More

    ಸಮಸ್ಯೆಗಳಿದ್ದರೆ ಕೂಡಲೇ ಪರಿಹರಿಸಿಕೊಳ್ಳುವಂತೆ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಮನವಿ

    ಹರಪನಹಳ್ಳಿ: ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸಲು ತಾಲೂಕು ಆಡಳಿತವೇ ನಿಮ್ಮ ಬಳಿ ಬಂದಿದ್ದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಹೇಳಿದರು.

    ತಾಲೂಕಿನ ತೆಲಗಿ ಹೋಬಳಿ ವ್ಯಾಪ್ತಿಯ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಂದಾಯ ಇಲಾಖೆಗೆ ಒಳಪಡುವ ಪಹಣಿ, ಪೌತಿವರಸು, ಪಾಲುವಿಭಾಗ, ಹದ್ದುಬಸ್ತು ಸೇರಿದಂತೆ ಸಾಮಾಜಿಕ ಭದ್ರತೆ ಯೋಜನೆಯಡಿ ಸಮಸ್ಯೆಗಳಿದ್ದರೆ ಕೂಡಲೇ ಪರಿಹರಿಸುವ ಕೆಲಸ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

    ತಾಪಂ ಇಒ ಕೆ.ಪ್ರಕಾಶ್ ಮಾತನಾಡಿ, ಪಂಚಾಯತ್ ರಾಜ್ಯ ಇಲಾಖೆ ವ್ಯಾಪ್ತಿಯ ರಸ್ತೆ, ಚರಂಡಿ, ದೀಪ, ಕುಡಿಯುವ ನೀರು ವಸತಿ ಸೇರಿದಂತೆ ಇತರೆ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅದಷ್ಟು ಗ್ರಾಪಂ ಮಟ್ಟದಲ್ಲಿ ಬಗೆಹರಿಸುತ್ತೇವೆ ಉಳಿದಂತೆ ಪ್ರಮುಖ ಕೆಲಸಗಳನ್ನು ಶಾಸಕರ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮಾಡುತ್ತೇವೆ ಎಂದರು.

    ಕಾರ್ಯಕ್ರಮದಲ್ಲಿ ಹಾಜರಿದ್ದ ಕೆ.ಕಲ್ಲಹಳ್ಳಿ, ಇಟ್ಟಿಗುಡಿ, ಹಂಪಾಪುರ, ಚಿಕ್ಕಮಜ್ಜಿಗೇರಿ ಅರೇಮಜ್ಜಿಗೇರಿ ಇ.ಬೇವಿನಹಳ್ಳಿ, ವ್ಯಾಸನತಾಂಡ, ಭೀಮ್ಲತಾಂಡದ ಗ್ರಾಮಸ್ಥರು ರಸ್ತೆ, ಚರಂಡಿ, ಕುಡಿವ ನೀರು, ವಸತಿ, ಸ್ಮಶಾನ, ಶಾಲಾ ಕೊಠಡಿ, ಶೌಚಗೃಹ ಇತರ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಮನವಿ ಮಾಡಿಕೊಂಡರು.

    ಕಾರ್ಯಕ್ರಮಕ್ಕೂ ಮುನ್ನ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್ ಗ್ರಾಮಸ್ಥರೊಂದಿಗೆ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ನೀರು ತುಂಬಿ ಹರಿಯುವ ಹಳ್ಳದ ಸೇತುವೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಗ್ರಾಮದ ಪ್ರತಿ ಓಣಿಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಅಲಿಸಿದರು.

    ಗ್ರಾಪಂ ಅಧ್ಯಕ್ಷ ಸುಗಂದಮ್ಮ, ಉಪಾಧ್ಯಕ್ಷೆ ಹೊನ್ನಮ್ಮ, ಸದಸ್ಯರಾದ ಎಚ್.ಚೌಡಮ್ಮ, ನೇತ್ರಾವತಿ ವಿರೂಪಾಕ್ಷಪ್ಪ, ನಿಂಗಪ್ಪ, ಯಲ್ಲಪ್ಪ, ನಾಗೇಂದ್ರಪ್ಪ, ದ್ಯಾಮಪ್ಪ, ಬಸವರಾಜ, ಮಲ್ಲಿಕಾರ್ಜುನ, ಪಿಡಿಒ ಅನ್ನಧಾನಿನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಮೌನೇಶ್ ಕೋಟ್ರೇಶ್ ಸ್ವಾಮಿ, ಮುಖ್ಯಶಿಕ್ಷಕ ಸಿದ್ದಪ್ಪ, ಮುಖಂಡರಾದ ಪಿ.ಕೋಟ್ರೆಶ್, ನಂದೀಶ್ ಆಚಾರಿ, ಪುಟ್ಟನಗೌಡ, ಹಾಲೇಶ್, ಹನುಮಂತಪ್ಪ, ಮೌನೇಶ್, ನಾಗರಾಜ್, ಸಾಲಿ ಬಸಪ್ಪ, ಸಂತೋಷನಾಯ್ಕ, ಬೀರಪ್ಪ, ರಾಜೇಂದ್ರಗೌಡ, ವಾಮಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts