More

    ಸಿಸಿ ಕ್ಯಾಮರಾ ಕಣ್ಗಾವಲಲ್ಲಿ ಟೊಮ್ಯಾಟೋ ಮಾರಾಟ …!

    ಹಾವೇರಿ/ ಅಕ್ಕಿಆಲೂರ: ಜುವೆಲ್ಲರಿ ಶಾಪ್, ಬಟ್ಟೆ ಅಂಗಡಿ ಹಾಗೂ ದೊಡ್ಡ ದೊಡ್ಡ ಮಾಲ್ ಗಳಲ್ಲಿ ವಸ್ತುಗಳು ಕಳ್ಳತನವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಸಿ ಕ್ಯಾಮರಾ ಅಳವಡಿಸುವುದು ಸಾಮಾನ್ಯ. ಆದರೆ‌, ಬೀದಿಬದಿ ಸಂತೆಯಲ್ಲಿ ತರಕಾರಿ ಮಾರಾಟಕ್ಕೆ ಸಿಸಿ ಕ್ಯಾಮರಾ ಅಳವಡಿಸಿರುವುದನ್ನು ಬಹುಶಃ ಎಲ್ಲಿಯೂ ಕೇಳಿರಲಿಕ್ಕಿಲ್ಲ.

    ಆದರೆ, ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನಲ್ಲಿ ಮಂಗಳವಾರದ ಸಾಲು ಸಂತೆಯಲ್ಲಿ ಟೊಮ್ಯಾಟೊ ವ್ಯಾಪಾರಿಯೊಬ್ಬ ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ತರಕಾರಿ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಸದ್ಯ ಟೊಮ್ಯಾಟೊಗೆ ಬಂಗಾರದ ಬೆಲೆ ಬಂದಿದೆ. ಕೆಜಿಗೆ ೧೦೦ ರೂ. ದಾಟಿದೆ.

    ಅಕ್ಕಿಆಲೂರಿನಲ್ಲಿ ಮಂಗಳವಾರ ನಡೆಯುವ ಸಾಲು ಸಂತೆಯಲ್ಲಿ ಕೃಷ್ಣಪ್ಪ ಜೋಗಪ್ಪನವರ ಎಂಬ ವ್ಯಾಪಾರಿ ತನ್ನ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರು. ಮಳೆ ಸಮೃದ್ಧಿಯಿಂದ ಕೂಡಿದ್ದಾಗ 22 ಕೆಜಿಯ ಬಾಕ್ಸ್ ಗೆ 700- 800 ರೂ. ಇದ್ದ ಟೊಮ್ಯಾಟೊ ಈಗ ಮಳೆಯ ಕೊರತೆಯಿಂದ 22 ಕೆಜಿ ಬಾಕ್ಸ್ ಗೆ ಬರೊಬ್ಬರಿ 2300ರಿಂದ‌ 2500 ರೂ. ಗಡಿದಾಟಿದೆ.

    ಮೊದಲು ಒಂದು ಬಾಕ್ಸ್ ಟೊಮ್ಯಾಟೊಗೆ 300-500 ರೂ. ಉಳಿಸುತ್ತಿದ್ದ ವ್ಯಾಪಾರಿಗಳು ಈಗ 100 ರೂ. ಉಳಿದರೆ ಸಾಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ನೀರಾವರಿ ಸೌಲಭ್ಯದಿಂದ ಪ್ರತಿವಾರ ಸಾಕಷ್ಟು ಟೊಮ್ಯಾಟೊ ಬೆಳೆಯುತ್ತಿದ್ದವು. ಆದರೆ ಈಗ ಮಳೆಯೂ ಇಲ್ಲ, ಬೋರ್ ಗಳಲ್ಲಿ ನೀರೂ ಇಲ್ಲ. ಕೆಲವು ಬೋರ್ ಗಳಲ್ಲಿ ಸರಿಯಾಗಿ ನೀರು ಬರುತ್ತಿರುವ ರೈತರು ಬೆಳೆದ ಟೊಮ್ಯಾಟೊ ಹಣ್ಣುನ್ನು ಅವರು ಕೇಳಿದಷ್ಟು ಕೊಟ್ಟು ಕೊಂಡುಕೊಳ್ಳಬೇಕು. ಲೆಕ್ಕ ಹಾಕಿದರೆ ಒಂದು ಟೊಮ್ಯಾಟೊಗೆ 10 ರೂ. ಬಿಳುತ್ತದೆ. ಹೀಗಾಗಿ ಮಂಗಳವಾರದ ಸಾಲು ಸಂತೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದೇನೆ‌‌. ಕ್ಯಾಮರಾ ನೋಡಿ ಜನ ಒಂದು ಹಣ್ಣನ್ನು ಮುಟ್ಟುವುದಿಲ್ಲ ಎನ್ನುತ್ತಾರೆ ವ್ಯಾಪಾರಿ ಕೃಷ್ಣಪ್ಪ ಜೋಗಪ್ಪನವರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts