More

    ಗುಜರಾತ್‌ನಿಂದ ಬಂದ ಬಾಲಕನಿಗೆ ಪಾಸಿಟಿವ್

    ಹರಪನಹಳ್ಳಿ: 13 ವರ್ಷದ ಬಾಲಕನೊಬ್ಬನಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಬಾಣಗೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.
    ಗುಜರಾತ್‌ನಿಂದ ಬಂದಿದ್ದ ತಂದೆ-ಮಗನನ್ನು ತೋರಣಗಲ್ ಬಳಿ ಅಧಿಕಾರಿಗಳು ಕ್ವಾರಂಟೈನ್‌ನಲ್ಲಿಟ್ಟಿದ್ದರು. ತಂದೆಗೆ ಪರೀಕ್ಷೆ ನಡೆಸಿದಾಗ ಫಲಿತಾಂಶ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ತಂದೆ ಜೊತೆ ಮಗನನ್ನು ಬಿಡುಗಡೆ ಮಾಡಿದ್ದರು. ಮೇ 30ರ ಬೆಳಗ್ಗೆ ಪಟ್ಟಣದ ಬಾಣಗೇರಿ ನಿವಾಸಕ್ಕೆ ಇಬ್ಬರೂ ಬಂದಿದ್ದರು. ಆದರೆ ಇಂದು ಪುತ್ರನ ಫಲಿತಾಂಶ ಪಾಸಿಟಿವ್ ಬಂದಿದೆ.

    ಸೋಂಕಿತ ಬಾಲಕನನ್ನು ಭಾನುವಾರ ಸಂಜೆ ಬಳ್ಳಾರಿ ಕೋವಿಡ್ ಆಸ್ಪತ್ರೆಗೆ ಕಳಿಸಲಾಗಿದೆ. ಇತ್ತ ಬಾಣಗೇರಿಯ ಅವರ ಮನೆ ಹಾಗೂ 100 ಮೀಟರ್ ಸುತ್ತ ಕಂಪ್ಲೀಟ್ ಸೀಲ್‌ಡೌನ್ ಮಾಡಲಾಗಿದೆ. ನಂತರ 900 ಮೀಟರ್ ಬಫರ್ ಜೋನ್ ಎಂದು ಘೋಷಿಸಿ, ಬ್ಯಾರಿಕೇಡ್ ಹಾಕಿದೆ ಎಂದು ತಹಸೀಲ್ದಾರ್ ಡಾ.ನಾಗವೇಣಿ ತಿಳಿಸಿದರು.

    ಬಾಲಕನ ಮನೆ ಬಳಿ ರಾಸಾಯನಿಕ ಸಿಂಪಡಣೆ ಮಾಡಿದೆ. ಆತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರ ಪತ್ತೆ ಕಾರ್ಯ ನಡೆದಿದೆ. ಸಂಬಂಧ ಪಟ್ಟ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುವುದು ಎಂದು ಹೇಳಿದರು.
    ಹಸಿರುವಲಯದಲ್ಲಿದ್ದ ಹರಪನಹಳ್ಳಿಗೂ ಕರೊನಾ ಕಾಲಿಟ್ಟಿದ್ದು, ಜನರಲ್ಲಿ ಆತಂಕ ಹೆಚ್ಚಿದೆ. ತಾಲೂಕು ಆಡಳಿತ, ಪೋಲಿಸ್, ಆರೋಗ್ಯ ಮತ್ತು ಆಶಾ ಕಾರ್ಯಕರ್ತರಿಗೆ ಬಿಡುವಿಲ್ಲದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ತಾಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್, ಸಿಪಿಐ ಕುಮಾರ, ಪಿಎಸ್‌ಐ ಪ್ರಕಾಶ್ ಕಂದಾಯ ಹಾಗೂ ಆರೋಗ್ಯ ಸಿಬ್ಬಂದಿ ಸ್ಥಳದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts