More

    ಕರೊನಾ ನಿಯಂತ್ರಣ ಸಾಮಗ್ರಿ ಖರೀದಿಗೆ ನಗರಸಭೆ ಖರ್ಚು ಮಾಡಿದೆ ಲಕ್ಷ ಲಕ್ಷ ರೂ.!

    ಹಾಸನ: ಮಾರಕ ಕರೊನಾ ನಿಯಂತ್ರಣಕ್ಕಾಗಿ ವಿವಿಧ ಸಾಮಗ್ರಿ ಖರೀದಿಗೆ ನಗರಸಭೆ ಕಳೆದ ಮೂರು ತಿಂಗಳಲ್ಲಿ 12 ಲಕ್ಷ ರೂ. ಖರ್ಚು ಮಾಡಿದೆ.

    ಲಾಕ್ ಡೌನ್ ಘೋಷಣೆಯಾದ ಸಂದರ್ಭದ ಮೂರು ತಿಂಗಳು ಯಾವುದೇ ವಸ್ತುಗಳನ್ನು ಖರೀದಿಸದ ನಗರಸಭೆಯು ಆ ಬಳಿಕ ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್‌ಗೆ 12 ಲಕ್ಷ ವ್ಯಯಿಸಿರುವ ಕುರಿತು ’ವಿಜಯವಾಣಿ’ಗೆ ದಾಖಲೆಗಳು ಲಭ್ಯವಾಗಿದೆ. ಈ 12 ಲಕ್ಷ ರೂ.ಗಳನ್ನು ಪೌರ ಕಾರ್ಮಿಕರ ಕಲ್ಯಾಣ ಯೋಜನೆಯಡಿ ಕಾಯ್ದಿರಿಸಿದ ಅನುದಾನದಿಂದ ಬಳಸಿಕೊಳ್ಳಲಾಗಿದೆ. ಪುನರ್ ಬಳಕೆ ಮಾಡಬಲ್ಲ ಪ್ರತಿಯೊಂದಕ್ಕೆ 350 ರೂ.ನಂತೆ 240 ಕೈ ಗವಸುಗಳನ್ನು ಹಾಸನದ ಎನ್‌ಕೆ ಎಂಟರ್‌ಪ್ರೈಸಸ್‌ನಿಂದ ಖರೀದಿಸಿದ್ದು ಜಿಎಸ್‌ಟಿ ಸೇರಿ ಅದರ ಮೊತ್ತ 99,120 ರೂ. ಆಗಿದೆ. ಅ. 12 ರಂದು 25 ರೂ. ಬೆಲೆಯ ಒಂದು ಸಾವಿರ ಸರ್ಜಿಕಲ್ ಮಾಸ್ಕ್ ಹಾಗೂ 28 ರೂಪಾಯಿಯ 2 ಸಾವಿರ ಹ್ಯಾಂಡ್ ಗ್ಲೌಸ್‌ಗಳನ್ನು ಖರೀದಿಸಿದ್ದು ಅದರ ಒಟ್ಟು ಬೆಲೆ 95,580 ರೂ. ಆಗಿದೆ. 68, 440 ರೂ. ಮೊತ್ತದ ಸಾವಿರ ಕೆ.ಜಿ. ಮಿಲಾಥಿನ್ ಡಸ್ಟ್ ಆಯಿಲ್ ಹಾಗೂ 106 ಲೀಟರ್ ಪೆನಾಯಿಲ್‌ಗೆ 11,236 ರೂ. ನೀಡಲಾಗಿದೆ. ಒಂದು ಜೊತೆ ಗಮ್ ಬೂಟ್‌ಗೆ 600 ರೂ.ನಂತೆ 140 ಜೊತೆ ಬೂಟುಗಳನ್ನು ಖರೀದಿಸಲಾಗಿದ್ದು ಜಿಎಸ್‌ಟಿ ಸೇರಿ 99,120 ರೂ. ಬೆಲೆಯಾಗಿದೆ. ಅ. 12 ರಂದು 6 ಲೇಯರ್ ಸಾಮರ್ಥ್ಯದ 210 ರೂ. ಬೆಲೆಯ 400 ಮಾಸ್ಕ್‌ಗಳನ್ನು ಖರೀದಿಸಿದ್ದು ಒಟ್ಟು ದರ 99,120 ರೂ. ಆಗಿದೆ.

    ನಗರಸಭೆ ಪೌರ ಕಾರ್ಮಿಕರು ಹಾಗೂ ಜನದಟ್ಟಣೆ ಪ್ರದೇಶದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ 153 ಪಿಪಿಇ ಕಿಟ್‌ಗಳನ್ನು ಹಾಸನದ ಎಸ್‌ಎಲ್‌ಆರ್ ಅಟೋಮೇಷನ್ಸ್‌ನಿಂದ ಖರೀದಿಸಿದ್ದು ಒಂದರ ಬೆಲೆ 650 ರೂ. ಒಟ್ಟು 99,450 ರೂ. ಆಗಿದೆ. ಅ. 3 ರಂದು 220 ಫೇಸ್ ಶೀಲ್ಡ್ ಖರೀದಿಸಿದ್ದು ಒಂದಕ್ಕೆ 385 ರೂ. ನೀಡಿದ್ದು ಅದರಿಂದ 99,946 ರೂ. ಬಿಲ್ ಪಾವತಿಸಲಾಗಿದೆ. ಅದೇ ರೀತಿ ಜುಲೈ 17 ರಂದು 240 ಜೊತೆ ಪುನರ್ ಬಳಕೆಯಾಗುವ ಕೈ ಗವಸು ಖರೀದಿಸಿದ್ದು ಒಟ್ಟು ಮೊತ್ತ 99,120 ರೂ. ಪಾವತಿಯಾಗಿದೆ. ಘನತ್ಯಾಜ್ಯ ವಿಲೇವಾರಿ ಹಾಗೂ ಸ್ವಚ್ಛತಾ ಕೆಲಸದಲ್ಲಿ ತೊಡಗುವ ಪೌರ ಕಾರ್ಮಿಕರಿಗೆ 140 ಜೊತೆ ಗಮ್ ಬೂಟ್ ಖರೀದಿಗೆ 99,120 ರೂ. ವ್ಯಯಿಸಲಾಗಿದೆ. ಜುಲೈ 17 ರಂದು ಪೌರ ಕಾರ್ಮಿಕರಿಗಾಗಿ 220 ಮಾಸ್ಕ್ ಖರೀದಿಸಿದ್ದು ಅದರ ಒಟ್ಟು ಬೆಲೆ 99,946 ರೂ. ಆಗಿದೆ. ಅಂದರೆ ಒಂದು ಮಾಸ್ಕ್‌ಗೆ 454 ರೂ. ನೀಡಿದ್ದಾರೆ. ಮತ್ತೆ 153 ಪಿಪಿಇ ಕಿಟ್ ಖರೀದಿಸಿದ್ದು ಅದಕ್ಕೆ ಒಂದಕ್ಕೆ 650 ರೂ.ನಂತೆ 99,450 ರೂ. ಬಿಲ್ ಪಾವತಿ ಮಾಡಲಾಗಿದೆ. ಒಂದಕ್ಕೆ 210 ರೂ.ನಂತೆ 400 ಮಾಸ್ಕ್‌ಗಳನ್ನು 99,120 ರೂ. ಕೊಟ್ಟು ಖರೀದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts