More

    ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತ

    ಹಟ್ಟಿಚಿನ್ನದಗಣಿ: ಮೂರ‌್ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಹೊಲ-ಗದ್ದೆಗಳ ಬೆಳೆಗಳು ಕೊಚ್ಚಿ ಹೋಗಿದ್ದು, ಅನ್ನದಾತ ಕಂಗಾಲಾಗಿದ್ದಾನೆ.

    ಹಟ್ಟಿ, ಗುರುಗುಂಟಾ, ಕೋಠಾ, ಗೌಡೂರು, ಗೆಜ್ಜಲಗಟ್ಟಾ, ರೋಡಲಬಂಡಾ, ಪೈದೊಡ್ಡಿ, ಆನ್ವರಿ ಭಾಗದ ತೊಗರಿ, ಜೋಳ, ಹೆಸರು, ಕಡಲೆ, ಮೆಣಸಿನಕಾಯಿ, ಹತ್ತಿ ಹಾಗೂ ಭತ್ತ, ಗೋಧಿ ಸೇರಿ ಬೆಳೆದ ಹಲವು ಗದ್ದೆಗಳು ನೀರು ಪಾಲಾಗಿದ್ದರೆ, ನಿರಂತರ ತೇವಾಂಶದಿಂದ ಕೆಲವೆಡೆ ಬೆಳೆಗಳು ಕೊಳೆತು ಹೋಗಿವೆ. ಕಾಯಿ ಹಿಡಿದು ಒಣಗುವ ಹಂತದಲ್ಲಿದ್ದ ತೊಗರಿ ಮಳೆ-ತೇವಾಂಶಕ್ಕೆ ಎಲೆಗಳು ಉದುರಿ ಹೋಗಿದ್ದು, ಫಸಲು ಹಾಳಾಗಿದೆ. ಹಲವೆಡೆ ಬೆಳೆಗಳು ನೀರು ಪಾಲಾಗಿದ್ದು, ಹೊಲ-ಗದ್ದೆಗಳಿಗೆ ಕಾಲಿಡದ ಪರಿಸ್ಥಿತಿ ಉಂಟಾಗಿದೆ. ಗುರಗುಂಟಾ ಗ್ರಾಮ ಲೆಕ್ಕಾಧಿಕಾರಿ ಎಂ.ರಮೇಶ್, ಗ್ರಾ.ಪಂ ಸದಸ್ಯ ಚಂದ್ರಶೇಖರ್ ನಾಯಕ್ ಹಾನಿಯಾದ ಹೊಲ-ಗದ್ದೆಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

    ಜನಜೀವನ-ಅಸ್ತವ್ಯಸ್ತ: ಸಮೀಪದ ಗುಂಡಲಬಂಡಾ ಜಲಪಾತ, ಲಿಂಗಸುಗೂರು ಮಾರ್ಗದಲ್ಲಿರುವ ಹಳ್ಳ, ತುಂಬಿ ಹರಿಯುತ್ತಿವೆ. ಹಟ್ಟಿಯಿಂದ ಹರಿಯುವ ನೀರಿನಲ್ಲಿ ಎಲ್ಲೆಂದರಲ್ಲಿ ಸರಿಸೃಪಗಳು ತೇಲಾಡುತ್ತಿದ್ದು, ಜನರಲ್ಲಿ ಭೀತಿಯುಂಟು ಮಾಡಿವೆ. ಕಾಲನಿಯ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಸಂಚಾರ ಅಸ್ತವ್ಯಸ್ತವಾಗಿದೆ. ಹಲವೆಡೆ ಸಂಚಾರ ಬಂದ್ ಆಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಸ್ತೆಯ ಇಕ್ಕೇಲಗಳಲ್ಲಿ ತರಕಾರಿ ಮಾರಾಟ ನಡೆದಿದೆ.

    ಗುರುಗುಂಟಾ ಭಾಗದಲ್ಲಿ 650 ಹೆಕ್ಟೇರ್ ಪ್ರದೇಶಕ್ಕೆ ಭೇಟಿ ನೀಡಿ ಬೆಳೆ ಹಾನಿ ಕುರಿತು ಪರಿಶೀಲಿಸಲಾಗಿದೆ. ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಪರಿಹಾರಕ್ಕಾಗಿ ಕ್ರಮಕೈಗೊಳ್ಳಲಾಗುವುದು._
    | ಎಂ.ರಮೇಶ್ ಗುರಗುಂಟಾ ಗ್ರಾಮ ಲೆಕ್ಕಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts