More

    ಎಸ್‌ಎಫ್‌ಐ ಚಳವಳಿಗೆ 54 ವರ್ಷ; ಬಸವರಾಜ ಎಸ್.

    ಹಾವೇರಿ: ಸರ್ವರಿಗೂ ಶಿಕ್ಷಣ ನೀಡುವ ಸಲುವಾಗಿ ಅವಿರತವಾಗಿ ಶ್ರಮಿಸುತ್ತಿರುವ ಎಸ್‌ಎಫ್‌ಐ ವಿದ್ಯಾರ್ಥಿ ಚಳುವಳಿಗೆ 54ರ ಸಂಭ್ರಮಾಚರಣೆಯ ಸಂದರ್ಭವಿದು ಎಂದು ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಹೇಳಿದರು.
    ಇಲ್ಲಿನ ಶಿವಾಜಿ ನಗರ 2ನೇ ಕ್ರಾಸ್‌ನಲ್ಲಿರುವ ಎಸ್‌ಎಫ್‌ಐ ಕಚೇರಿಯಲ್ಲಿ ಆಯೋಜಿಸಿದ್ದ 54ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ದೇಶದ ಉದ್ದಗಲಕ್ಕೂ ಎಸ್‌ಎಫ್‌ಐ 54 ವರ್ಷಗಳ ಕಾಲ ನಿರಂತರವಾಗಿ ಹೋರಾಡುತ್ತಿದೆ. ಹಲವಾರು ಸಮಸ್ಯೆಗಳನ್ನು ಇಟ್ಟುಕೊಂಡು ನಿರಂತರ ಹೋರಾಟ ಮಾಡುತ್ತಲಿದೆ ಎಂದರು.
    ಶಿಕ್ಷಣ ಉಳ್ಳವರಿಗೆ ಮಾತ್ರ ಸೀಮಿತವಾಗದೇ ಎಲ್ಲರಿಗೂ ಸಿಗುವಂತಾಗಲಿ. ವಿದ್ಯಾರ್ಥಿಗಳು ಸಮಾಜವನ್ನು ಅಧ್ಯಯನ ಮಾಡುವ ಮೂಲಕ ಭಗತ್ ಸಿಂಗ್ ಕಂಡ ಕನಸು ನನಸು ಮಾಡಬೇಕು. 23ನೇ ಎಳೆಯ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್ ಸಿಂಗ್, ಹಾವೇರಿ ನೆಲದ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪರ ಜೀವನ ಚರಿತ್ರೆಯನ್ನು ಓದಿ ವಿದ್ಯಾರ್ಥಿ, ಯುವಜನರು ಸ್ಪೂರ್ತಿ ಪಡೆಯಬೇಕು ಎಂದರು.
    ವಿವೇಕ ಫನಸೆ, ಅರುಣ ಆರೇರ, ಶಿವು ಪಾಟೀಲ, ಪೃಥ್ವಿ ಎಸ್., ಭರತ ಮೂಲಿಮನಿ, ಚೈತ್ರಾ ಶಿವಣ್ಣನವರ, ಭೂಮಿಕಾ ಲಮಾಣಿ , ರಾಧಿಕಾ ಬುಡಗೇರ, ಸುರೇಶ ಆರೇರ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts