More

    ಹಟ್ಟಿಯಲ್ಲಿ ಚಿನ್ನದ ಉತ್ಪಾದನೆಗೆ ಹಿನ್ನಡೆ

    ಹಟ್ಟಿಚಿನ್ನದಗಣಿ: ಕಳೆದ 8 ತಿಂಗಳಲ್ಲಿ ಗಣಿ ಕಂಪನಿ 453 ಮೆಟ್ರಿಕ್ ಟನ್ ಗುರಿ ಪೈಕಿ 381.943 ಮೆಟ್ರಿಕ್ ಟನ್ ಅದಿರು ಬೀಸಿದೆ. ಈ ಅವಧಿಯಲ್ಲಿ 1135.184 ಚಿನ್ನ ಉತ್ಪಾದನೆ ಗುರಿ ಹೊಂದಿದ್ದು, 772.190 ಕೆ.ಜಿ ಚಿನ್ನ ಉತ್ಪಾದನೆಯಾಗಿದ್ದು, 362.993 ಕೆ.ಜಿ ಚಿನ್ನ ಉತ್ಪಾದನೆಯಲ್ಲಿ ಹಿನ್ನಡೆ ಕಂಡಿದೆ.

    ಪ್ರತಿ ಟನ್‌ಗೆ 2.81 ಗ್ರಾಂ ಉತ್ಪಾದನೆ ಗುರಿ ಪೈಕಿ 2.32 ಗ್ರಾಂ ಹಳದಿ ಲೋಹ ಉತ್ಪಾದನೆಯಾಗಿದೆ. ಸಿರವಾರ ತಾಲೂಕಿನ ಹೀರಾ-ಬುದ್ಧಿನ್ನಿ ಯೋಜನೆಯಲ್ಲಿ ಉತ್ಪಾದನೆ ಕುಂಟುತ್ತಾ ಸಾಗಿದೆ. ಪ್ರತಿ ಟನ್ ಅದಿರಿಗೆ ಚಿನ್ನದ ಪ್ರಮಾಣ ಕಡಿಮೆ ಸಿಗುತ್ತಿದೆ. 25 ಕಿ.ಮೀ. ಅಂತರದಿಂದ ಅದಿರನ್ನು ಹಟ್ಟಿ ಲೋಹವಿಭಾಗಕ್ಕೆ ತಂದು ಸಂಸ್ಕರಿಸುವಲ್ಲಿ ಉತ್ಪಾದನಾ ವೆಚ್ಚವೂ ಕೂಡಾ ಅಧಿಕವಾಗಿದೆ. ಕೆಲ ತಿಂಗಳು ನೌಕರಿ ನೀಡುವ ಸಲುವಾಗಿ ಸ್ಥಳೀಯರು-ಆಡಳಿತ ವರ್ಗದ ಮಧ್ಯೆ ನಡೆದ ಗುದ್ದಾಟದಿಂದ ಉತ್ಪಾದನೆ ಸ್ಥಗಿತಗೊಂಡಿತ್ತು. ಉತ್ಪಾದನೆಗೆ ಚುರುಕು ಮೂಡಿಸಲು ನಿರಂತರ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ಡಿ.ವಜ್ಜಲ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts