More

    ‘ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ’ ಬಳಿ ಬಿಗುವಿನ ವಾತಾವರಣ: ವಿದ್ಯಾರ್ಥಿಗಳ ಗೋಳಾಟ

    ಹುಬ್ಬಳ್ಳಿ: ‘ಶಾಲೆ ಖಾಲಿ ಮಾಡ್ಬೇಡಿ.. ನಾನು ಓದಿ ದೊಡ್ಡ ವ್ಯಕ್ತಿ ಆಗ್ಬೇಕು, ನನ್ನ ತಾಯಿಯನ್ನ ಸಾಕಬೇಕು… ನಮ್ ಶಾಲೆ ಖಾಲಿ ಮಾಡ್ಸಿದ್ರೆ ನಮ್​ ಟೀಚರ್​ ರೋಡಲ್ಲಿ ಕೂರ್ಸಿ ಪಾಠ ಮಾಡ್ಬೇಕಾ? ನಮ್ಗೆ ಯಾರ್ಗೂ ಶಾಲೆ ಬಿಟ್​ ಕೊಡಾಕ
    ಮನಸ್ಸಿಲ್ರಿ…’ ಇದು ಹುಬ್ಬಳ್ಳಿಯ ‘ಹರಿಜನ ಹೆಣ್ಣು ಮಕ್ಕಳ ಕನ್ನಡ ಪ್ರಾಥಮಿಕ ಶಾಲೆ’ ಬಾಗಿಲಲ್ಲಿ ವಿದ್ಯಾರ್ಥಿಗಳು ಕೈ ಮುಗಿಯುತ್ತಾ ಕಣ್ಣೀರಿಟ್ಟ ಪರಿ.

    ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ ಆವರಣದಲ್ಲಿ ಇಂದು ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರೊಂದಿಗೆ ಮಕ್ಕಳು ಮತ್ತು ಶಿಕ್ಷಕರು ವಾಗ್ವಾದ ನಡೆಸಿದ್ದಾರೆ.

    'ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ' ಬಳಿ ಬಿಗುವಿನ ವಾತಾವರಣ: ವಿದ್ಯಾರ್ಥಿಗಳ ಗೋಳಾಟ1956ರಲ್ಲಿ ‘ಹರಿಜನ ಸರ್ಕಾರಿ ಅನುದಾನಿತ ಶಾಲೆ’ ಆರಂಭವಾಗಿದೆ. ಈ ಜಾಗ ತಮ್ಮದೆಂದು ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿಯವರು ಕೋರ್ಟ್​ನಲ್ಲಿ ದಾವೆ ಹೂಡಿದ್ದರು. ಕೋರ್ಟ್​ನಿಂದ ಆದೇಶ ತಂದ ಹಿನ್ನೆಲೆಯಲ್ಲಿ ಬೇಲೀಫರು ಪೊಲೀಸರ ಸಮೇತ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಕರು, ಸ್ಥಳೀಯ ಮುಖಂಡರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

    ಕನಿಷ್ಠ ಪಕ್ಷ ಈ ವರ್ಷದ ಶೈಕ್ಷಣಿಕ ಚಟುವಟಿಕೆ ಮುಗಿಯುವವರೆಗೂ ಅವಕಾಶ ಕೊಡಿ ಎಂದು ಆಗ್ರಹಿಸಿದರು. ಆದರೂ ಕೇಳದೆ ಶಾಲೆಯಲ್ಲಿನ ಸಾಮಗ್ರಿ ಹೊರ ಹಾಕಿ ನಮ್ಮನ್ನು ಬೀದಿ ಪಾಲು ಮಾಡಿದ್ದಾರೆ ಎಂದು ಶಾಲೆ ಶಿಕ್ಷಕರು ಅಳುಲುತೋಡಿಕೊಂಡರು.

    'ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ' ಬಳಿ ಬಿಗುವಿನ ವಾತಾವರಣ: ವಿದ್ಯಾರ್ಥಿಗಳ ಗೋಳಾಟಇದೇ ವಿಚಾರವಾಗಿ ಶಾಲಾ ಆವರಣದ ಬಳಿ ಬಿಗುವಿನ ವಾತವರಣ ಸೃಷ್ಟಿಯಾಗಿದೆ. ಶಾಲೆ ಖಾಲಿ ಮಾಡಲ್ಲ ಎಂದು ಪಟ್ಟು ಹಿಡಿದ ಮಕ್ಕಳು ಕಣ್ಣೀರಿಡುತ್ತ ಬಾಯಿ ಬಡಿದುಕೊಳ್ಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸ್ಥಳದಲ್ಲಿ ಎಸಿಪಿ ನೇತೃತ್ವದಲ್ಲಿ ಪೊಲೀಸ್​ ಬಂದೋಬಸ್ತ್ ಕಲ್ಪಿಸಲಾಗಿದೆ.

    ಇತ್ತ ಸದ್ಯ ಶಾಲೆಯ ಜಾಗ ಬಿಡುವಂತೆ ಗಾಂಧಿವಾಡ ಕೋ ಆಪರೇಟಿವ್​ ಸೊಸೈಟಿ ಖೊಟ್ಟಿ ದಾಖಲೆ ಸೃಷ್ಟಿಸಿ ದಾವೆ ಹೂಡಿತ್ತು. ಶಾಲೆ ಖಾಲಿ ಮಾಡುವಂತೆ ಕೋರ್ಟ್​ ಹೇಳಿದೆ ಎಂದು ಸೊಸೈಟಿಯವರು ಹೇಳುತ್ತಿದ್ದಾರೆ. ಆದೇಶದಲ್ಲಿ ಶಾಲಾ ಕಟ್ಟಡ ಖಾಲಿ ಮಾಡುವಂತೆ ನಮೂದಿಲ್ಲ‌. ಒತ್ತಾಯ ಪೂರ್ವಕವಾಗಿ ಪೊಲೀರನ್ನು ಕರೆತಂದು ಶಾಲೆ ಖಾಲಿ ಮಾಡಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಕಾಂಗ್ರೆಸ್​: ಸಚಿವರ ಸ್ಫೋಟಕ ಹೇಳಿಕೆ

    ಸಿಐಡಿಗೆ ಸಿಡಿ ಕೇಸ್​! ಷಡ್ಯಂತ್ರ ಮಾಡಿದ್ದವರನ್ನ ಜೈಲಿಗೆ ಕಳಿಸೋದೇ ನನ್ನ ಗುರಿ: ಜಾರಕಿಹೊಳಿ

    ಸೊಸೆಯನ್ನ ಕೊಂದು ಮಾವ ಆತ್ಮಹತ್ಯೆ! ಊಟಕ್ಕೆ ಬಂದ ಮಗನಿಗೆ ಕಾದಿತ್ತು ಆಘಾತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts