More

    ಹಾವೇರಿ ಕ್ಷೇತ್ರದಲ್ಲಿ ಶೇ.77.57ರಷ್ಟು ಮತದಾನ; ಈ ಬಾರಿ ಶೇ.3.5ರಷ್ಟು ಪ್ರಮಾಣ ಹೆಚ್ಚಳ

    ಹಾವೇರಿ: ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಒಟ್ಟಾರೆ ಶೇ.77.57ರಷ್ಟು ಆಗಿದೆ. ಕಳೆದ ಬಾರಿಗಿಂತ ಶೇ.3.5ರಷ್ಟು ಹೆಚ್ಚಳ ಕಂಡಿರುವುದು ಅಧಿಕಾರಿ ವರ್ಗ ನಿಟ್ಟುಸಿರು ಬಿಡುವಂತೆ ಮಾಡಿದೆ. 2014ರಲ್ಲಿ ಶೇ.71.59ರಷ್ಟು ಮತದಾನ ಆಗಿತ್ತು. 2019ರಲ್ಲಿ ಶೇ.74.01ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.80ಕ್ಕಿಂತ ಹೆಚ್ಚು ಮತದಾನ ಆಗುವಂತೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಸೇರಿದಂತೆ ಇತರ ಅಧಿಕಾರಿ ವರ್ಗ ಗುರಿ ಇಟ್ಟುಕೊಂಡಿತ್ತು. ಇದಕ್ಕಾಗಿ ಹಲವು ರೀತಿಯ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿತ್ತು. ಯುವ ಮತದಾರರು ಹಾಗೂ ನವ ಮತದಾರರ ನೋಂದಣಿಗೆ ವಿಶೇಷ ಒತ್ತು ಕೊಟ್ಟಿತ್ತು. ಈ ಎಲ್ಲ ಅಂಶಗಳು ಹಾಗೂ ಮತದಾರರು ಸ್ವಯಂಪ್ರೇರಣೆಯಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಪರಿಣಾಮ ಮತದಾನ ಪ್ರಮಾಣ ಹೆಚ್ಚಳವಾಗಿದೆ ಎನ್ನಲಾಗಿದೆ. ಶೇ.80ರಷ್ಟು ಮತದಾನ ಆಗದಿದ್ದರೂ, ಬಿಸಿಲಿನ ಧಗೆಯ ನಡುವೆಯೂ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಮತದಾನ ಆಗಿರುವುದು ಸಮಾಧಾನ ಮೂಡಿಸಿದೆ.
    ಹಿರೇಕೆರೂರ ಹೆಚ್ಚು, ಶಿರಹಟ್ಟಿ ಕಡಿಮೆ
    ಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿ ಶೇ.82.62ರಷ್ಟು ಮತದಾನದ ಮೂಲಕ ಅತಿ ಹೆಚ್ಚು ಮತದಾನವಾಗಿದ್ದು, ಶಿರಹಟ್ಟಿ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇ.72.02ರಷ್ಟು ಮತದಾನವಾಗಿದೆ.

    ವಿಧಾನಸಭಾವಾರು ಅಂಕಿ- ಅಂಶ

    ವಿಧಾನಸಭಾ ಕ್ಷೇತ್ರ ಪ್ರಮಾಣ
    ಹಿರೇಕೆರೂರ ಶೇ.82.62
    ಹಾನಗಲ್ಲ ಶೇ.82.35
    ಬ್ಯಾಡಗಿ ಶೇ.81.97
    ರಾಣೆಬೆನ್ನೂರ ಶೇ.78.48
    ಹಾವೇರಿ ಶೇ.77.24
    ಗದಗ ಶೇ.74.25
    ರೋಣ ಶೇ.73.13
    ಶಿರಹಟ್ಟಿ ಶೇ.72.02

    ಕೋಟ್:
    ಮತದಾನದ ಗೌಪ್ಯತೆ ಉಲ್ಲಂಘಿಸಿ ಮತದಾನ ಪ್ರಕ್ರಿಯೆ ವಿಡಿಯೋ ಮಾಡಿ ಹರಿಬಿಟ್ಟ ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಉಳಿದಂತೆ ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದಿದೆ. ಕಳೆದ ಬಾರಿಗಿಂತ ಹೆಚ್ಚಿನ ಮತದಾನವಾಗಿದೆ.
    – ರಘುನಂದನ ಮೂರ್ತಿ, ಜಿಲ್ಲಾ ಚುನಾವಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts