More

    ಅಲೆಮಾರಿ ಸಮುದಾಯವರಿಗೆ ಮನೆ, ವಸತಿ ಶಾಲೆ ನಿರ್ಮಿಸಿ

    ಹಾವೇರಿ: ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗಾಗಿ ರಾಜ್ಯ ಸರ್ಕಾರ ಮನೆ, ವಸತಿ ಶಾಲೆ, ರುದ್ರಭೂಮಿ, ಸೇರಿದಂತೆ ಮತ್ತಿತರ ವ್ಯವಸ್ಥೆ ಕಲ್ಪಿಸಬೇಕು ಎಂದು ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಒತ್ತಾಯಿಸಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ ಪ್ರವರ್ಗ 1ಕ್ಕೆ ಸೇರಿದ ಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ 46 ಜಾತಿಗಳನ್ನೊಳಗೊಂಡ ಅನೇಕ ಕುಟುಂಗಳು ಬೀದಿಬದಿಯಲ್ಲಿ ಸರ್ಕಾರಿ, ಖಾಸಗಿ ಖಾಲಿ ನಿವೇಶನಗಳಲ್ಲಿ ಗುಡಿಸಲು, ಗುಂಡಾರ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬಾಂಡೆ ವ್ಯಾಪಾರ, ಸೂಜಿ, ದಾರ, ಪಿನ್ನು, ಬೀಗ ರಿಪೇರಿ, ಭಿಕ್ಷಾಟನೆ, ಗಿಣಿ ಭವಿಷ್ಯ ಹೇಳುವುದು, ಸೇರಿ ಇತರ ಕೆಲಸಗಳ ಮೂಲಕ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಸುಮಾರು 10 ವರ್ಷಕ್ಕಿಂತ ಮೇಲ್ಪಟ್ಟು ವಾಸಿಸುತ್ತಿರುವವರ ಹೆಸರಿಗೆ ಆ ಜಾಗ ನೀಡುವುದು, ರುದ್ರಭೂಮಿಗಾಗಿ ಸರ್ಕಾರ ಜಾಗ ನೀಡುವುದು, ವಸತಿ ಶಾಲೆಗಳನ್ನು ಆರಂಭಿಸುವುದು, ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
    ಸುದ್ದಿಗೋಷ್ಠಿಯಲ್ಲಿ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ, ಹುಲ್ಲಪ್ಪ ಜಾಡರ, ಪಾಂಡುರಂಗ ಭಿಸೆ, ಆನಂದ ಜಾಧವ, ಇತರರು ಇದ್ದರು.
    ಮೈಸೂರಿನಲ್ಲಿ ಸಮಾವೇಶ ಜ.28ರಂದು
    ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ಜ.28ರಂದು ಬೆಳಗ್ಗೆ 9.30ಕ್ಕೆ ಮೈಸೂರಿನ ಪುರಭವನದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ, ಪ್ರತಿಭಾ ಪುರಸ್ಕಾರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದಲೇ ಸಮುದಾಯದವರು ಭಾಗವಹಿಸಲಿದ್ದಾರೆ. ಆಗಲೂ ಸರ್ಕಾರ ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ರೂಪಿಸಲಾಗುವುದು ಎಂದು ರವೀಂದ್ರ ಶೆಟ್ಟಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts