More

    ಜ. 8 ರಂದು ಹಾಸನದಲ್ಲಿ ಕರೊನಾ ಲಸಿಕೆ ತಾಲೀಮು

    ಹಾಸನ: ಕರೊನಾ ನಿರೋಧಕ ಲಸಿಕೆ ವಿತರಣೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್) ಸಕಲ ಸಿದ್ಧತೆ ಮಾಡಿಕೊಂಡಿದೆ.

    ಹಿಮ್ಸ್‌ನ ಮೊಲದ ಮಹಡಿಯ ಕೊಠಡಿಯಲ್ಲಿ ಲಸಿಕೆ ಹಾಕಲು ಪೂರ್ಣ ಸಿದ್ಧತೆ ಮಾಡಿಕೊಂಡಿದ್ದು ಜ. 8 ರಂದು ಚುಚ್ಚುಮದ್ದು ನೀಡಿಕೆ ಟ್ರೈಯಲ್ ನಡೆಯಲಿದೆ. ಆರಂಭದಲ್ಲಿ ಖಾಸಗಿ ಹಾಗೂ ಸರ್ಕಾರಿ ಆರೋಗ್ಯ ಕಾರ್ಯಕರ್ತರಿಗೆ ಚುಚ್ಚುಮದ್ದು ನೀಡಲಾಗುವುದು. ಹಿಮ್ಸ್‌ನಲ್ಲಿ ನಿತ್ಯ 100 ಜನರಿಗೆ ಕೋವಿಡ್ ಲಸಿಕೆ ನೀಡಲಾಗುವುದು. ಸಂಸ್ಥೆಯ ಗೇಟ್‌ನಲ್ಲಿ ವ್ಯಾಕ್ಸಿನೇಷನ್ ಅಧಿಕಾರಿ ಇರಲಿದ್ದು ಅವರು ವ್ಯಕ್ತಿಯ ಹೆಸರು ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸುತ್ತಾರೆ. ನಂತರ ನಿರೀಕ್ಷಣಾ ರೂಂನಲ್ಲಿ ವ್ಯಕ್ತಿ 30 ನಿಮಿಷ ಕುಳಿತುಕೊಳ್ಳಬೇಕು. ಸರದಿ ಸಾಲಿನಂತೆ ಒಬ್ಬೊಬ್ಬರೇ ಮತ್ತೊಂದು ಕೊಠಡಿಗೆ ತೆರಳಿ ಚುಚ್ಚುಮದ್ದು ಪಡೆಯಬೇಕು. ನಂತರ ಪಕ್ಕದಲ್ಲೇ ಇರುವ ನಿಗಾ ಕೊಠಡಿಯಲ್ಲಿ 30 ನಿಮಿಷ ಇರಬೇಕು. ಆ ವೇಳೆ ವ್ಯಕ್ತಿಯ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಮುಂದಿನ ಚಿಕಿತ್ಸೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ನಿಗಾ ಕೊಠಡಿಯಲ್ಲಿ 10 ಬೆಡ್ ವ್ಯವಸ್ಥೆ ಮಾಡಿದ್ದು ಲಸಿಕೆ ಪಡೆದವರು ವಿಶ್ರಾಂತಿ ಪಡೆಯಬೇಕು. ಕರೊನಾ ಚುಚ್ಚುಮದ್ದು ವಿತರಣೆ ವ್ಯವಸ್ಥೆ ಸುಗಮಕ್ಕಾಗಿ ಇಬ್ಬರು ನೋಡಲ್ ಅಧಿಕಾರಿ, 6 ನರ್ಸ್ ಹಾಗೂ 4 ಸಿಸ್ಟರ್‌ಗಳು ಕೆಲಸ ಮಾಡಲಿದ್ದಾರೆ.

    ಕೋವಿಡ್-19 ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರಿಗೆ ಪ್ರಾರಂಭದಲ್ಲಿ ನೀಡಬೇಕೆಂದು ಕೇಂದ್ರ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ಸೂಚಿಸಿ ಅವರ ಪಟ್ಟಿ ತಯಾರಿಸುವಂತೆ ನಿರ್ದೇಶಿಸಿತ್ತು. ಅದರಂತೆ ಜಿಲ್ಲೆಯಲ್ಲಿರುವ 161 ಸರ್ಕಾರಿ ಹಾಗೂ 330 ಖಾಸಗಿ ಆರೋಗ್ಯ ಸಂಸ್ಥೆಯ 17 ಸಾವಿರ ಜನರ ಪಟ್ಟಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಯಾರಿಸಿದೆ. ಆ ಬಳಿಕ 50 ವರ್ಷ ಮೇಲ್ಪಟ್ಟವರನ್ನು ಪರಿಗಣಿಸಲು ಸೂಚಿಸಿದ್ದು ಅವರನ್ನು ಗುರುತಿಸುವ ಕಾರ್ಯ ಪ್ರಾರಂಭವಾಗಿದೆ. ಮಧುಮೇಹ, ರಕ್ತದೊತ್ತಡ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವರ ಪಟ್ಟಿ ತಯಾರಿಕೆಗೆ ಕ್ರಮ ವಹಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts