More

    ಪಿಎಫ್​ ವಿತ್​ಡ್ರಾ ಮಾಡ್ತಿದ್ದೀರಾ? ಟ್ಯಾಕ್ಸ್​ ಬೀಳಬಹುದು ಎಚ್ಚರ!

    ನವದೆಹಲಿ: ಎಂಪ್ಲಾಯಿಸ್​ ಪ್ರಾವಿಡೆಂಟ್​ ಫಂಡ್​(ಇಪಿಎಫ್) ಎಂಬುದು ವೇತನ ಪಡೆಯುವ ಉದ್ಯೋಗಿಗಳಿಗಾಗಿ ಏರ್ಪಾಟು ಮಾಡಿದ ನಿವೃತ್ತಿ ನಿಧಿಯಾಗಿದೆ. ಇದನ್ನು ಹಿಂಪಡೆಯುವಿಕೆಗೆ ಯಾವಾಗ ತೆರಿಗೆ ವಿಧಿಸಲಾಗುತ್ತದೆ? ಇದಕ್ಕಿರುವ ಮಾನದಂಡಗಳೇನು? ಯಾವಾಗ ಪಡೆದುಕೊಂಡರೆ ತೆರಿಗೆ ವಿನಾಯಿತಿ ಸಿಗುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.

    ಇಪಿಎಫ್ ಉದ್ಯೋಗಿಗಳು ತಮ್ಮ ಮೂಲ ವೇತನದ ಶೇ.12 ರಷ್ಟು ಕೊಡುಗೆ ನೀಡಬೇಕಾಗುತ್ತದೆ. ಅಷ್ಟೇ ಮೊತ್ತ ಅವರ ಉದ್ಯೋಗದಾತರಿಂದ ಹೊಂದಾಣಿಕೆಯಾಗುತ್ತದೆ. ಕಾಲಾನಂತರದಲ್ಲಿ, ಉದ್ಯೋಗಿ ಆ ಸಂಸ್ಥೆಯಲ್ಲಿ ಇರುವಷ್ಟು ದಿನ ಕೊಡುಗೆಗಳು ಸಂಗ್ರಹವಾಗುತ್ತವೆ. ಮತ್ತು ನಿವೃತ್ತಿಯ ನಂತರ ಸಂಚಿತ ಬಡ್ಡಿಯೊಂದಿಗೆ ಹಿಂಪಡೆಯಬಹುದು. ಆದಾಗ್ಯೂ, ಇತರ ರೀತಿಯ ಆದಾಯಗಳಂತೆ ಇಪಿಎಫ್​ ಹಿಂಪಡೆಯುವಿಕೆ ಕೆಲವು ಸಂದರ್ಭಗಳಲ್ಲಿ ತೆರಿಗೆಗೆ ಒಳಪಟ್ಟಿರುತ್ತವೆ.

    ಇಪಿಎಫ್​ ಹಣವನ್ನು ಹಿಂತೆಗೆದುಕೊಳ್ಳುವ ಮೊದಲು ಕೆಲವು ಷರತ್ತುಗಳನ್ನು ಪೂರೈಸಬೇಕು. ಇವು ಹೀಗಿವೆ….
    • ನಿವೃತ್ತಿ ವಯಸ್ಸನ್ನು ತಲುಪಿದ ನಂತರ ಸಂಪೂರ್ಣ ಇಪಿಎಫ್​ ಮೊತ್ತವನ್ನು ಹಿಂಪಡೆಯಬಹುದು, ಇದನ್ನು ಸಾಮಾನ್ಯವಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) 58 ವರ್ಷಗಳಿಗೆ ನಿಗದಿಪಡಿಸುತ್ತದೆ.

    ಇದನ್ನೂ ಓದಿ: ರಾಜಕೀಯ ಉದ್ದೇಶವಿಲ್ಲದೆ ಐಟಿ ದಾಳಿ ನಡೆಯುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

    • ಉದ್ಯೋಗಿಯು ನಿವೃತ್ತಿಗೆ ಒಂದು ವರ್ಷದ ಮೊದಲು ಇಪಿಎಫ್​ ನಿಧಿಯ ಶೇ.90 ರಷ್ಟು ಮೊತ್ತವನ್ನು ಸಹ ಹಿಂಪಡೆಯಬಹುದು.

    • ನಿವೃತ್ತಿವಯಸ್ಸಿಗೂ ಮುನ್ನ ಉದ್ಯೋಗ ಕಳೆದುಕೊಂಡಾಗ ಅಥವಾ ರಾಜೀನಾಮೆ ನೀಡಿದಾಗ ಒಂದು ತಿಂಗಳ ನಂತರ ಶೇ.75 ಇಪಿಎಫ್​ ನಿಧಿಯನ್ನು ಮತ್ತು ಎರಡು ತಿಂಗಳ ನಿರುದ್ಯೋಗದ ನಂತರ ಸಂಪೂರ್ಣ ಪಿಎಫ್​ ಮೊತ್ತವನ್ನು ಹಿಂಪಡೆಯಬಹುದು.

    • ಈ ನಿಯಮಗಳು ಹಣಕಾಸಿನ ತುರ್ತುಸ್ಥಿತಿಗಳು ಮತ್ತು ಜೀವನದಲ್ಲಿನ ಮಹತ್ವದ ಘಟನೆಗಳು ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ತಮ್ಮ ಪಿಎಫ್ ಹಣವನ್ನು ಹಿಂಪಡೆದುಕೊಳ್ಳಬಹುದಾಗಿದೆ. ವಾಪಸ್ಸಾತಿಗೆ ನಿರ್ದಿಷ್ಟ ಷರತ್ತುಗಳಿದ್ದು, ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ. ಹೀಗಾಗಿ ಇಪಿಎಫ್​ ಹಿಂಪಡೆಯುವ ಮುನ್ನ ಅವರು ಕರ್ತವ್ಯ ನಿರ್ವಹಿಸಿದ ಕಡೆ ಮಾನವ ಸಂಪನ್ಮೂಲ ಶಾಖೆಯಲ್ಲಿ ಸಮಗ್ರ ಮಾರ್ಗದರ್ಶನಕ್ಕಾಗಿ ಸಂಪರ್ಕಿಸಬೇಕು.

    • ಇಪಿಎಫ್ ಖಾತೆಗಳಿಗೆ ನೀಡಿದ ಹಣಕ್ಕೆ ಸಾಮಾನ್ಯವಾಗಿ ತೆರಿಗೆ ವಿಧಿಸಲಾಗುವುದಿಲ್ಲ. ಆದಾಗ್ಯೂ, ಸೆಕ್ಷನ್ 80C ಅಡಿಯಲ್ಲಿ ಹಿಂದಿನ ವರ್ಷಗಳಲ್ಲಿ ಸಲ್ಲಿಸಿದ ಹಣದ ಮೊತ್ತ ಪರಿಗಣಿಸಿ ಕಡಿತ ಕ್ಲೈಮ್ ಮಾಡಬಹುದು. ಅಂತಹ ಸಂದರ್ಭಗಳಲ್ಲಿ ಸೆಕ್ಷನ್ 80C ಅನ್ನು ಹಿಂದೆ ಕ್ಲೈಮ್ ಮಾಡದಿದ್ದರೆ ಹೆಚ್ಚುವರಿ ತೆರಿಗೆ ಅನ್ವಯಿಸಬಹುದು.

    • ಉದ್ಯೋಗಿಯು ಒಂದು ಅಥವಾ ಹೆಚ್ಚಿನ ಸಂಸ್ಥೆಗಳೊಂದಿಗೆ ಐದು ವರ್ಷ ನಿರಂತರ ಸೇವೆಯನ್ನು ಪೂರ್ಣಗೊಳಿಸುವ ಮೊದಲು ತಮ್ಮ ಇಪಿಎಫ್​ ಹಣವನ್ನು ಹಿಂಪಡೆಯಲು ನಿರ್ಧರಿಸಿದರೆ ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾಗುತ್ತದೆ. ಹಿಂಪಡೆಯುವ ಮೊತ್ತವು 50ಸಾವಿರ ರೂ.ಗಿಂತ ಕಡಿಮೆಯಿದ್ದರೆ ವಿನಾಯಿತಿ ಇದೆ.

    • ಉದ್ಯೋಗಿ ಐದು ವರ್ಷ ನಿರಂತರ ಸೇವೆಯ ನಂತರ ಮೊತ್ತವನ್ನು ಹಿಂಪಡೆದರೆ ಇಪಿಎಫ್ ಹಿಂಪಡೆಯುವಿಕೆಗೆ ತೆರಿಗೆ ವಿನಾಯಿತಿ ಇರುತ್ತದೆ. ಕಡ್ಡಾಯ “5 ವರ್ಷಗಳ ಸೇವೆಯ” ಲೆಕ್ಕಾಚಾರವು ಹಳೆಯ ಸಂಸ್ಥೆಯಿಂದ ಹೊಸದಕ್ಕೆ ಇಪಿಎಫ್​ ಬ್ಯಾಲೆನ್ಸ್ ಅನ್ನು ವರ್ಗಾಯಿಸಿದರೆ ಹಿಂದಿನ ಸಂಸ್ಥೆಯ ಅಧಿಕಾರಾವಧಿ ಒಳಗೊಂಡಿರುತ್ತದೆ.

    ಟಾಪ್ 10 ಶ್ರೀಮಂತ ಭಾರತೀಯರು: ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ ಅಗ್ರಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts