More

    ಶೋಷಿತರ ಗಟ್ಟಿ ಧ್ವನಿ ಡಾ.ಜಗಜೀವನರಾಂ; ಉಡಚಪ್ಪ ಮಾಳಗಿ

    ಹಾವೇರಿ: ಡಾ.ಜಗಜೀವನರಾಂ ಅವರು ಶೋಷಿತ ಸಮಾಜಕ್ಕಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳು ಜನಿಸದೇ ಹೋಗಿದ್ದರೇ ಶೋಷಿತರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಿರಲಿಲ್ಲ. ಅವರು ಶೋಷಿತ ವರ್ಗದ ಗಟ್ಟಿ ಧ್ವನಿಯಾಗಿದ್ದಾರೆ ಎಂದು ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಹೇಳಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಜಿಲ್ಲಾ ಡಿಎಸ್‌ಎಸ್, ಎಸ್‌ಸಿ, ಎಸ್‌ಟಿ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವತಿಯಿಂದ ಆಯೋಜಿಸಿದ್ದ ಸಮಾಜ ಸುಧಾರಕ, ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 37ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗಜೀವನರಾಂ ಅವರು ಸಮಾಜದ ಏಳ್ಗೆಯೊಂದಿಗೆ ಸರ್ವ ಸಮಾಜದ ಉದ್ಧಾರಕ್ಕಾಗಿ ಹಾಗೂ ಅಸಮಾನತೆ ಹೊಗಲಾಡಿಸಲು ಹಲವು ಸಾಂವಿಧಾನಿಕ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಶೋಷಿತರ, ನೊಂದವರ ಧ್ವನಿಯಾಗಿ ಜನಸಾಮಾನ್ಯರ ಜೀವನದ ಉದ್ಧಾರಕ್ಕಾಗಿ ತಮ್ಮ ಜೀವನ ಪಣಕ್ಕಿಟ್ಟು ಹೋರಾಡಿದರು ಎಂದರು.
    ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ, ದಲಿತ ಮುಖಂಡರಾದ ಮಂಜಪ್ಪ ಮರೋಳ, ವಿಭೂತಿ ಶೆಟ್ಟಿ, ಮಲ್ಲೇಶ ಕಡಕೋಳ, ಶಿವರಾಜ ಹರಿಜನ, ಜಗದೀಶ ಹರಿಜನ, ರಮೇಶ ಸೀತಗೊಂಡ, ಬಸವರಾಜ ಹರಿಜನ, ಬಸವಣ್ಣೆಪ್ಪ ಹಳಿಹಾಳ, ಹನುಮಂತಪ್ಪ ಹಂಸಿ, ವಿವೇಕಾನಂದ ಇಂಗಳಗಿ, ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts