More

    ಅತ್ಯಾಚಾರ, ಲೈಂಗಿಕ ಕಿರುಕುಳ ಸಂತ್ರಸ್ತರ ಬಾಯಿ ಮುಚ್ಚಿಸಲು 143 ಕೋಟಿ ರೂ. ಕೊಟ್ಟ ಚಿತ್ರ ನಿರ್ಮಾಪಕ

    ನವದೆಹಲಿ: ಪಾಶ್ಚಾತ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಭಾರಿ ಮೊತ್ತ ಪಾವತಿಸಿದ್ದೇ ಆದಲ್ಲಿ ಅಪರಾಧಕ್ಕೆ ವಿಧಿಸಲಾಗುವ ಶಿಕ್ಷೆಯಿಂದ ಪಾರಾಗಲು ಅವಕಾಶವಿದೆ. ಅಂತೆಯೇ ಹಾಲಿವುಡ್​ನ ಮೊಘಲ್​ ಎಂದೇ ಕರೆಯಿಸಿಕೊಳ್ಳುತ್ತಿದ್ದ ಚಿತ್ರ ನಿರ್ಮಾಪಕನೊಬ್ಬ ಭಾರಿ ಮೊತ್ತ ನೀಡಿ ಶಿಕ್ಷೆ ಅನುಭವಿಸುವುದರಿಂದ ಪಾರಾಗಿದ್ದಾನೆ.

    ಮೀರಾಮ್ಯಾಕ್ಸ್​ ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿ ತಾನು ನಿರ್ಮಿಸಿದ ಚಿತ್ರಕ್ಕೆ ಆಸ್ಕರ್​ ಪ್ರಶಸ್ತಿಗಳನ್ನು ಪಡೆದಿರುವ ​ ಹಾರ್ವೆ ವೆನ್​ಸ್ಟೀಯನ್​ ವಿರುದ್ಧ ಹಲವರು ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಆರೋಪ ಹೊರಿಸಿದ್ದರು.

    ಇದನ್ನೂ ಓದಿ; ಸ್ಟೇಷನ್​ನಲ್ಲಿ ಅಸಭ್ಯವಾಗಿ ವರ್ತಿಸಿದ ಇನ್​ಸ್ಪೆಕ್ಟರ್​ಗೆ ಮಹಿಳೆ ಬುದ್ಧಿ ಕಲಿಸಿದ್ದು ಹೀಗೆ….!

    ಈ ಪೈಕಿ 9 ಜನರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯೂಯಾರ್ಕ್​ನ ಮ್ಯಾನ್​ಹಾಟನ್​ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ನ್ಯಾಯಾಲಯದ ಹೊರಗೆ ನಡೆದ ಸಂಧಾನ ಸೂತ್ರದಂತೆ ಸಂತ್ರಸ್ತರಿಗೆ 19 ಮಿಲಿಯನ್​ ಡಾಲರ್​ (ಅಂದಾಜು 143 ಕೋಟಿ ರೂ.) ನೀಡುವ ಒಪ್ಪಂದ ಏರ್ಪಟ್ಟಿದೆ. ಬದಲಾಗಿ ಹಾರ್ವೆ ವೆನ್​ಸ್ಟೀಯನ್​ ವಿರುದ್ಧ ಸಂತ್ರಸ್ತರು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡದ ಗೌಪ್ಯತಾ ಒಪ್ಪಂದಕ್ಕೆ ಒಪ್ಪಿಗೆ ನೀಡಿದ್ದಾರೆ.

    ಆದರೆ, ಸಂತ್ರಸ್ತರ ಪರ ವಾದಿಸುತ್ತಿದ್ದ ವಕೀಲರು, ಪ್ರಕರಣ ಸಂಪೂರ್ಣ ಮಾರಾಟದ ಸರಕಾಗಿ ಪರಿಣಮಿಸಿದೆ ಎಂದು ಟೀಕಿಸಿದ್ದಾರೆ. ಹಾರ್ವೆ ವೆನ್​ಸ್ಟೀಯನ್​ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು ಹಾಗೂ ಪರಿಹಾರದ ಮೊತ್ತವನ್ನು ಕಂಪನಿಯ ಬದಲಾಗಿ ವೈಯಕ್ತಿಕವಾಗಿ ಭರಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲೂ ವಾದ ಮಾಡುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ; ದೇಗುಲವನ್ನು ಮಸೀದಿಯಾಗಿಸಿದ ತಬ್ಲಿಘಿಗಳು; ಪಾಕ್​ನಲ್ಲಿ 102 ಹಿಂದುಗಳ ಬಲವಂತದ ಮತಾಂತರ

    ಹಾರ್ವೆ ವೆನ್​ಸ್ಟೀಯನ್​ ವಿರುದ್ಧ ನೂರಾರು ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅವಕಾಶ ಅರಸಿ ತನ್ನ ಬಳಿಗೆ ಬರುವ ಉದಯೋನ್ಮುಖ ನಟಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಆರೋಪಿಸಿದ್ದರು. ಅವರಲ್ಲಿ ಕೆಲವರು ಕೋರ್ಟ್​ ಮೆಟ್ಟಿಲೇರಿದ್ದರಿಂದ ಆರೋಪ ಸಾಬೀತಾಗಿ 23 ವರ್ಷಗಳ ಶಿಕ್ಷೆಗೂ ಗುರಿಯಾಗಿದ್ದ. ಕೋರ್ಟ್​ ಹೊರಗಿನ ಒಪ್ಪಂದದಿಂದಾಗಿ ಆತ ಶಿಕ್ಷೆಯಿಂದ ಪಾರಾಗುವಂತಾಗಿದೆ. ಈ ನಡುವೆ ಲಾಸ್​ ಎಂಜಲೀಸ್​ ನ್ಯಾಯಾಲಯದಲ್ಲೂ ಈತನ ವಿರುದ್ಧ ಲೈಂಗಿಕ, ಕಿರುಕುಳದ ಕೇಸ್​ಗಳ ವಿಚಾರಣೆ ನಡೆಯುತ್ತಿದೆ.

    50 ಸಿಮ್​ಗಳನ್ನು ಬದಲಿಸಿದ್ದರೆ ಸುಶಾಂತ್​ ಸಿಂಗ್​; ಶೇಖರ್​ ಸುಮನ್​ ಮೇಲೆ ಸಿಟ್ಟಾಗಿದ್ದೇಕೆ ನಟನ ಕುಟುಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts