More

    ಚೈನ್‌ಲಿಂಕ್ ಕಂಪನಿಯಿಂದ ವಂಚನೆ ಆರೋಪ

    ಹಾವೇರಿ: ನಗರದ ಹಾನಗಲ್ಲ ರಸ್ತೆಯ ಜಿ-7 ಕಟ್ಟಡದಲ್ಲಿ ಅಸರ್ಟ್‌ (ಎಎಸ್‌ಒಆರ್‌ಟಿ) ಎಂಬ ಚೈನ್‌ಲಿಂಕ್ ಸಂಸ್ಥೆಯು ಅನುಮಾನಸ್ಪದವಾಗಿ ವ್ಯವಹಾರ ಮಾಡುತ್ತಿದ್ದು, ಉದ್ಯೋಗದ ನೆಪದಲ್ಲಿ ಜನರಿಗೆ ವಂಚಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
    ಅಸರ್ಟ್‌ ಸಂಸ್ಥೆಯು ಚೈನ್ ಲಿಂಕ್ ವ್ಯವಹಾರದ ಮೂಲಕ ಉದ್ಯೋಗದ ಆಸೆ ತೋರಿಸಿ ನಿರುದ್ಯೋಗಿ ಯುವಕ- ಯುವತಿಯರಿಗೆ ಮೋಸ ಮಾಡುತ್ತಿರುವುದು ಕಂಡುಬಂದಿದೆ. ಈ ಕಂಪನಿಯವರು ಹಾವೇರಿ ಹೊರತುಪಡಿಸಿ ಬೇರೆ ಬೇರೆ ಪ್ರದೇಶದ ಯುವಕ- ಯುವತಿಯರಿಗೆ ಉದ್ಯೋಗ ನೀಡುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ಇದರಿಂದ ಈಗಾಗಲೇ ಸಾಕಷ್ಟು ಜನ ಮೋಸ ಹೋಗಿದ್ದಾರೆ. ಆದರೆ, ನೊಂದವರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಅಭಿಷೇಕ ಗುಡಗೂರ ನಗರದಲ್ಲಿ ಮಂಗಳವಾರ ಎಸ್‌ಪಿ ಅಂಶುಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
    ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ, ಶಶಿಧರ ಹೊಸಳ್ಳಿ, ಜಿಲ್ಲಾ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ನಗರ ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಕೋಡಿತ್ಕರ, ನಿಖಿಲ ಡೊಗ್ಗಳ್ಳಿ, ಸೋಮು ಅಂಗೂರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts