More

    ಬಾಗಿಲು ತೆರೆಯದ ಜೆಸ್ಕಾಂ ಕಚೇರಿ, ಗ್ರಾಹಕರಿಂದ ಪ್ರತಿಭಟನೆ

    ಹಟ್ಟಿಚಿನ್ನದಗಣಿ: ಜೆಸ್ಕಾಂ ಬೇಜವಾಬ್ದಾರಿ, ವಿಭಾಗೀಯ ಅಧಿಕಾರಿಯ ಅಸಮರ್ಪಕ ಸೇವೆ ಖಂಡಿಸಿ ಹಟ್ಟಿಚಿನ್ನದಗಣಿ ಶಾಖಾ ಕಚೇರಿ ಎದುರು ಗುರುವಾರ ಗ್ರಾಹಕರು ಪ್ರತಿಭಟನೆ ನಡೆಸಿದರು.

    ಕೋಠಾ ಕ್ರಾಸ್ ಬಳಿಯ ವಿದ್ಯುತ್ ಪರಿವರ್ತಕ ಸುಟ್ಟು ಎರಡು ದಿನವಾದರೂ ವಿಭಾಗೀಯ ಅಧಿಕಾರಿ ದುರಸ್ತಿಗೊಳಿಸಿಲ್ಲ. ಫೋನ್ ಕರೆ ಸ್ವೀಕರಿಸದಿರುವ ನಡೆ ಖಂಡಿಸಿ, ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಮಧ್ಯಾಹ್ನ ಒಂದು ಗಂಟೆಯಾದರೂ ಕಚೇರಿ ಬಾಗಿಲು ತೆಗೆದಿರಲಿಲ್ಲ ಎಂದು ದೂರಿದರು.

    ವಿಭಾಗೀಯ ಅಧಿಕಾರಿ ಬನ್ನಪ್ಪ ಈಚನಾಳರ ನಡೆ ಖಂಡಿಸಿದ ಗ್ರಾಹಕರು ಲಿಂಗಸುಗೂರು ಎಇಇ, ಸಿಂಧನೂರು ಇಇಗೆ ಫೋನಾಯಿಸಿ ವಿಷಯ ತಿಳಿಸಿದರೂ ಸ್ಪಂದನೆ ಸಿಗಲಿಲ್ಲ. ನಂತರ ಬಳ್ಳಾರಿಯ ಚೀಫ್ ಇಂಜಿನಿಯರ್‌ಗೆ ಫೋನಾಯಿಸಿ ತರಾಟೆಗೆ ತೆಗೆದುಕೊಂಡರು.

    ಇದನ್ನೂ ಓದಿ: ಜೈಲಿಗೆ ಕರೆದೊಯ್ಯುವಾಗ ಕಳ್ಳ-ಪೊಲೀಸ್​ ಫ್ರೆಂಡ್​ಷಿಪ್​! ಜೆಸ್ಕಾಂ ಅಧಿಕಾರಿಯ ಭೀಕರ ಕೊಲೆ ಕೇಸ್​ ಬೆಳಕಿಗೆ!

    ಘಟನೆ ನಡೆದು 2-3 ಗಂಟೆ ನಂತರ ಸ್ಥಳಕ್ಕೆ ಆಗಮಿಸಿದ ಎಇಇ ಕೆಂಚಪ್ಪ, ಸಾರ್ವಜನಿಕರಿಗೆ ಸಮಜಾಯಿಷಿ ನೀಡಲು ಯತ್ನಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಬೇಸಿಗೆ, 10ನೇ ತರಗತಿ ಪರೀಕ್ಷೆ ಇನ್ನಿತರ ತುರ್ತು ಕೆಸಲಕ್ಕೆ ವಿದ್ಯುತ್ ಸಮಸ್ಯೆಯಿಂದ ತೊಂದರೆಯಾಗಿದೆ. ಇದಕ್ಕೆಲ್ಲ ಕಾರಣರಾದ ಬನ್ನಪ್ಪರನ್ನು ಕಚೇರಿಗೆ ಕರೆಸಬೇಕೆಂದು ಪಟ್ಟು ಹಿಡಿದಾಗ, ಅವರು ಕರ್ತವ್ಯಕ್ಕೆ ಬೇರೆಡೆ ಹೋಗಿದ್ದು, ಪ್ರಶಾಂತ್ ಎಂಬುವರು ಪ್ರಭಾರವಿದ್ದು, ಕೂಡಲೇ ಸುಟ್ಟ ಟಿಸಿ ರಿಪೇರಿಗೊಳಿಸಿಕೊಡುವ ಭರವಸೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು.

    ಜೆಸ್ಕಾಂ ವಿಭಾಗೀಯ ಅಧಿಕಾರಿ-ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಮಧ್ಯಾಹ್ನ ಒಂದಾದರೂ ಕಚೇರಿ ತೆರೆದಿಲ್ಲ. ಅಧಿಕಾರಿಗಳು ಎತ್ತ ಹೋದರೆನ್ನುವ ಮಾಹಿತಿ ಸಿಬ್ಬಂದಿಗಿರುವುದಿಲ್ಲ. ಮೇಲಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗದಿದ್ದರೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು.

    ಶೇಖ್ ಹುಸೇನ್ ಸೌದಾಗರ್, ಗ್ರಾಹಕ ಹಟ್ಟಿ ಪಟ್ಟಣ

    ಹಟ್ಟಿ ವಿದ್ಯುತ್ ಸಮಸ್ಯೆ ಇತ್ಯರ್ಥ ಕುರಿತು ಎಇಇಗೆ ತಿಳಿಸಲಾಗಿದೆ. ವಿಭಾಗೀಯ ಅಧಿಕಾರಿ ಕರ್ತವ್ಯಲೋಪದ ಬಗ್ಗೆ ವರದಿ ತರಿಸಿಕೊಂಡು, ತಪ್ಪಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳುತ್ತೇವೆ.
    ಲಕ್ಷ್ಮಣ್ ಚೌಹಾಣ್, ಬಳ್ಳಾರಿ ಜೆಸ್ಕಾಂ ಚೀಫ್ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts