More

    ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಭಾರತ-ಪಾಕ್​ ಪಂದ್ಯ: 2 ವರ್ಷದ ಮೊಮ್ಮೊಗಳನ್ನು ಮುದ್ದಾಡುವ ತವಕ ​

    ನವದೆಹಲಿ: ಹರಿಯಾಣದ ನುಹ್​ ಜಿಲ್ಲೆಯ ನಿವೃತ್ತ ವಲಯ ಅಭಿವೃದ್ಧಿ ಅಧಿಕಾರಿ ಲಿಯಾಕತ್​ ಖಾನ್​ ಅವರು ಅ.14ರಂದು ಗುಜರಾತಿನ ಅಹಮದಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿರುವ ಪಂದ್ಯಕ್ಕಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಇದು ಕೇವಲ ಕ್ರಿಕೆಟ್​ಗಾಗಿ ಮಾತ್ರವಲ್ಲ. ಇದರಲ್ಲಿ ಭಾವನಾತ್ಮಕ ಸಂಗತಿಯೊಂದಿದೆ.

    ಈ ಮೆಗಾ ಪಂದ್ಯದಿಂದಾಗಿ ಲಿಯಾಕತ್​ ಖಾನ್​ ಅವರು ತಮ್ಮ ಎರಡು ವರ್ಷದ ಮೊಮ್ಮಗಳನ್ನು ಮೊದಲ ಬಾರಿಗೆ ತಮ್ಮ ಕೈಗಳಿಂದ ಎತ್ತಿಕೊಳ್ಳುವ ಅವಕಾಶ ಸಿಗಲಿದೆ. ಖಾನ್​ ಅವರು ಮಗಳು ಸಮಿಯಾ 2019ರಲ್ಲಿ ದುಬೈನಲ್ಲಿ ಪಾಕ್​ ಬೌಲರ್​ ಹಸನ್​ ಅಲಿ ಅವರನ್ನು ಮದುವೆಯಾದರು. ನಾಲ್ಕು ವರ್ಷಗಳು ಕಳೆದಿದ್ದು, ಅಂದಿನಿಂದ ಇಂದಿನವರೆಗೂ ಖಾನ್​ ಅವರು ಗಡಿದಾಟಿ ಹೋಗಲು ಸಾಧ್ಯವಾಗಿಲ್ಲ. ಸುಮಾರು ನಾಲ್ಕು ವರ್ಷಗಳಿಂದ ಈವರೆಗೂ ಮಗಳನ್ನು ನೇರವಾಗಿ ನೋಡಿಲ್ಲ.

    ನನ್ನ ಮಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಗ ನನ್ನ ಪತ್ನಿ 2021ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ ಮತ್ತೊಮ್ಮೆ ಭೇಟಿಯಾಗಿಲ್ಲ. ನಾನು 4 ವರ್ಷಗಳಿಂದ ಮಗಳನ್ನು ಭೇಟಿಯಾಗಿಲ್ಲ. ಆದರೆ, ಅಹಮದಾಬಾದ್​ನಲ್ಲಿ ಮತ್ತೊಮ್ಮೆ ಭೇಟಿಯಾಗುವ ಭರವಸೆ ಇದೆ. ನನ್ನ ಮೊಮ್ಮಗಳನ್ನು ಹಿಡಿದುಕೊಳ್ಳಲು ನನಗೆ ಕಾಯಲು ಆಗುತ್ತಿಲ್ಲ ಎಂದು ನುಹ್​ ಜಿಲ್ಲೆಯ ಚಾಂದೇನಿ ಗ್ರಾಮದಲ್ಲಿ ನೆಲೆಸಿರುವ 63 ವರ್ಷದ ಖಾನ್​ ಹೇಳಿದ್ದಾರೆ.

    ಇದಕ್ಕೂ ಮೊದಲು ಖಾನ್​ ಕುಟುಂಬಕ್ಕೆ ಮಗಳು, ಅಳಿಯ ಮತ್ತು ಮೊಮ್ಮಗಳ ಭೇಟಿಯ ಅನಿಶ್ಚಿತತೆ ಕಾಡುತ್ತಿತ್ತು. ಕೆಲವು ರಾಜತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ಭಾರತದ ಪ್ರವಾಸವೇ ಅನುಮಾನದಲ್ಲಿತ್ತು. ಅಲ್ಲದೆ, ಹಸನ್ ಅಲಿ ಅವರನ್ನು ತಾತ್ಕಾಲಿಕ ವಿಶ್ವಕಪ್ ತಂಡದಲ್ಲಿ ಹೆಸರಿಸರಿಲಿಲ್ಲ. ಯಾವಾಗ ನಾಸೀಮ್​ ಶಾ ಕಳೆದ ಏಷ್ಯಾ ಕಪ್​ ಸಂದರ್ಭದಲ್ಲಿ ಗಾಯಗೊಂಡಿದ್ದರಿಂದ ಅವರ ಸ್ಥಾನಕ್ಕೆ ಅಲಿ ಹೆಸರನ್ನು ಆಯ್ಕೆ ಮಾಡಲಾಯಿತು.

    ಇದನ್ನೂ ಓದಿ: ಖ್ಯಾತ​​ ನಟನ ಕೈಹಿಡಿಯಲಿದ್ದಾರೆ ʼನಟ ಸಾರ್ವಭೌಮʼ ನಟಿ ಅನುಪಮಾ ಪರಮೇಶ್ವರನ್

    ಭಾರತ-ಪಾಕಿಸ್ತಾನ ಪಂದ್ಯದ ಸುತ್ತಲಿನ ಪ್ರಚಾರ ಮತ್ತು ರಾಜಕೀಯ ಉದ್ವೇಗವನ್ನು ಪರಿಗಣಿಸಿ, ಖಾನ್ ತಮ್ಮ ಮಾತುಗಳನ್ನು ತುಂಬಾ ಸೂಕ್ಷ್ಮವಾಗಿ ಮಾತನಾಡಿದರು. ನಾನು ರೋಹ್ಟಕ್‌ನಲ್ಲಿ ನನ್ನ ಕಾಲೇಜು ದಿನಗಳಲ್ಲಿ ಓದಿದ ರೂಮಿಯ ಕೋಟ್​ಗಳ ಹಾದಿಯಲ್ಲಿ ನನ್ನ ಜೀವನವನ್ನು ನಡೆಸಿದೆ. ಜನಸಮೂಹಕ್ಕೆ ಅಲ್ಲ, ನಿಮ್ಮ ಹೃದಯವನ್ನು ಆಲಿಸಿ ಎಂಬ ಮಾತನನ್ನು ಅನುಸರಿಸಿದೆ. ನನ್ನ ಮಗಳು ಎಮಿರೇಟ್ಸ್ ಏರ್‌ಲೈನ್‌ನಲ್ಲಿ ಫ್ಲೈಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು ಮತ್ತು ಮ್ಯೂಚುವಲ್​ ಫ್ರೆಂಡ್​​​ ಮೂಲಕ ದುಬೈನಲ್ಲಿ ಹಸನ್‌ನನ್ನು ಭೇಟಿಯಾದಳು. ಬಳಿಕ ಹಸನ್​ ಬಗ್ಗೆ ನನ್ನ ಬಳಿ ಹೇಳಿದಳು ಮತ್ತು ಅವಳ ನಿರ್ಧಾರವನ್ನು ನಾನು ಎಂದಿಗೂ ಅನುಮಾನಿಸಲಿಲ್ಲ ಎಂದು ಖಾನ್​ ಹೇಳಿದರು.

    ನಾನು ಅವಳ ಮೇಲೆ ನನ್ನ ನಿರ್ಧಾರಗಳನ್ನು ಬಲವಂತ ಮಾಡಿದ್ದರೆ ನನ್ನ ಶಿಕ್ಷಣದ ಅರ್ಥವೇನು? ಅವಳು ವಿದ್ಯಾವಂತಳು ಮತ್ತು ಸ್ವತಂತ್ರಳು. ನಮ್ಮ ಬೆನ್ನ ಹಿಂದೆ ಕೆಲವರು ಮಾತನಾಡುವುದನ್ನು ಯಾರು ಕೇಳುತ್ತಾರೆ? ನಾವು ಪಾಕಿಸ್ತಾನದಲ್ಲಿ ನಮ್ಮ ವಿಸ್ತೃತ ಕುಟುಂಬಗಳನ್ನು ಹೊಂದಿದ್ದೇವೆ. ದೇಶ ವಿಭಜನೆಯ ಸಮಯದಲ್ಲಿ ಅಲ್ಲಿಗೆ ಹೋಗಿದ್ದರು. ಅಲ್ಲದೆ, ಹಸನ್ ಸಹೃದಯಿ ಎಂದು ಹೇಳಿದರು.

    ನಿಮ್ಮ ಅಳಿಯ ಆಡುತ್ತಿರುವ ಭಾರತ-ಪಾಕಿಸ್ತಾನ ಪಂದ್ಯಗಳಲ್ಲಿ ನೀವು ಆಂತರಿಕ ಸಂಘರ್ಷ ಎದುರಿಸುತ್ತೀರಾ ಎಂದು ಪ್ರಶ್ನೆ ಮಾಡಿದಾಗ, ನಾನು ಸುನಿಲ್ ಗವಾಸ್ಕರ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್ ಅವರನ್ನು ನೋಡಿದ್ದೇನೆ, ಆದರೆ ನಾನು ವಿರಾಟ್ ಕೊಹ್ಲಿ ಅಭಿಮಾನಿ ಎಂದು ಅವರು ನಗುತ್ತಾ ಹೇಳಿದರು. ಈ ಯುಗದಲ್ಲಿ ವಿರಾಟ್ ಕೊಹ್ಲಿಗಿಂತ ಉತ್ತಮ ಆಟಗಾರ ಯಾರೂ ಇಲ್ಲ ಎಂದು ನಾನು ಭಾವಿಸುತ್ತೇನೆ. ಅವರ ಫಾರ್ಮ್​ನಲ್ಲಿ ಕುಸಿತ ಕಂಡುಬಂದಿರಬಹುದು ಆದರೆ, ಮರಳಿ ಫಾರ್ಮ್​ಗೆ ಬಂದಿದ್ದಾರೆ. ವಿಶ್ವಕಪ್‌ನಲ್ಲಿ ಅಧಿಕ ರನ್ ಗಳಿಸುವ ಆಟಗಾರನಾಗುತ್ತಾರೆ ಎಂಬ ಭಾವನೆ ನನ್ನಲ್ಲಿದೆ. ನಾನು ಹಸನ್ ಅವರನ್ನು ಭೇಟಿಯಾದಾಗ, ನನ್ನ ತಂಡದ (ಭಾರತ) ಆಟಗಾರರನ್ನು ಭೇಟಿ ಮಾಡಲು ನನಗೆ ಸಹಾಯ ಮಾಡಲು ನಾನು ಅವರನ್ನು ವಿನಂತಿಸುತ್ತೇನೆ. ನಾನು ವಿರಾಟ್ ಕೊಹ್ಲಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಯಸುತ್ತೇನೆ ಮತ್ತು ರಾಹುಲ್ ದ್ರಾವಿಡ್‌ಗೆ ನನ್ನ ನಮನಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದು ಖಾನ್​ ತಿಳಿಸಿದರು. (ಏಜೆನ್ಸೀಸ್​)

    ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕ್​ಗೆ ಮೊದಲ ಗೆಲುವು: ಭವಿಷ್ಯ ನುಡಿದ ಮಾಜಿ​ ಕ್ರಿಕೆಟರ್​​

    ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ; ಇಂದಿನ ಚಿನ್ನ ಬೆಳ್ಳಿ ದರ ಇಲ್ಲಿ ತಿಳಿದುಕೊಳ್ಳಿ…

    ಪಾಕ್​ನಲ್ಲಿ ಅಂಧತ್ವದಿಂದ ಬಳಲುತ್ತಿದ್ದಾರೆ 4 ಲಕ್ಷ ಮಂದಿ!; ಕಾರಣವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts