More

    ಹಾವೇರಿಯಲ್ಲಿ ಮುಗಿಲು ಮುಟ್ಟಿದ ಹೋಳಿ ಸಂಭ್ರಮ

    ಹಾವೇರಿ: ಯಾಲಕ್ಕಿ ಕಂಪಿನ ಹಾವೇರಿ ನಗರದಲ್ಲಿ ಬುಧವಾರ ಹೋಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿತ್ತು. ಗಲ್ಲಿ ಗಲ್ಲಿಗಳಲ್ಲಿ ಬಣ್ಣದೋಕುಳಿಯ ವೈಭವ ಮನೆ ಮಾಡಿತ್ತು. ಮಕ್ಕಳು, ಯುವಕ- ಯುವತಿಯರು, ಮಹಿಳೆಯರ ಹಾದಿಯಾಗಿ ಎಲ್ಲರೂ ಬಣ್ಣದಲ್ಲಿ ಮಿಂದೆದ್ದರು.
    ನಗರದಲ್ಲಿ ಹೋಳಿ ಸಂಭ್ರಮ ಮಾ.7ರ ರಾತ್ರಿಯಿಂದಲೇ ಶುರುವಾಗಿತ್ತು. ನಗರದ ಯಾಲಕ್ಕಿ ಓಣಿಯಲ್ಲಿ ಪ್ರತಿಷ್ಠಾಪಿಸಿದ್ದ ಕಾಮಣ್ಣ- ರತಿ ಪ್ರತಿಮೆ ಎದುರು ರಾತ್ರಿ 11 ಗಂಟೆಗೆ ಬೃಹತ್ ಡಿಜೆ ಸದ್ದಿನೊಂದಿಗೆ ಅಡ್ಡ ಸೋಗಿನ ಮೆರವಣಿಗೆ ಶುರುವಾಗಿತ್ತು. ವಿಷ್ಣು ದಶಾವತಾರ, ಶ್ರೀರಾಮಚಂದ್ರ, ಆಂಜನೇಯ, ಯಮ ಧರ್ಮರಾಜ, ಚಿತ್ರಗುಪ್ತ, ವೀರ ಸಾವರ್ಕರ, ಮತ್ತಿತರ ವೇಷಧಾರಿಗಳು ಅಡ್ಡ ಸೋಗು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ಬೆಳಗ್ಗೆ 6 ಗಂಟೆವರೆಗೆ ಮೆರವಣಿಗೆ ನಗರದ ಪ್ರಮುಖ ಬಡಾವಣೆಗಳಲ್ಲಿ ಸಾಗಿ ಯಾಲಕ್ಕಿ ಓಣಿಯಲ್ಲಿ ಮುಕ್ತಾಯಗೊಂಡಿತು.
    ಬೆಳಗ್ಗೆಯಿಂದಲೇ ಚಿಣ್ಣರು, ಯುವಕ- ಯುವತಿಯರು, ಮಹಿಳೆಯರು, ವೃದ್ಧರು ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು. ಯಾಲಕ್ಕಿ ಓಣಿ, ಸುಭಾಷ ವೃತ್ತ, ಹುಕ್ಕೇರಿ ಮಠ ರಸ್ತೆ, ಮೇಲಿನಪೇಟೆ, ಎಂಜಿ ರಸ್ತೆ, ಎಲ್‌ಬಿಎಸ್ ಮಾರ್ಕೆಟ್, ಬಸವೇಶ್ವರ ನಗರ, ಅಶ್ವಿನಿ ನಗರ, ವಿದ್ಯಾನಗರ ಸೇರಿದಂತೆ ಎಲ್ಲೆಡೆ ಹೋಳಿ ಹಬ್ಬದ ಸಡಗರ ಕಳೆಗಟ್ಟಿತ್ತು. ಹಲಗೆ ಭಾರಿಸುತ್ತ ಪರಸ್ಪರ ಬಣ್ಣ ಎರಚುತ್ತ ಹಬ್ಬ ಆಚರಿಸಿದ್ದು ಕಂಡು ಬಂತು.
    ದ್ಯಾಮವ್ವನ ಗುಡಿ ಪಾದಗಟ್ಟಿ ಬಳಿ ಚೌಡಿ ಓಣಿಯಲ್ಲಿ ಪ್ರತಿಷ್ಠಾಪಿಸಿದ್ದ ಸರ್ಕಾರಿ ಕಾಮಣ್ಣ-ರತಿ ದಹನ ಮಾಡಿದ ಬಳಿಕ ವಿವಿಧ ಬಡಾವಣೆಗಳ ಕಾಮಣ್ಣ ಸಮಿತಿ ವತಿಯಿಂದ ಕಾಮ ದಹನ ಮಾಡಲಾಯಿತು. ಮಧ್ಯಾಹ್ನ ಯಾಲಕ್ಕಿ ಓಣಿಯಿಂದ ೀಕಳಿ ಬಂಡಿ ಮೆರವಣಿಗೆ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಂಜೆ ವೇಳೆಗೆ ಮೆರವಣಿಗೆ ಸಮಾಪ್ತಿಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts