More

    ಬರದ ಭೀಕರತೆ ಕಂಡು ದಂಗಾದ ಜೆಡಿಎಸ್; ಜಿಲ್ಲೆಯ ವಿವಿಧೆಡೆ ಬರ ಅಧ್ಯಯನ ತಂಡ ಪರಿಶೀಲನೆ

    ಹಾವೇರಿ: ತಾಲೂಕಿನ ಅಗಡಿ, ಕನವಳ್ಳಿ, ಹೊಸರಿತ್ತಿ, ಹಂದಿಗನೂರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು, ಗ್ರಾಮಗಳಿಗೆ ಬುಧವಾರ ಜೆಡಿಎಸ್ ಬರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲಿಸಿತು. ರೈತರ ಜಮೀನುಗಳಿಗೆ ಭೇಟಿ ನೀಡಿದ ತಂಡ ಬರದ ಭೀಕರತೆ ಕಂಡು ದಂಗಾಯಿತು. ಬರ ಪರಿಸ್ಥಿತಿಯಿಂದ ಹತ್ತಿ, ಶೇಂಗಾ, ಮೆಕ್ಕೆಜೋಳ ಹಾನಿ ಕುರಿತು ಪರಿಶೀಲಿಸಿತು.
    ತಂಡದ ನೇತೃತ್ವ ವಹಿಸಿದ್ದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಮಾತನಾಡಿ, ಬರದಿಂದಾಗಿ ರೈತರ ಸ್ಥಿತಿ ಶೋಚನೀಯವಾಗಿದೆ. ನದಿಗಳು ಬಹುತೇಕ ಬತ್ತಿ ಹೋಗಿದ್ದು ಜಲಾಶಯಗಳ ನೀರಿನ ಮಟ್ಟ ಕುಸಿಯಲಾರಂಭಿಸಿದೆ. ಅಳಿದುಳಿದ ಬೆಳೆ ರಕ್ಷಿಸಿಕೊಳ್ಳಲು ಸಮರ್ಪಕವಾದ ವಿದ್ಯುತ್ತಿನ ಕೊರತೆ, ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲ, ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲ. ದನಕರುಗಳಿಗೆ ಮೇವಿನ ಅಭಾವ ತಲೆದೂರಿದೆ. ಇಂತಹ ಸ್ಥಿತಿಯಲ್ಲಿ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾದ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಆರೋಪ ಹೊರೆಸುತ್ತಿದೆ ಎಂದರು.
    ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗಿವೆ. ರಾಜ್ಯದ ರೈತರ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಬರ ಆವರಿಸಿ ತಿಂಗಳು ಉರುಳುತ್ತಿದ್ದರೂ ರೈತರಿಗೆ ನಯಾ ಪೈಸೆ ಪರಿಹಾರವಾಗಲಿ, ಧೈರ್ಯ ತುಂಬುವ ಕೆಲಸವಾಗಲಿ ನಡೆಯದಿರುವುದರಿಂದ ಆಶ್ಚರ್ಯ ಮೂಡಿಸಿದೆ. ಈ ಕೂಡಲೇ ರೈತರಿಗೆ ಪ್ರತಿ ಎಕರೆಗೆ 25,000 ರೂ. ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
    ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ರೈತರ ನೆರವಿನಿಂದ ರಾಜ್ಯದಲ್ಲಿ 136 ಸೀಟು ಪಡೆದಿರುವ ಸರ್ಕಾರ ಐದು ಗ್ಯಾರಂಟಿ ಘೋಷಿಸಿದಂತೆ ಆರನೇಯ ಗ್ಯಾರಂಟಿಯಾಗಿ ರಾಜ್ಯದ ರೈತರ ಸಾಲ ಮನ್ನಾ ಘೋಷಿಸಬೇಕು ಎಂದು ಆಗ್ರಹಿಸಿದರು.
    ಪಕ್ಷದ ಪದಾಧಿಕಾರಿಗಳಾದ ಗುರುರಾಜ ಹುಣಸಿಮರದ, ಕೆ.ಎಸ್.ಸಿದ್ದಬಸಪ್ಪ ಯಾದವ, ರಾಜಹ್ಮದ ಜೆ.ಎ.ಪಿ. ಪಠಾಣ, ಮಂಜುನಾಥ ಗೌಡಶಿವಣ್ಣವರ, ಮಹಾಂತೇಶ ಬೇವಿನಹಿಂಡಿ, ಎಸ್.ಎಲ್.ಕಾಡದೇವರಮಠ, ಮಲ್ಲಿಕಾರ್ಜುನ ಅರಳಿ, ಅಮೀರಜಾನ ಬೇಪಾರಿ, ವೀರಭದ್ರಪ್ಪ ಅಮರಪ್ಪನವರ, ಶರಣಪ್ಪ ಹನುಮನಹಳ್ಳಿ, ಶಿವಕುಮಾರ ಅರಳಿ, ಪುಟ್ಟಪ್ಪ ಬಾರ್ಕಿ, ಧರ್ಮವ್ವ ಮರಾಠಿ, ಬಾಬುಜಾನ ಸುಂಕದ, ತಿರಕನಗೌಡ ಪಾಟೀಲ, ಅಶೋಕ ಹನುಮನಹಳ್ಳಿ, ದುರಗೇಶ ಮಡಿವಾಳರ, ಸಿದ್ದಲಿಂಗೇಶ ಹಾವಿನಾಳ, ರಾಜೇಶ ಆನಿಶೆಟ್ಟರ, ನಾಗಪ್ಪ ಮರಾಠಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts