More

    ಬಡ್​ವೈಸರ್​ ಉದ್ಯೋಗಿ 12 ವರ್ಷಗಳಿಂದ ಬಿಯರ್​ ಟ್ಯಾಂಕ್​ನಲ್ಲಿ ಈ ಕೆಲಸ ಮಾಡ್ತಾ ಇದ್ನಾ…? ಇಲ್ಲಿದೆ ಫ್ಯಾಕ್ಟ್​ಚೆಕ್​

    ನವದೆಹಲಿ: ಬಡ್​ವೈಸರ್​ ಉದ್ಯೋಗಿ ಬಿಯರ್​ ಟ್ಯಾಂಕ್​ ಮೂತ್ರ ವಿಸರ್ಜನೆ ಮಾಡ್ತಾ ಇದ್ದ ವಿಡಿಯೋ ಹಾಗೂ ಸುದ್ದಿ ಎಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಕಳೆದೆರಡು ದಿನಗಳಿಂದ ಭಾರಿ ಟ್ರೆಂಡಿಗ್​ನಲ್ಲಿದೆ.

    ಈಗ ಮತ್ತೊಂದು ಸುದ್ದಿ ಅದನ್ನೂ ಮೀರಿಸಿ ಟ್ರೆಂಡ್​ ಆಗ್ತಾಯಿದೆ. ಆ ಸುದ್ದಿ ಹೀಗಿದೆ… ಸಿಕ್ಕಿ ಬಿದ್ದಿರುವ ಬಡ್​ವೈಸರ್​ ಉದ್ಯೋಗಿ ವಾಲ್ಟರ್​ ಕಳೆದ 12 ವರ್ಷಗಳಿಂದ ಬಿಯರ್​ ಟ್ಯಾಂಕ್​ನಲ್ಲಿ ಮೂತ್ರ ವಿಸರ್ಜಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನುವುದು ಸುದ್ದಿಯ ತಿರುಳು.

    ಇದನ್ನೂ ಓದಿ: ಬಯಲು ಚಿತ್ರಮಂದಿರಗಳಾಗುತ್ತಿವೆ ಸೂಪರ್​ ಮಾರ್ಕೆಟ್​ನ ಪಾರ್ಕಿಂಗ್​ ತಾಣಗಳು

    ಕೆಲಸದ ಪ್ರದೇಶದಲ್ಲಿ ಶೌಚಗೃಹ ದೂರವಿದ್ದ ಕಾರಣ ಅಲ್ಲಿಯವರೆಗೆ ನಡೆದಕೊಮಡು ಹೋಗಲು ನನಗೆ ಸೋಮಾರಿತನ ಕಾಡುತ್ತಿತ್ತು. ಹೀಗಾಗಿ ಮೂತ್ರ ವಿಸರ್ಜಿಸಬೇಕು ಎಂದಾಗಲೆಲ್ಲ ಬಿಯರ್ ಟ್ಯಾಂಕ್​ ಬಳಸಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾಗಿ ಆ ವರದಿಯಲ್ಲಿದೆ.
    ಆತ ಬಡ್​ವೈಸರ್​ನ ಪೋರ್ಟ್​ ಕಾಲಿನ್ಸ್​ ಘಟಕದಲ್ಲಿ ಕಳೆದೆರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಉಳಿದೆಲ್ಲ ಬಿಯರ್​ಗಳಲ್ಲಿ ಮೂತ್ರ ಸೇರಿಲ್ಲ ಎಂದು ವ್ಯಂಗ್ಯವಾಡಲಾಗಿತ್ತು.

    ಈ ಸುದ್ದಿ ವೆಬ್​ಸೈಟ್​ವೊಂದರಲ್ಲಿ ಪ್ರಸಾರವಾಗುತ್ತಿದ್ದಂತೆ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿತ್ತು. ಅಬ್ಬಾ ಆ ಬಿಯರ್​ ಸಹವಾಸವೇ ಬೇಡಪ್ಪ ಎಂದು ಟೀಕಿಸುತ್ತಿರುವುದು, ಪ್ರತಿಕ್ರಿಯಿಸುತ್ತಿರುವುದು ಕಂಡಬರುತ್ತಿದೆ.

    ಇದನ್ನೂ ಓದಿ: ಆರೇ ತಿಂಗಳಲ್ಲಿ ಅಂಬಾನಿ ಮೀರಿಸುವಂತೆ ಬೆಳೆದ; ಬಳಿಕ ಹುದ್ದೆಯನ್ನೇ ತೊರೆದ ಜಾಕ್​ ಮಾ ಪ್ರತಿಸ್ಪರ್ಧಿ

    ಹೀಗಿದ್ದರೂ ಕಂಪನಿ ಕಡೆಯಿಂದ ಯಾವುದೇ ಸ್ಪಷ್ಟನೆ ಏಕೆ ಬರುತ್ತಿಲ್ಲ ಎಂಬುದನ್ನು ಪರಿಶೀಲಿಸಿದಾಗ ಗೊತ್ತಾದ ವಿಚಾರವಿದು. ಅಷ್ಟಕ್ಕೂ ಆ ಸುದ್ದಿ ಪ್ರಕಟವಾದ ವೆಬ್​ಸೈಟ್​ನ ಹೆಸರು foolishhumour.com ಎಂದು. ಸುದ್ದಿಯ ಕೊನೆಯಲ್ಲಿ ಸೂಚನೆಯೊಂದನ್ನು ಅವರು ಕೊಟ್ಟಿದ್ದಾರೆ. ಇಲ್ಲಿ ಪ್ರಕಟವಾಗುವ ವರದಿಗಳೆಲ್ಲ ತಮಾಷೆ ಹಾಗೂ ವ್ಯಂಗ್ಯ ಹಾಗೂ ಕಲ್ಪನೆಯಿಂದ ಕೂಡಿವೆ. ಇದನ್ನು ಅರಿತ ಕಂಪನಿ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಹೇಳಲಾಗಿದೆ.

    ಬೆಳಗಾವಿ ರೋಗಿಗಳು ಪಡೆಯಲಿದ್ದಾರೆ ದೇಶದ ಮೊಟ್ಟ ಮೊದಲ ಕರೊನಾ ಲಸಿಕೆ; ಕ್ಲಿನಿಕಲ್​ ಟ್ರಯಲ್​ಗೆ 12 ಸಂಸ್ಥೆಗಳ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts