More

    ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜಕೀಯೇತರವಾಗಿರಲಿ

    ಹರಪನಹಳ್ಳಿ: ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾತೀತ ಸಹಕಾರ ಅಗತ್ಯ ಎಂದು ಜಗಳೂರು ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳಿದರು.

    ತಾಲೂಕಿನ ಅರಸೀಕೆರೆ ಗ್ರಾಮದ ದುಗಾರ್ಂಭಿಕ ಕಾರ್ತಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮಾಜಿಕ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು. ತಮ್ಮ ಆಡಳಿತಾವಧಿಯಲ್ಲಿ 60 ಕೆರೆ ತುಂಬಿಸುವ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆ, ಹಾಗೂ 57 ಕೆರೆ ತುಂಬಿಸುವ ಯೋಜನೆಗಳು ಜಾರಿಯಾಗಿದ್ದವು. ಅಲ್ಲದೆ ಮಾಜಿ ಶಾಸಕ ಎಂ.ಪಿ.ರವೀಂದ್ರ ಹಾಗೂ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ನಿರಂತರ ಹೋರಾಟದ ಫಲವಾಗಿ ಹರಪನಹಳ್ಳಿ ತಾಲೂಕಿಗೆ 371 ಜೆ.ಕಲಂ ದೊರೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜಕೀಯೇತರವಾಗಿ ಜರುಗಬೇಕು ಎಂದರು.

    ಸಾಮಾಜಿಕ ನಾಟಕ ಪ್ರದರ್ಶನವನ್ನು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಉದ್ಘಾಟಿಸಿ ಮಾತನಾಡಿ, ನಾಟಕದಲ್ಲಿನ ಉತ್ತಮ ಪಾತ್ರಗಳು ಜೀವನಕ್ಕೆ ಪೂರಕವಾಗಲಿವೆ. ಗ್ರಾಮದಲ್ಲಿ ಪಕ್ಷಾತೀತವಾಗಿ ಜನರು ಜೀವನಸಾಗಿಸುತ್ತಿದ್ದು, ಸಿನಿಮಾ ಧಾರಾವಾಹಿ ಭರಾಟೆಯ ಮಧ್ಯೆ ರಂಗಭೂಮಿ ಕಲೆ ಅನಾವರಣಗೊಳಿಸುತ್ತಿರುವುದು ಶ್ಲಾಘನೀಯ ಎಂದರು.

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಕೆಪಿಸಿಸಿ ಎಸ್.ಟಿ.ಘಟಕದ ಕೆ.ಪಿ.ಪಾಲಯ್ಯ, ಪುರಸಭೆ ಸದಸ್ಯರಾದ ಎಂ.ವಿ.ಅಂಜನಪ್ಪ, ದಾದಾಪೀರ್, ಗಣೇಶ್, ಮುಖಂಡರಾದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಬಿ.ರಾಮಣ್ಣ, ರಾಜಣ್ಣ, ಮತ್ತೂರು ಬಸವರಾಜ್, ಶಿವರಾಜ್, ಸಲಾಂ ಸಾಹೇಬ್, ಪತ್ರಕರ್ತ ಮಹೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts