More

    ಶ್ರೀ ದ್ಯಾಮವ್ವದೇವಿ ಓಕುಳಿಯಲ್ಲಿ ಮಿಂದೆದ್ದ ಭಕ್ತರು; ಪರಸ್ಪರ ಕುಂಕುಮ- ಭಂಡಾರ ಹಚ್ಚಿ ಹೋಳಿ ಹಬ್ಬ ಆಚರಿಸಿದ ಹಾವೇರಿ ಜನತೆ

    ಹಾವೇರಿ: ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಕುಂಕುಮ- ಭಂಡಾರದ ಓಕುಳಿ ಸಂಭ್ರಮಾಚರಣೆ ಅದ್ದೂರಿಯಾಗಿ ಜರುಗಿತು. ಸಾವಿರಾರು ಭಕ್ತರು ದೇವಿಯ ಮೆರವಣಿಗೆಯಲ್ಲಿ ಪಾಲ್ಗೊಂಡು ಪರಸ್ಪರ ಕುಂಕುಮ- ಭಂಡಾರ ಎರಚುವ ಮೂಲಕ ಹೋಳಿ ಹಬ್ಬ ಆಚರಿಸಿದರು.
    ಸಂಜೆ 4 ಗಂಟೆವರೆಗೆ ನಗರದ ಚೌತಮನಿ ಕಟ್ಟೆಯಲ್ಲಿ ನಿರ್ಮಿಸಿರುವ ಮಹಾಮಂಟಪದಲ್ಲಿ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತರು ಹಣ್ಣುಕಾಯಿ, ನೈವೇದ್ಯ, ಹರಕೆ, ಮುಡುಪು ಸಲ್ಲಿಸಿ ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು. ನಂತರ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಟಪದಿಂದ ಟ್ರ್ಯಾಕ್ಟರ್‌ನಲ್ಲಿ ದೇವಿಯನ್ನು ಕೂರಿಸಿ ಮೆರವಣಿಗೆ ಮೂಲಕ ಗಡಿಗೆ ಕಳುಹಿಸುವ ಮೆರವಣಿಗೆ ಆರಂಭಗೊಂಡಿತು.
    ಈ ಸಂದರ್ಭದಲ್ಲಿ ಭಕ್ತರು ಕುಂಕುಮ, ಭಂಡಾರದಿಂದ ಓಕುಳಿ ಆಡಿದರು. ಎಂಜಿ ರಸ್ತೆಯ ಚೌತಮನಿ ಕಟ್ಟೆಯಿಂದ ಹುಕ್ಕೇರಿಮಠದವರೆಗೆ ಬೃಹತ್ ಮೆರವಣಿಗೆ ಸಾಗಿತು. ಮೆರವಣಿಗೆ ಉದ್ದಕ್ಕೂ ಭಕ್ತರು ಕುಂಕುಮ- ಭಂಡಾರದಲ್ಲಿ ಮಿಂದೆದ್ದಿದ್ದರು. ಯುವಕರು, ಮಕ್ಕಳು ಹಲಗೆ ಭಾರಿಸಿ, ನೃತ್ಯ ಮಾಡಿ ಸಂಭ್ರಮಿಸಿದರು.
    ಫೆ.5ರಂದು ಬೆಳಗ್ಗೆ 10 ಗಂಟೆಗೆ ದೇವಸ್ಥಾನದಲ್ಲಿ ದ್ಯಾಮವ್ವ ದೇವಿಯನ್ನು ಪುನರ್ ಪ್ರತಿಷ್ಠಾಪಿಸಿ ದೇವಿಗೆ ಕ್ಷೀರಾಭಿಷೇಕ, ಚಂಡಿಪಾರಾಯಣ ನಡೆಸಲಾಗುತ್ತದೆ. ಇದರೊಂದಿಗೆ ಈ ವರ್ಷದ ಜಾತ್ರಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts