More

    ಉಚಿತ ತರಬೇತಿಗೆ ಅರ್ಜಿ ಆಹ್ವಾನ; ನಿರುದ್ಯೋಗಿ ಯುವಕ, ಯುವತಿಯರಿಗೆ ಅವಕಾಶ

    ಹರಿಹರ: ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೊಮಾ, ಬಿಇ ಪೂರೈಸಿದ 18ರಿಂದ 35 ವರ್ಷದೊಳಗಿನ ಯುವಕ, ಯುವತಿಯರಿಗೆ ಇಲ್ಲಿನ ಕೆಎಸ್‌ಆರ್‌ಟಿಸಿ ಡಿಪೋ ಎದುರಿನಲ್ಲಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎರಡು ತಿಂಗಳು ತಾಂತ್ರಿಕ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

    ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಕಾರ್ಯಾಗಾರ ಆಯೋಜಿಸಿದ್ದು, ಎಲ್ಲ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

    ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಶಿಷ್ಯ ವೇತನ ನೀಡಲಾಗುವುದು. ಉಳಿದವರಿಗೆ ಬಸ್ ಪಾಸ್ ಶುಲ್ಕ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿ ಆದವರಿಗೆ 260 ಗಂಟೆಗಳ ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್, ಸಿಎನ್‌ಸಿ ಆಪರೇಟರ್ ಟರ್ನಿಂಗ್, ಸಿಎನ್‌ಸಿ ಪ್ರೋಗ್ರಾಮರ್ ಮತ್ತು ಕನ್‌ವೆನ್‌ಷನಲ್ ಟರ್ನಿಂಗ್ ಮಶೀನ್ ಆಪರೇಟರ್, ಮಿಲ್ಲಿಂಗ್ ಮಶೀನ್ ಆಪರೇಟರ್, ಸರ್ಫೇಸ್ ಗ್ರೈಂಡಿಂಗ್ ಮಶೀನ್ ಆಪರೇಟರ್ ತರಬೇತಿ. ಡಿಪ್ಲೊಮಾ, ಬಿಇ ಆದವರಿಗೆ ಡಿಸೈನರ್ ಮೆಕಾನಿಕಲ್ ಮತ್ತು ಪ್ರೊಡಕ್ಷನ್ ಇಂಜಿನಿಯರ್ ತರಬೇತಿ ನೀಡಲಾಗುವುದು.
    ಡಿ.31 ಅರ್ಜಿ ಸಲ್ಲಿಸಲು ಕೊನೆಯ ದಿನ ಎಂದು ಪ್ರಾಚಾರ್ಯ ಲಕ್ಷಣ್ ನಾಯ್ಕ ತಿಳಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts