More

    ಗುರಿ ಮುಟ್ಟಲಿಲ್ಲ ರಾಜಸ್ವ ಸಂಗ್ರಹ; ಉಪನೋಂದಣಿ ಕಚೇರಿಗಳಿಗೆ ಕಷ್ಟವಾದ ಟಾರ್ಗೆಟ್ ರೀಚ್; ಆದರೂ ಕಳೆದ ವರ್ಷಕ್ಕಿಂತ ಹೆಚ್ಚು ಕಲೆಕ್ಷನ್

    ಕೇಶವಮೂರ್ತಿ ವಿ.ಬಿ. ಹಾವೇರಿ
    ರಾಜಸ್ವ ಸಂಗ್ರಹಣೆಗಾಗಿ ಜಿಲ್ಲೆಯ ಏಳು ಉಪ ನೋಂದಣಾಧಿಕಾರಿ ಕಚೇರಿಗಳಿಗೆ ರಾಜ್ಯ ಸರ್ಕಾರವು ಪ್ರಸಕ್ತ ಆರ್ಥಿಕ ವರ್ಷ 2023-24ರಲ್ಲಿ ನಿಗದಿಪಡಿಸಿದ್ದ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ಆದರೆ, ಕಳೆದ ವರ್ಷಕ್ಕಿಂತ ಹೆಚ್ಚುವರಿಯಾಗಿ 15 ಕೋಟಿ ರೂ. ಸಂಗ್ರಹವಾಗಿರುವುದು ಸಮಾಧಾನಕರ ಸಂಗತಿಯಾಗಿದೆ.
    2022-23ರಲ್ಲಿ ಸರ್ಕಾರ ನೀಡಿದ್ದ 71 ಕೋಟಿ ರೂ. ಗುರಿಯನ್ನು ದಾಟಿದ್ದ ಜಿಲ್ಲೆ 72 ಕೋಟಿ ರೂ. ಸಂಗ್ರಹಿಸುವ ಮೂಲಕ ಶೇ.104ರಷ್ಟು ಸಾಧನೆ ಮಾಡಿತ್ತು. ಆದರೆ, ಈ ಬಾರಿ ನೀಡದ್ದ 97 ಕೋಟಿ ರೂ. ಗುರಿಯಲ್ಲಿ 87 ಕೋಟಿ ರೂ. ಗುರಿ ಸಾಧಿಸಿದ್ದು, ಶೇ.89ರಷ್ಟು ಗುರಿ ತಲುಪಲಾಗಿದೆ.
    ಜಿಲ್ಲೆಯ ಏಳು ಉ.ನೋಂ. ಕಚೇರಿಗಳ ಪೈಕಿ ರಾಣೆಬೆನ್ನೂರ (28 ಕೋಟಿ) ನಂತರದಲ್ಲಿ ಹಾವೇರಿ ಕಚೇರಿ (20 ಕೋಟಿ) ಅತಿ ಹೆಚ್ಚು ರಾಜಸ್ವ ಸಂಗ್ರಹಿಸುವ ಕೇಂದ್ರಗಳಾಗಿವೆ.

    ಈ ಬಾರಿ ಶಿಗ್ಗಾಂವಿ ಕಚೇರಿ ಶೇ.99ರಷ್ಟು ಸಾಧನೆ ಮಾಡಿದೆ. ನಂತರದಲ್ಲಿ ಹಿರೇಕೆರೂರ ಶೇ.97, ರಾಣೆಬೆನ್ನೂರ ಶೇ.95, ಸವಣೂರ ಶೇ.94, ಹಾನಗಲ್ಲ ಶೇ.86, ಹಾವೇರಿ ಶೇ.82, ಬ್ಯಾಡಗಿ ಶೇ.71ರಷ್ಟು ಗುರಿ ತಲುಪಿದೆ.
    ಬಹುತೇಕ ಪ್ರತಿ ವರ್ಷ ಗುರಿ ತಲುಪುತ್ತಿದ್ದ ಉ.ನೋಂ ಕಚೇರಿಗಳು ಈ ಬಾರಿ ಗುರಿ ತಲುಪಲು ಒದ್ದಾಡಿವೆ. ಕೆಲ ಶುಲ್ಕಗಳಲ್ಲಿ ಏರಿಕೆ ಮಾಡಿದ್ದರೂ ಅದರಿಂದ ಹೇಳಿಕೊಳ್ಳುವ ಸಮಸ್ಯೆ ಏನೂ ಆಗಿಲ್ಲ. ಬಹುಶಃ 2023ರಲ್ಲಿ ಸರ್ಕಾರ ದೊಡ್ಡ ಗುರಿ ನೀಡುವ ಮೂಲಕ ಸವಾಲು ನೀಡಿತ್ತೇ ಎಂಬ ಪ್ರಶ್ನೆಯೂ ಮೂಡುತ್ತಿದೆ.
    ಕೃಷಿಭೂಮಿ ನೋಂದಣಿ ಸ್ಥಗಿತ ಕಾರಣ
    ಐದು ಗುಂಟೆ ಒಳಗಿನ ಕೃಷಿಭೂಮಿ, (ನಾನ್ ಎನ್‌ಎ ಅಗ್ರಿಕಲ್ಚರ್ ಲ್ಯಾಂಡ್) ರಿಜಿಸ್ಟ್ರೇಶನ್ ಆಗುತ್ತಿಲ್ಲ. ಇತ್ತೀಚೆಗೆ ಇದನ್ನು ಸರ್ಕಾರ ಸ್ಥಗಿತಗೊಳಿಸಿದೆ. ಕೃಷಿ ಭೂಮಿ ಅಭಿವೃದ್ಧಿ ಹೊಂದಿರುವುದಿಲ್ಲ. ಹಾಗಾಗಿ, ಅವುಗಳ ನೋಂದಣಿ ಪ್ರಮಾಣ ಕಡಿಮೆಯಾಗಿದೆ. ಚುನಾವಣೆ ನೀತಿಸಂಹಿತೆ ಕಾರಣಕ್ಕೂ ಕೆಲವೆಡೆ ಮಂದಗತಿಯಲ್ಲಿ ಸಾಗಿದೆ. ಇದೇ ಕಾರಣಕ್ಕೆ ಈ ಬಾರಿ ಗುರು ಸಾಧಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಜಿಲ್ಲೆಯ ಹಿರಿಯ ಉಪ ನೋಂದಣಾಧಿಕಾರಿಯೊಬ್ಬರು. ಕೋಟ್:
    ಐದು ಗುಂಟೆ ಒಳಗಿನ ಕೃಷಿ ಭೂಮಿ ನೋಂದಣಿ ಕಡಿಮೆಯಾಗಿದ್ದು, ಮತ್ತಿತರ ಕಾರಣದಿಂದ ಈ ಬಾರಿ ಗುರಿ ತಲುಪಲಾಗಿಲ್ಲ. ಆದರೂ, ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಆದಾಯ ಸಂಗ್ರಹವಾಗಿದೆ. ಕಾವೇರಿ 2.0 ಜಾರಿಯಾದ ಮೇಲೆ ಉ.ನೋಂ.ಕಚೇರಿಗಳ ಸಿಬ್ಬಂದಿಯ ಒತ್ತಡ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಸರ್ವರ್ ಸಮಸ್ಯೆ ಈಗ ಇಲ್ಲ.
    – ವಿನಾಯಕ ಗೋರ್ಪಡೆ, ಜಿಲ್ಲಾ ನೋಂದಣಿ ಅಧಿಕಾರಿ

    ಜಿಲ್ಲೆಯ ಅಂಕಿ ಅಂಶ
    ವರ್ಷ ಗುರಿ ಸಂಗ್ರಹವಾದ ರಾಜಸ್ವ ದಸ್ತಾವೇಜುಗಳು ಪ್ರತಿಶತಃ ಸಾಧನೆ
    2022-23 71 ಕೋಟಿ 72.87 ಕೋಟಿ 52,205 ಶೇ.104
    2023-24 97 ಕೋಟಿ 87.19 ಕೋಟಿ 54,327 ಶೇ.89.89

    2023-24ರ ತಾಲೂಕುವಾರು ಮಾಹಿತಿ
    ವರ್ಷ ಗುರಿ ಸಂಗ್ರಹವಾದ ರಾಜಸ್ವ ದಸ್ತಾವೇಜುಗಳು ಪ್ರತಿಶತಃ ಸಾಧನೆ
    ಜಿ.ನೋಂ.ಕ. 00 41.54 ಲಕ್ಷ 00 00
    ಉ.ನೋ.ಕ.ಹಾವೇರಿ 25.52 ಕೋಟಿ 20.99 ಕೋಟಿ 10,589 ಶೇ.82.27
    ಉ.ನೋ.ಕ. ರಾಣೆಬೆನ್ನೂರ 29.56 ಕೋಟಿ 28.24 ಕೋಟಿ 13,154 ಶೇ.95.54
    ಉ.ನೋ.ಕ. ಹಾನಗಲ್ಲ 08.76 ಕೋಟಿ 07.60 ಕೋಟಿ 7,184 ಶೇ.86.76
    ಉ.ನೋ.ಕ. ಹಿರೇಕೆರೂರ 07.02 ಕೋಟಿ 07.02 ಕೋಟಿ 7,423 ಶೇ.97.63
    ಉ.ನೋ.ಕ. ಶಿಗ್ಗಾಂವಿ 10.24 ಕೋಟಿ 10.21 ಕೋಟಿ 5,974 ಶೇ.99.75
    ಉ.ನೋ.ಕ. ಬ್ಯಾಡಗಿ 09.48 ಕೋಟಿ 06.79 ಕೋಟಿ 4,927 ಶೇ.71.69
    ಉ.ನೋ.ಕ. ಸವಣೂರ 06.24 ಕೋಟಿ 05.90 ಕೋಟಿ 5,076 ಶೇ.94.56


    ಒಟ್ಟು 97 ಕೋಟಿ 87.19 ಕೋಟಿ 54,327 ಶೇ.89.89

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts