀಲಿಸಿದ್ದೇನೆ. ಮಳೆಗಾಲ ಮುಗಿದ ಬಳಿಕ ಶಾಶ್ವತವಾಗಿ ವಾಟರ್ ಫ್ರೂಪ್ ಮಾಡಿಸಲಾಗುವುದು. ಸದ್ಯಕ್ಕೆ ಮೇಲ್ಭಾಗದಲ್ಲಿ ಟಿಂಕ್ ಶೀಟ್ ಅಳವಡಿಸುವ ಮೂಲಕ ಸೋರಿಕೆ ತಡೆಗಟ್ಟಲು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
    ರಘುನಂದನ ಮೂರ್ತಿ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts