More

    ಗೆಲುವಿಗಾಗಿ ವಾಮಾಚಾರ: ಕೃತ್ಯಕ್ಕೆ ಜನರ ಆಕ್ರೋಶ

    ಅರಕಲಗೂಡು: ತಾಲೂಕಿನ ಕಸಬಾ ಹೋಬಳಿ ಹುಲ್ಲಂಗಾಲ ಗ್ರಾಮದಲ್ಲಿ ಮತಗಟ್ಟೆ ಪ್ರವೇಶ ದ್ವಾರದ ಎರಡು ಕಡೆ ಭಾನುವಾರ ರಾತ್ರಿ ವೇಳೆ ದುಷ್ಕರ್ಮಿಗಳು ಮಾಟ- ಮಂತ್ರ ಮಾಡಿಸಿ ಪೈಶಾಚಿಕ ಕೃತ್ಯ ಎಸಗಿದ್ದಾರೆ.

    ಡಿ. 22ರಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು ಊರಿನ‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ಮತಗಟ್ಟೆ ಸ್ಥಾಪಿಸಲಾಗಿದೆ. ಮತಗಟ್ಟೆಗೆ ತೆರಳುವ ಹಾದಿಯ ಎರಡು ಬದಿ ಭಾನುವಾರ ರಾತ್ರಿ ವೇಳೆ ಮಾಟ ಮಂತ್ರ ಮಾಡಿಸಿ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಬೆಳಗ್ಗೆ ಅಲ್ಲಿ ನೋಡಿದ ಗ್ರಾಮಸ್ಥರಿಗೆ ವಾಮಾಚಾರದ ಕುರುಹು ಪತ್ತೆಯಾದ ಕೂಡಲೇ ಇಡೀ ಊರಿನ ಜನರು ಕುತೂಹಲದಿಂದ ಸೇರಿ ಮಣ್ಣಿನಲ್ಲಿ ಹೂತಿದ್ದ ಎರಡು ಕುಡಿಕೆಗಳನ್ನು ತೆಗೆದು ಗಾಬರಿಗೊಳಗಾದರು.‌

    ಶಾಲೆಯ ಬಳಿ ಮಕ್ಕಳು, ಗ್ರಾಮಸ್ಥರು ಓಡಾಡುತ್ತಾರೆ. ವಾಮ ಮಾರ್ಗದಿಂದ ಚುನಾವಣೆ ಎದುರಿಸುವ ದುರುದ್ದೇಶದಿಂದ ಈ ರೀತಿ ಮಾಟ ಮಂತ್ರ ಮಾಡಿಸಿ ಯಾರ ಮನೆ ಹಾಳು ಮಾಡಲು ಹೊರಟಿದ್ದಾರೆ ಎಂದು ಗ್ರಾಮಸ್ಥರು ಮತ್ತು ಮಹಿಳೆಯರು ದುಷ್ಕರ್ಮಿಗಳ ವಿರುದ್ದ ಚಪ್ಪಲಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಆಕ್ರೋಶ ಹೊರಹಾಕಿದರು.

    ತಮ್ಮೂರಿನಲ್ಲಿ ಮೂವರು ಸದಸ್ಯ‌ ಸ್ಥಾನಕ್ಕೆ ಒಂಬತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮತದಾನಕ್ಕೆ ಇನ್ನೊಂದು ದಿನ ದಿನ ಬಾಕಿ ಇರುವಾಗಲೇ ಮತಗಟ್ಟೆಗೆ ಹೋಗುವ‌ ಪ್ರವೇಶ ದಾರಿ ಬಳಿ ಎರಡು ಕಡೆ ಮತದಾರರನ್ನು ದಿಕ್ಕು ತಪ್ಪಿಸುವ ಸಲುವಾಗಿ ದುಷ್ಕರ್ಮಿಗಳು ಕುಡಿಕೆಗಳನ್ನು ಹೂಳಿ ವಾಮಾಚಾರ ನಡೆಸಿರುವುದರಿಂದ ಜನರು ಭಯಭೀತಗೊಂಡಿದ್ದಾರೆ.

    ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು, ನಾಳೆ ನಡೆಯುವ ಗ್ರಾಪಂ ಚುನಾವಣೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts