More

    28 ಚೆಕ್‌ಪೋಸ್ಟ್‌ಗಳ ಮೇಲೆ ಹದ್ದಿನ ಕಣ್ಣು ! ; ಡಿಸಿ ಕಚೇರಿಯಲ್ಲಿದೆ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ ; ಕ್ಷಣ ಕ್ಷಣವೂ ಸಿಸಿಟಿವಿ, ಜಿಪಿಎಸ್ ಮಾನಿಟರಿಂಗ್

    ಹಾವೇರಿ: ಚುನಾವಣಾ ಅಕ್ರಮಗಳ ತಡೆಗಾಗಿ ಹಾವೇರಿ ಲೋಕಸಭಾ ಕ್ಷೇತ್ರದ ಗದಗ-ಹಾವೇರಿ ಜಿಲ್ಲೆಗಳಲ್ಲಿ 28 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ, ಫ್ಲೈಯಿಂಗ್ ಸ್ಕಾೃಡ್‌ಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಹದ್ದಿನ ಕಣ್ಣು ಇಡಲಾಗಿದೆ. ಡಿಸಿ ಕಚೇರಿಯಲ್ಲಿ ಸ್ಥಾಪಿಸಿರುವ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ ಮೂಲಕ ಈ ಬಾರಿ ಎಲ್ಲವನ್ನೂ ಒಂದೇ ಕಡೆ ಮಾನಿಟರಿಂಗ್ ಮಾಡುವ ವ್ಯವಸ್ಥೆ ರೂಪಿಸಲಾಗಿದೆ.
    ಗುರುವಾರವಷ್ಟೇ ಹಾವೇರಿ ಮತ್ತು ಗದಗ ಜಿಲ್ಲೆಯ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಮಾದರಿ ನೀತಿ ಸಂಹಿತೆ ಅನುಷ್ಠಾನ ಅಧಿಕಾರಿಗಳ ಸಮನ್ವಯ ಸಭೆ ನಡೆಸಿ, ಸುಗಮ ಚುನಾವಣೆಗಾಗಿ ಉಭಯ ಜಿಲ್ಲೆಗಳಲ್ಲಿ ಏಕ ಮಾದರಿಯ ಕಾರ್ಯಾಚರಣೆಗೆ ನಿರ್ಧರಿಸಿದ್ದರು.
    ಇದರ ಭಾಗವಾಗಿ ರಾಜ್ಯ ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಚೆಕ್‌ಪೋಸ್ಟ್‌ಗಳ ಮೇಲೆ ನೇರ ನಿಗಾ ವಹಿಸುವ ವ್ಯವಸ್ಥೆ ಮಾಡಲಾಗಿದೆ. ಡಿಸಿ ಕಚೇರಿ ಸಭಾಂಗಣದಲ್ಲಿ ಈ ಬಾರಿ ಒಂದೇ ಕಡೆಗೆ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದ್ದು, ಇಲ್ಲಿಂದಲೇ ಎಲ್ಲ ಚೆಕ್‌ಪೋಸ್ಟ್‌ಗಳ ವಿಡಿಯೋ ವೀಕ್ಷಣೆ, ದೂರು ಸ್ವೀಕಾರ, ಮತ್ತಿತರ ಚಟುವಟಿಕೆ ನಡೆಸಲಾಗುತ್ತಿದೆ. ಫ್ಲೈಯಿಂಗ್ ಸ್ಕ್ವಾಡ್ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಯಾವ ವಾಹನ ಎಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೆ ಎಂದು ಕಣ್ಗಾವಲು ಇರಿಸಲಾಗಿದೆ. ಚುನಾವಣಾ ದೂರುಗಳು ಸ್ವೀಕರಿಸಿದ ತಕ್ಷಣ ಫ್ಲೈಯಿಂಗ್ ಸ್ಕ್ವಾಡ್‌ಗೆ ರವಾನಿಸಲಾಗುವುದು. ಕರೆ ಸ್ವೀಕರಿಸಿದ ತಕ್ಷಣ ತಂಡ ಸ್ಥಳಕ್ಕೆ ಹಾಜರಾಗಲಿದೆ.
    ಮಾಧ್ಯಮ, ಜಾಲತಾಣಗಳ ಮೇಲೆ ನಿಗಾ
    ಚುನಾವಣಾ ದೂರು ಹಾಗೂ ಮಾಹಿತಿ ಸ್ವೀಕಾರ, ಮಾಧ್ಯಮಗಳಲ್ಲಿ ಭಿತ್ತರವಾಗುವ ಸುದ್ದಿಗಳು ಹಾಗೂ ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಮೇಲೆ ನಿಗಾವಹಿಸಲು ಎಂ.ಸಿ.ಎಂ.ಸಿ. ತಂಡ, ಚೆಕ್ ಪೋಸ್ಟ್‌ಗಳ ಕಾರ್ಯಾಚರಣೆಯನ್ನು ವಿಕ್ಷೀಸಲು ಕೇಂದ್ರೀಕೃತ ವ್ಯವಸ್ಥೆಯುಳ್ಳ ಕಂಟ್ರೋಲ್ ರೂಂಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸ್ಥಾಪಿಸಲಾಗಿದೆ. ದಿನದ 24 ತಾಸು ಕಾರ್ಯನಿರ್ವಹಿಸಲು ಮೂರು ಪಾಳೆಯಲ್ಲಿ ಸಿಬ್ಬಂದಿ ನಿಯೋಜಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.
    ಕೋಟಿ ರೂ. ಮೌಲ್ಯದ ಎರಡು ಲಾರಿ ಲಿಕ್ಕರ್ ಸೀಜ್
    ಸೂಕ್ತ ದಾಖಲೆಗಳನ್ನು ಹೊಂದದೇ ಮದ್ಯ ಸಾಗಣೆ ಮಾಡುತ್ತಿದ್ದ ಎರಡು ಲಾರಿಗಳನ್ನು ಹಾಗೂ ಮದ್ಯವನ್ನು ಪ್ರತ್ಯೇಕ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಲಾರಿ ಮತ್ತು ಲಾರಿಯಲ್ಲಿ ಸಾಗಿಸುತ್ತಿದ್ದ ಮದ್ಯದ ಮೌಲ್ಯ ಸೇರಿದಂತೆ ಒಟ್ಟು 1.20 ಕೋಟಿ ರೂ. ಮೊತ್ತದ ಮದ್ಯ ಮತ್ತು ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
    ಮಾ.18ರಂದು ವಾಹನಕ್ಕೆ ಜಿಪಿಎಸ್ ಅಳವಡಿಸದೇ ಹಾಗೂ ಸರಕು ರವಾನೆಯಾದ ದಿನಾಂಕ ಮತ್ತು ಸಮಯ ನಮೂದು ಮಾಡದೇ ಮದ್ಯ ಸಾಗಣೆ ಮಾಡುತ್ತಿದ್ದ ಲಾರಿ ಹಾಗೂ 44,97,548 ರೂ. ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡನೇ ಪ್ರಕರಣದಲ್ಲಿ 15,30,114 ರೂ. ಮೊತ್ತದ 9,450 ಬಲ್ಕ್ ಲೀಟರ್ ಫ್ರೀಜ್ಡ್ ಬಿಯರ್ ಹಾಗೂ ಲಾರಿ ಜಪ್ತಿ ಮಾಡಲಾಗಿದೆ ಎಂದು ಡಿಸಿ ರಘುನಂದನ ಮೂರ್ತಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts