More

    ಗೃಹನಿರ್ಮಾಣಕ್ಕೆ 5 ಎಕರೆ ಜಮೀನು, ಶಾಸಕ ಜಿ.ಕರುಣಾಕರರೆಡ್ಡಿ ಭರವಸೆ

    ಹರಪನಹಳ್ಳಿ: ದೇಶದಲ್ಲಿ ಜನರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಬಹುಮುಖ್ಯವಾಗಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು. ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದಿಂದ 11ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಹರಪನಹಳ್ಳಿಯಲ್ಲಿ ಪೌರಕಾರ್ಮಿಕರ ನಿವೇಶನಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಪ್ಲಾಟ್ ಮಾಡಿಕೊಡಲು ಶೀಘ್ರವೇ 5 ಎಕರೆ ಜಮೀನು ನೀಡಲು ಕ್ರಮವಹಿಸಲಾಗುವುದು.

    ದಿನ ನಿತ್ಯ ಪಟ್ಟಣ, ನಗರ ಊರುಗಳನ್ನು ಸ್ವಚ್ಛಗೊಳಿಸುವ ಸ್ವಚ್ಛತಾ ಸಿಬ್ಬಂದಿ ಕಾರ್ಯ ಶ್ಲಾಘನೀಯ. ಆದ್ದರಿಂದ ಪಟ್ಟಣದ 65ಜನ ಖಾಯಂ ನೌಕರರಿದ್ದು ಉಳಿದ ನೌಕರರನ್ನು ಸಹ ಮುಖ್ಯಮಂತ್ರಿಗಳು ಶೀಘ್ರದಲ್ಲಿ ಖಾಯಂಗೊಳಿಸುವ ವಿಶ್ವಾಸವಿದೆ. ಬಸವಣ್ಣನವರ ಆಶಯದಂತೆ, ಕಾಯಕದಂತೆ ತಾವು ಯಾವುದೇ ಮುಜುಗರಕ್ಕೆ ಒಳಗಾಗದೆ ತಮ್ಮ ಕಾಯಕವನ್ನು ಪ್ರೀತಿ, ಗೌರವ, ಪ್ರಾಮಾಣಿಕತೆಯಿಂದ ಮಾಡಿ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದರು.

    ಪುರಸಭೆ ಅಧ್ಯಕ್ಷ ಎಚ್ ಎಂ. ಅಶೋಕ ಮಾತನಾಡಿ, ಪಟ್ಟಣದಲ್ಲಿ ವಾರ್ಡ್‌ಗಳಲ್ಲಿ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಕಾರ್ಯ ಸ್ಮರಣೀಯವಾದದ್ದು, ಒಳಚರಂಡಿಗಳ ಸ್ವಚ್ಛತೆಗೆ ಕಾರ್ಮಿಕರು ಮ್ಯಾನವಲ್‌ಗಳಲ್ಲಿ ಇಳಿಯದಂತೆ ಎಚ್ಚರಿಕೆವಹಿಸಬೇಕು ಎಂದರು.

    ಮುಖ್ಯಾಧಿಕಾರಿ ಶಿವಕುಮಾರ ಎರಗುಡಿ ಮಾತನಾಡಿ, ಪೌರಕಾರ್ಮಿಕರ ಹಿತರಕ್ಷಣೆಗೆ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಪೌರಕಾರ್ಮಿಕರಿಗೆ 12ಲಕ್ಷ ರೂ.ವೆಚ್ಚದಲ್ಲಿ ವಿಶ್ರಾಂತಿಗೃಹ ನಿರ್ಮಿಸುವ ಯೋಜನೆ ಇದೆ ಎಂದರು. ಪಟ್ಟಣದ ಎಲ್ಲಾ ಪೌರಕಾರ್ಮಿಕರಿಗೆ ಶಾಸಕರು, ಪುರಸಭೆ ಅಧ್ಯಕ್ಷರು ಸನ್ಮಾನಿಸಿ ಗೌರವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts