More

    VIDEO| ಅಗ್ನಿ ಕೊಂಡದಲ್ಲಿ ಮಗು ಹೊತ್ತೊಯ್ದ ಸ್ವಾಮೀಜಿ ನಡೆಗೆ ವ್ಯಾಪಕ ಆಕ್ರೋಶ..!

    ಹಾವೇರಿ: ಒಂದು ಕೈಯಲ್ಲಿ ಮಗುವನ್ನು ಹಿಡಿದು ಅಗ್ನಿ ಕೊಂಡ ತುಳಿದ ಸ್ವಾಮೀಜಿಯೊಬ್ಬರ ನಡೆ ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬಂದಿದೆ.

    ಎಡಗೈಯಲ್ಲಿ ಮಗುವನ್ನು ಎತ್ತಿಹಿಡಿದು ಸ್ವಾಮೀಜಿ ಬೆಂಕಿಯಲ್ಲಿ ನಡೆದಿದ್ದು, ಅಗ್ನಿ ಕೊಂಡದೊಳಗೆ ಮಗು ಹೊತ್ತೊಯ್ದಿದ್ದು ಸರಿನಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಇದು ಮೂಢನಂಬಿಕೆಯ ಪರಮಾವಧಿಯಲ್ವಾ? ಒಂದು ವೇಳೆ ಮಗುವಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ? ಎಂಬಿತ್ಯಾದಿ ಆಕ್ರೋಶದ ಕೂಗು ಕೇಳಿಬರುತ್ತಿವೆ.

    ಇದನ್ನೂ ಓದಿ: ಸಮುದಯ ಇಬ್ಭಾಗ ಮಾಡುವವರ ಬಗ್ಗೆ ಇರಲಿ ಎಚ್ಚರ; ಯಾದವ ಸಮುದಾಯ ಮುಖಂಡರ ಸಲಹೆ

    ಮೊಬೈಲ್​ಗಳಲ್ಲಿ ಮಗು ಎತ್ತಿಹಿಡಿದ ದೃಶ್ಯಗಳು ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಅಷ್ಟಕ್ಕೂ ಈ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ದಸರಾ ಮಹೋತ್ಸದಂದು ನಡೆಯುವ ದುರ್ಗಾದೇವಿ ಜಾತ್ರೆಯಲ್ಲಿ ಘಟನೆ ನಡೆದಿದೆ. ಕಿಚ್ಚು ಹಾಯುವಾಗ ದಾವಣಗೆರೆ ಮೂಲದ ಭಕ್ತರೊಬ್ಬರ ಗಂಡು ಮಗುವನ್ನು ಸ್ವಾಮೀಜಿ ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

    ಒಂದೆರೆಡು ವರ್ಷಗಳಲ್ಲಿ ಮಾತ್ರ ಈ ಥರ ಮಾಡಿದ್ದಾರೆ. ಇದೇನು ಪ್ರತಿವರ್ಷ ನಡೆಯುವುದಿಲ್ಲ. ನಮ್ಮ ಸ್ವಾಮೀಜಿ ಮಾಡಿದ್ದು ಸರಿ ಇದೆ. ಭಕ್ತರೊಬ್ಬರ ಹರಕೆಗಾಗಿ ಪವಾಡ ಪುರುಷರಾದ ಬಸವರಾಜಪ್ಪ ಇದನ್ನು ಮಾಡಿದ್ದಾರೆ ಎನ್ನುತ್ತಾರೆ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು. ರಟ್ಟಿಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts