More

    ರಾಜಕೀಯ ನಾಯಕರ ಮಾತಿನ ಚಕಮಕಿ: ವೆಂಟಿಲೇಟರ್​ಗಾಗಿ ಮಾಧುಸ್ವಾಮಿ-ಎಚ್.ಡಿ.ರೇವಣ್ಣ ವಾಕ್ಸಮರ, ಮದ್ಯ ಮಾರಾಟ ಸಂಬಂಧ ಸಂಸದ ಪ್ರಜ್ವಲ್-ಪ್ರೀತಂ ವಾಗ್ವಾದ

    ಹಾಸನ: ಕರೊನಾ ನಿಯಂತ್ರಣ ಸಂಬಂಧ ಸೋಮವಾರ ಆಯೋಜಿಸಿದ್ದ ಸಭೆ ನಾಯಕರ ವಾಕ್ಸಮರಕ್ಕೆ ಸಾಕ್ಷಿಯಾಯಿತು. ತಾಲೂಕು ಆಸ್ಪತ್ರೆಗಳಿಗೆ ಹೆಚ್ಚುವರಿ ವೆಂಟಿಲೇಟರ್​ಗಳನ್ನು ಕಲ್ಪಿಸಬೇಕೆಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಕೋರಿದರು. ವೆಂಟಿಲೇಟರ್ ಕಲ್ಪಿಸುವ ಕುರಿತು ಮುಂದೆ ಮಾತಾಡೋಣ, ಕರೊನಾ ಬಗ್ಗೆ ರ್ಚಚಿಸಲು ಮಾತ್ರ ಸಭೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿದರು. ಇದರಿಂದ ಸಿಟ್ಟಾದ ರೇವಣ್ಣ, ‘ನಾವೇನ್ ಇಲ್ಲಿ ದನ ಕಾಯೋಕ್ ಬಂದಿದ್ದೇವಾ? ಎಂಎಲ್​ಎ ಮಾತಿಗೆ ಮರ್ಯಾದೆ ಇಲ್ಲದ ಮೇಲೆ ಸಭೆಯಲ್ಲಿರುವುದೇ ಬೇಡ’ ಎಂದು ಪಕ್ಷದ ಶಾಸಕರನ್ನು ಕರೆದರು.

    ಆಗ ಮಾಧುಸ್ವಾಮಿ, ಏ ರೇವಣ್ಣ ಯಾರಿಗ್ ಮಾತಾಡ್ತಾ ಇದೀಯಾ? 10 ವರ್ಷದಿಂದ ನೀನೇನ್ ಮಾಡಿದೆ? ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇಲ್ಲ ಎಂಬುದು ಈಗ ನೆನಪಾಯಿತಾ ಎಂದು ರೇಗಿದರು. ಬಳಿಕ ರೇವಣ್ಣ ಅವರನ್ನು ಶಾಸಕರಾದ ಪ್ರೀತಂ ಜೆ. ಗೌಡ, ಕೆ.ಎಂ. ಶಿವಲಿಂಗೇಗೌಡ ಸಮಾಧಾನಪಡಿಸಿದರು.

    ಪ್ರಜ್ವಲ್ -ಪ್ರೀತಂ ಕಚ್ಚಾಟ: ಹಾಸನ ನಗರದ ಬಿಎಂ ರಸ್ತೆಯ ಕ್ವಾಲಿಟಿ ಬಾರ್​ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭವಾದ ಚರ್ಚೆ ಶಾಸಕ ಪ್ರೀತಂ ಗೌಡ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ‘ಕ್ವಾಲಿಟಿ ಬಾರ್ ಶಾಸಕರ ಆಪ್ತರಿಗೆ ಸೇರಿದ್ದು ಎಂದು ಮಾಧ್ಯಮಗಳಿಗೆ ಹೇಳಿದ್ದೀರಿ. ಬಾರ್ ಮಾಲೀಕ ನನಗೆ ಯಾವಾಗ ಆಪ್ತನಾಗಿದ್ದಾನೆ. ಇದಕ್ಕಾಗಿ ಪ್ರತಿಭಟನೆ ಮಾಡಿಸಲು 50 ಜನರನ್ನ ಕರೆಸಿದ್ದೀರಿ’ ಎಂದು ಸಂಸದರಿಗೆ ಪ್ರೀತಂ ಪ್ರಶ್ನಿಸಿದರು. ಆಗ ಆಕ್ರೋಶಗೊಂಡ ಪ್ರಜ್ವಲ್, ನೀವು ಎಷ್ಟು ಮಾತನಾಡುತ್ತೀರಿ. ಬೇರೆಯವರ ಹತ್ತಿರ ಮಾತನಾಡಿದಂತೆ ನನ್ನೊಂದಿಗೆ ಮಾತನಾಡಬೇಡಿ, ಬಾರ್ ಮಾಲೀಕ ನಿನ್ನ ಆಪ್ತ ಎಂದು ಎಲ್ಲಿ ಹೇಳಿದ್ದೇನೆ, ವಿಡಿಯೋ ತೋರಿಸು ಎಂದರು. ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಲಾಕ್​ಡೌನ್ ಆದೇಶದ ಬಳಿಕ ಎಲ್ಲ ಹೋಮ್ ಸ್ಟೇ, ರೆಸ್ಟೋರೆಂಟ್, ಬಾರ್​ಗಳನ್ನು ಬಂದ್ ಮಾಡಲಾಗಿದೆ. ಬಾಗಿಲು ಹಾಕುವಾಗ ಸ್ಟಾಕ್ ಎಷ್ಟಿರುತ್ತದೆಯೋ ತೆರೆಯುವ ದಿನವೂ ಅಷ್ಟೇ ಇರಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

    ಚರ್ಚ್​ನಲ್ಲಿ ಸಾಮೂಹಿಕ ಪ್ರಾರ್ಥನೆ, ಎ.ಕೆ. ಕಾಲನಿಯ ಚರ್ಚ್​ನಲ್ಲಿ ಕೃತ್ಯ: ಡಿ.ಜೆ. ಹಳ್ಳಿ ಪೊಲೀಸರಿಂದ ಇಬ್ಬರ ವಿರುದ್ಧ ಎಫ್​ಐಆರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts