More

    ಹಾಸನ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಹಾಸನ: ಬಿಸಿಎಂ ಹಾಸ್ಟೆಲ್ ಮೂಲಭೂತ ಸೌಕರ್ಯದ ಕೊರತೆ ಖಂಡಿಸಿ ವಿದ್ಯಾರ್ಥಿಗಳೆಲ್ಲಾ ಮಂಗಳವಾರ ಬೆಳಗ್ಗೆ ಪ್ರತಿಭಟನೆ ನಡೆಸಿ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದರು.

    ನಗರದ ಆಕಾಶವಾಣಿ ಹಿಂಭಾಗದ ರಸ್ತೆ ಬಳಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೆಟ್ರಿಕ್ ನಂತರ ಬಾಲಕರ ವಿದ್ಯಾಥಿ ನಿಲಯದಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲ. ಇಲ್ಲಿ ಹಲವಾರು ಸಮಸ್ಯೆಗಳಿವೆ. ಇಲ್ಲಿ ಸರಿಯಾದ ಊಟ ಕೊಡುವುದಿಲ್ಲ. ಶೌಚಾಲಯದ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿದೆ. ಇಲ್ಲಿನ ಅವ್ಯವಸ್ಥೆಗೆ ಬಗ್ಗೆ ವಾರ್ಡನ್‌ಗೆ ಪ್ರಶ್ನೆ ಮಾಡಿದರೆ ಹೊರಗಿನವರು ಬಂದು ಬಂದು ಜೀವ ಬೆದರಿಕೆ ಹಾಕುತ್ತಾರೆ. ಪ್ರಶ್ನೆ ಮಾಡಿದವರನ್ನು ಹಾಸ್ಟೆಲ್‌ನಿಂದ ತೆಗೆದು ಹಾಕುವುದು, ವರ್ಗಾವಣೆ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ದೂರಿದರು.

    ಈ ಹಾಸ್ಟೆಲ್ ಹೊರಗಿನಿಂದ ನೋಡುವುದಕ್ಕೆ ಚೆನ್ನಾಗಿ ಕಾಣುತ್ತದೆ. ಹಾಸ್ಟೆಲ್ ಒಳಗೆ ನೋಡಿದರೆ ಸ್ವಲ್ಪವೂ ಸ್ವಚ್ಛತೆ ಇಲ್ಲ. ಕಿಟಿಕೆಗಳೆಲ್ಲಾ ಒಡೆದು ಹೋಗಿದ್ದು ಕೊಠಡಿಗಳಿಗೆ ಹಾವುಗಳು ಬರುತ್ತಿವೆ. ಹಾಸ್ಟೆಲ್ ಕಸವನ್ನು ಆವರಣದಲ್ಲೇ ಎಸೆಯಲಾಗುತ್ತಿದ್ದು. ಬೆಳಗಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಂಬಂಧಪಟ್ಟ ಯಾವ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿಲ್ಲ. ಈ ಸಮಸ್ಯೆಗಳು ಕೂಡಲೇ ಬಗೆಹರಿಯಬೇಕು. ಇಲ್ಲವಾದರೇ ಸಮಸ್ಯೆ ಬಗೆಹರಿಯುವವರೆಗೂ ಹಾಸ್ಟೆಲ್ ಒಳಗೆ ಹೋಗದೆ ಉಪವಾಸ ಕೂರುವುದಾಗಿ ಎಚ್ಚರಿಕೆ ನೀಡಿದರು.

    ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಸಿದ್ದಪ್ಪ, ಪ್ರವೀಣ್ ಚೌಹಣ್, ಹಾಸ್ಟೆಲ್ ವಿದ್ಯಾರ್ಥಿಗಳಾದ ಕೀರ್ತಿ, ಯಶವಂತ್, ದಯಾನಂದ್, ವಿಕ್ರಮ್, ವಿನಯ್, ಪ್ರವೀಣ್, ಶಶಾಂಕ್, ಜೀವನ್, ರಾಘವೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts